ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada: ಉಸ್ತುವಾರಿ ಸ್ನೇಹಿತ್‌ ವಿರುದ್ಧ ಕಾರ್ತಿಕ್ -ತನಿಷಾ ಕೆಂಡ!

Published 6 ಡಿಸೆಂಬರ್ 2023, 6:41 IST
Last Updated 6 ಡಿಸೆಂಬರ್ 2023, 6:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಗಂಧರ್ವರು ಮತ್ತು ರಕ್ಕಸರ ಮೇಲಾಟಗಳು ನಡೆಯುತ್ತಿವೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್‌ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ, ಮೈಕಲ್, ಪವಿ ಎಲ್ಲರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ.

ಗಂಧರ್ವರ ಗುಂಪಿನ ಇಬ್ಬರು ಸದಸ್ಯರು ಕುರ್ಚಿಯಲ್ಲಿ ಕೂತಿದ್ದಾರೆ. ಅವರನ್ನು ಹೇಗಾದರೂ ಕುರ್ಚಿಯಿಂದ ಮೇಲೆಳುವಂತೆ ಮಾಡುವ ಸವಾಲನ್ನು ರಕ್ಕಸರ ಗುಂಪಿಗೆ ನೀಡಲಾಗಿತ್ತು. ರಕ್ಕಸರ ಗುಂಪಿನ ಸದಸ್ಯರು ಗಂಧರ್ವರ ಮೇಲೆ ನೀರು ಸೋಕಲಾರಂಭಿಸಿದರು. ಈ ಹಂತದಲ್ಲಿ ತುಕಾಲಿ ಸೀಟಿನಿಂದ ಎದ್ದರು ಎಂದು ರಕ್ಕಸರ ಗುಂಪಿನ ಸದಸ್ಯರು ಕೂಗಲಾರಂಭಿಸಿದರು. ಆದರೆ, ಎದ್ದಿಲ್ಲ ಬರೀ ಪಕ್ಕಕ್ಕೆ ಸರಿದಿದ್ದಾರೆ ಎಂಬುದು ಗಂಧರ್ವರ ಗುಂಪಿನ ನಮ್ರತಾ ವಾದ. ನಮ್ರತಾ ವಾದಕ್ಕೆ ಅನುಗುಣವಾಗಿಯೇ ಉಸ್ತುವಾರಿ ಸ್ನೇಹಿತ್‌ ತಮ್ಮ ನಿರ್ಧಾರವನ್ನು ತಿಳಿಸಿದಾಗ ರಕ್ಕಸರ ಗುಂಪಿನ ಸದಸ್ಯರು ಅಕ್ಷರಶಃ ರಕ್ಕಸರಾಗಿ ಬದಲಾಗಿದ್ದಾರೆ. ತನಿಷಾ, ‘ನಮ್ರತಾ ಹೇಳಿದ ಮೇಲೆ ಉಸ್ತುವಾರಿಯ ನಿರ್ಧಾರ ಬದಲಾಗುತ್ತದೆ’ ಎಂದು ಹೇಳಿದ್ದರೆ, ನಮ್ರತಾ, ‘ಹೌದು. ಯಾಕಂದ್ರೆ ನಮ್ರತಾ ಇಂಪಾರ್ಟೆಂಟ್ ಇದ್ದಾಳೆ’ ಎಂದು ಇನ್ನಷ್ಟು ಕೆಣಕಿದ್ದಾರೆ. ತನಿಷಾ ಮತ್ತು ನಮ್ರತಾ ನಡುವಿನ ಜಗಳ ಜಟಾಪಟಿಯ ಹಂತಕ್ಕೂ ಹೋಗಿದೆ.

ಇದೇ ಸಂದರ್ಭದಲ್ಲಿ ‘ನ್ಯಾಯವಾಗಿ ಉಸ್ತುವಾರಿ ಮಾಡಲಿಕ್ಕೆ ಬರದಿದ್ದರೆ ಬಿಟ್ಟು ಹೋಗ್ತಿರ್ಬೇಕು’ ಎಂದು ಸ್ನೇಹಿತ್‌ ವಿರುದ್ಧ ಕಾರ್ತಿಕ್ ಗುಡುಗಿದ್ದಾರೆ.

ಎರಡೂ ತಂಡವನ್ನು ಸಮನಾಗಿ ಕಾಣಬೇಕಿದ್ದ ಉಸ್ತುವಾರಿ ಸ್ನೇಹಿತ್ ಒಂದು ಕಡೆ ವಾಲಿಕೊಂಡರಾ? ಅಥವಾ ಅವರು ತೆಗೆದುಕೊಂಡ ನಿರ್ಧಾರ ನ್ಯಾಯಯುತವಾಗಿಯೇ ಇತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT