ಭಾನುವಾರ, ಏಪ್ರಿಲ್ 2, 2023
33 °C

ಬಿಗ್‌ ಬಾಸ್‌ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ: ಟ್ರೆಂಡ್‌ ಆಯ್ತು #DivyaUruduga

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮತ್ತು ನಾಳೆ ಫೈನಲ್ ನಡೆಯಲಿದೆ.

ರೂಪೇಶ್‌ ರಾಜಣ್ಣ, ರೂಪೇಶ್‌ ಶೆಟ್ಟಿ, ರಾಕೇಶ್‌ ಅಡಿಗ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್‌ ಫಿನಾಲೆಗೆ ಪ್ರವೇಶಿಸಿದ್ದು, ಇವರಲ್ಲಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಯಾರಾಗಬಹುದು ಎಂಬುದು ಕುತೂಹಲ ಕೆರಳಿಸಿದೆ.

#DivyaUruduga #RoopeshShetty #RakeshAdiga #RoopeshRajanna #DeepikaDas ಹ್ಯಾಶ್‌ಟ್ಯಾಗ್‌ನಡಿಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಅನೇಕರು ಅಭಿಯಾನಕ್ಕೆ ಸಾಥ್ ನೀಡುತ್ತಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ವ್ಯಕ್ತಪಡಿಸಿರುವ ಅಭಿಪ್ರಾಯದಂತೆ ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿ ಏರ್ಪಟಿದೆ.

ವಿಶೇಷ ಎಂದರೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಮಹಿಳಾ ಸ್ಪರ್ಧಿ ಗೆದ್ದಿದ್ದು ಒಂದೇ ಬಾರಿ. ಈ ಬಾರಿ ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ಫಿನಾಲೆ ತಲುಪಿರುವ ಕಾರಣ ಇವರಿಬ್ಬರಲ್ಲಿ ಒಬ್ಬರು ವಿನ್ನರ್‌ ಆಗಲಿ ಎಂದು ಮಹಿಳಾ ಅಭಿಮಾನಿಗಳ ಅಭಿಪ್ರಾಯ. ಅಂತಿಮವಾಗಿ ಯಾರು ವಿನ್ನರ್ ಆಗ್ತಾರೆ ಎಂದು ಶನಿವಾರ ಅಧಿಕೃತವಾಗಿ ಪ್ರಕಟವಾಗಲಿದೆ. ಕಲರ್ಸ್ ಕನ್ನಡದಲ್ಲಿ ಇಂದು ಮತ್ತು ನಾಳೆ ರಾತ್ರಿ 7:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಬಾರಿ ‘ಬಿಗ್ ಬಾಸ್ ಒಟಿಟಿ’ ಮೊದಲ ಬಾರಿಗೆ ಆರಂಭ ಆಯಿತು. 45 ದಿನಗಳ ಕಾಲ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯಲ್ಲಿ ಕಳೆದಿದ್ದರು. ಇಲ್ಲಿಂದ ನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಟಿವಿ ಸೀಸಿನ್‌ಗೆ ಕಾಲಿಟ್ಟಿದ್ದರು. ಈ ಬಾರಿ ಪ್ರವೀಣರ ಜೊತೆ ನವೀನರು ಎಂಬ ತಂತ್ರದ ಮೊರೆ ಹೋಗಲಾಗಿತ್ತು. 9 ನವೀನರು ಹಾಗೂ 9 ಹಳೆಯ ಸ್ಪರ್ಧಿಗಳು ಬಂದಿದ್ದರು. ಸದ್ಯ ಬಿಗ್ ಬಾಸ್ ಮನೆಯಲ್ಲಿ 5 ಸ್ಪರ್ಧಿಗಳಿದ್ದಾರೆ. ಈ ಪೈಕಿ ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ. ಬಿಗ್ ಬಾಸ್ ಗೆದ್ದವರಿಗೆ ₹50 ಲಕ್ಷ ನಗದು ಹಾಗೂ ಟ್ರೋಫಿ ಸಿಗಲಿದೆ.

ಮಧ್ಯರಾತ್ರಿ ಹೊರಬಿದ್ದ ಆರ್ಯವರ್ಧನ್...

ಬಿಗ್ ಬಾಸ್ 9ನೇ ಆವೃತ್ತಿಯ 14ನೇ ವಾರದ ಮಧ್ಯಭಾಗದಲ್ಲಿ ಒಬ್ಬರ ಎಲಿಮಿನೇಟ್ ಆಗಿದ್ದು, ಕಾರ್ಯಕ್ರಮಕ್ಕೆ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದರು.

ಹೌದು, ಯಶಸ್ವಿಯಾಗಿ 13 ವಾರ ದಾಟಿ 14ನೇ ಮತ್ತು ಅಂತಿಮವಾರಕ್ಕೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಮನೆಯಿಂದ ಹೊರಹೋಗಿದ್ದರು.

94ನೇ ದಿನ ಮಧ್ಯರಾತ್ರಿ ವಿಶಿಷ್ಟ ರೀತಿಯಲ್ಲಿ ಎಲಿಮಿನೇಶನ್ ಪ್ರಕ್ರಿಯೆ ನಡೆಸಿದ್ದ ಬಿಗ್ ಬಾಸ್, ಆರ್ಯವರ್ಧನ್ ಅವರನ್ನು ಹೊರಗೆ ಕಳುಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು