ಮಂಗಳವಾರ, ಸೆಪ್ಟೆಂಬರ್ 21, 2021
22 °C

Bigg Boss 8: ಮಂಜು ಪಾವಗಡ ಅವರ ಅಪರೂಪದ ಆಸೆ ಈಡೇರಿಸಿದ ಬಿಗ್ ಬಾಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಫೈನಲಿಸ್ಟ್‌ಗಳ ಪೈಕಿ ಒಬ್ಬರಾದ ಮಂಜು ಪಾವಗಡ ಅವರ ಅಪರೂಪದ ಆಸೆ ಈಡೇರಿದೆ. ಸ್ವತಃ ಶಿವರಾಜ್ ಕುಮಾರ್ ಅವರು ಮಂಜು ಪಾವಗಡ ಅವರಿಗೆ ಶುಭ ಕೋರಿ ವಿಡಿಯೊ ಸಂದೇಶ ಕಳುಹಿಸಿದ್ದಾರೆ.

ಅಂತಿಮ ವಾರ ಬಿಗ್ ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ಅವರಿಗೆ ಇದುವರೆಗೆ ಈಡೇರದ ಆಸೆ ಪೂರೈಸುವುದಾಗಿ ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ಕಿವಿ ಆಕೃತಿಯನ್ನು ಇರಿಸಿ ಪ್ರತಿಯೊಬ್ಬರು ತಮ್ಮ ಆಸೆಯನ್ನು ಅಲ್ಲಿ ಹೇಳಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಈ ಸಂದರ್ಭ, ಮನೆಯ ಟಾಪ್ ಕಂಟೆಂಡರ್‌ಗಳಲ್ಲಿ ಒಬ್ಬರಾದ ಮಂಜು ಪಾವಗಡ ಅವರು, ನನಗೆ ಶಿವರಾಜ್ ಕುಮಾರ್ ಅವರೆಂದರೆ ತುಂಬಾ ಇಷ್ಟ ಫಿನಾಲೆಗೂ ಮುನ್ನ ಅವರ ಆಶೀರ್ವಾದ ಸಿಕ್ಕರೆ ನನಗೆ ತುಂಬಾ ಖುಷಿಯಾಗುತ್ತದೆ. ಅವರಿಂದ ಒಂದು ಪದದ ವಿಡಿಯೊ ಸಂದೇಶ ಕಳುಹಿಸಿಕೊಡಿ ಬಿಗ್ ಬಾಸ್ ಪ್ಲೀಸ್ ಎಂದು ಮನವಿ ಮಾಡಿದ್ದರು.

ಅದಾದ ಬಳಿಕ, ಮತ್ತೆ ಕಿವಿ ಬಳಿ ಬಂದು, ಹೇಳೋದು ಏನೊ ಹೇಳಿಬಿಟ್ಟೆ. ಆದರೆ, ಅದು ತಪ್ಪೋ ಸರಿಯೋ ಗೊತ್ತಿಲ್ಲ. ತುಂಬಾ ಭಯವಾಗುತ್ತಿದೆ. ತಪ್ಪಾಗಿದ್ದರೆ ಕ್ಷಮಿಸಿಬಿಡಿ ಬಿಗ್ ಬಾಸ್ ಎಂದಿದ್ದರು.

ಮಂಜು ಆಸೆ ಪೂರೈಸಿದ ಶಿವಣ್ಣ: ಮಜಾಭಾರತ ವೇದಿಕೆ ಮೂಲಕ ಗುರುತಿಸಿಕೊಂಡಿರುವ ಹಾಸ್ಯ ಕಲಾವಿದ ಮಂಜು ಪಾವಗಡ ಅವರಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಿರಾಸೆ ಮಾಡಲಿಲ್ಲ. ‘ಹಾಯ್ ಮಂಜು.. ಬಹಳ ಖುಷಿಯಾಯ್ತು ನೀವು ಬಿಗ್ ಬಾಸ್ ಫೈನಲ್‌ಗೆ ಬಂದಿದ್ದು.. ಗೆದ್ದು ಬನ್ನಿ. ಯಾರೆಲ್ಲ ಫೈನಲ್‌ಗೆ ಬಂದಿದ್ದೀರೊ ಅವರೆಲ್ಲರೂ ಆಲ್ ದಿ ಬೆಸ್ಟ್.. ಮಂಜು ಒನ್ಸ್ ಅಗೇನ್ ಲವ್ ಯೂ.. ಆಲ್ ದಿ ಬೆಸ್ಟ್’ ಎಂದು ಶಿವಣ್ಣ ಶುಭ ಕೋರಿದ್ದಾರೆ.

ಶಿವಣ್ಣನ ವಿಡಿಯೊ ಸಂದೇಶ ಬರುತ್ತಿದ್ದಂತೆ ಮನೆಯ ಸದಸ್ಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿ ಸಂತಸ ಹಂಚಿಕೊಂಡರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು