ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada | ವಿನಯ್‌–ಪ್ರತಾಪ್‌ ಮಾತಿನ ಸಮರ: ಭುಗಿಲೆದ್ದ ಅಸಮಾಧಾನ

Published 8 ಜನವರಿ 2024, 7:48 IST
Last Updated 8 ಜನವರಿ 2024, 7:48 IST
ಅಕ್ಷರ ಗಾತ್ರ

ಬಿಗ್‌ಬಾಸ್‌ ಮನೆಯಲ್ಲಿ ಹದಿಮೂರು ವಾರಗಳ ಸುದೀರ್ಘ ಅವಧಿ ಕಳೆದು ಹದಿನಾಲ್ಕನೇ ವಾರಕ್ಕೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ವಾರದ ಆರಂಭದಲ್ಲಿಯೇ ಮನೆಮಂದಿಯ ಅಸಮಾಧಾನದವು ಭುಗಿಲೆದಿದ್ದು, ಮಾತಿನ ಜಟಾಪಟಿಗೆ ಕಾರಣವಾಗಿದೆ.

ದೊಡ್ಮನೆಯಲ್ಲಿ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವಿನಯ್‌, ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. ‘ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಇಂಥ ಟೀಕೆಗಳಿಗೆ ಸಮಾಧಾನವಾಗಿಯೇ ಉತ್ತರಿಸುತ್ತಿದ್ದ ಡ್ರೋನ್‌ ಪ್ರತಾಪ್ ಈ ಬಾರಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಧ್ವನಿ ಏರಿಸಿ ವಿನಯ್‌ ವಿರುದ್ಧ ಮಾತಾಡಿದ್ದಾರೆ.

‘ನೀವು ಅಂದಹಾಗೆಲ್ಲ ಅನ್ನಿಸಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಪರಿಣಾಮ ನೆಟ್ಟಗಿರುವುದಿಲ್ಲ’ಎಂದು ಮರುತ್ತರ ನೀಡಿದ್ದಾರೆ ಪ್ರತಾಪ್.

ಮುಂದುವರಿದು ವಿನಯ್, ‘ನೀನು ಆಡ್ತಿರೋ ನಾಟಕ ನಂಗೆ ಗೊತ್ತಿಲ್ವೇನೋ? ಏನೋ ಮಾಡ್ತೀಯಾ ನೀನು?’ ಎಂದು ಕೂಗಾಡಿದ್ದಾರೆ.

ಪ್ರತಾಪ್ ಕೂಡ ಅಷ್ಟೇ ಗಟ್ಟಿ ಧ್ವನಿಯಲ್ಲಿ, ‘ಸರಿಯಾಗಿ ಮಾತಾಡೋದು ಕಲಿತುಕೊಳ್ಳಿ. ನಾನು ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ’ ಎಂದು ಹೇಳಿದ್ದಾರೆ.

ವಿನಯ್, ‘ನೀನು ನನಗೆ ಹೇಳಿಕೊಡಬೇಕಾಗಿಲ್ಲ. ಹೋಗಲೇ’ಎಂದಿದ್ದಾರೆ. ಸಂಗೀತಾ ಮತ್ತು ತುಕಾಲಿ ಸಂತೋಷ್‌ ಅವರು ಇವರಿಬ್ಬರ ಜಗಳ ತಪ್ಪಿಸಲು ಪ್ರಯತ್ನಿಸುತ್ತಿರುವ ದೃಶ್ಯಗಳು ಜಿಯೊ ಸಿನಿಮಾ ಬಿಡುಗಡೆಮಾಡಿರುವ ವಿಡಿಯೊದಲ್ಲಿದೆ.

ಹಾಗಾದರೆ ಈ ವಾರ ಬಿಗ್‌ಬಾಸ್‌ ಮನೆ ವಿನಯ್ ಮತ್ತು ಪ್ರತಾಪ್‌ ನಡುವಿನ ಮಾತಿನ ಯುದ್ಧಕ್ಕೆ ಸಾಕ್ಷಿಯಾಗಲಿದೆಯಾ? ಮನೆಯ ಇತರೆ ಸದಸ್ಯರು ಯಾರ ಪರ ನಿಂತುಕೊಳ್ಳುತ್ತಾರೆ? ಫಿನಾಲೆಗೆ ಕೆಲವೇ ಹೆಜ್ಜೆಗಳ ದೂರದಲ್ಲಿರುವಾಗ ಮತ್ತೆ ಏರುತ್ತಿರುವ ಕಾವು ಮನೆಯ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ? ಕಾದು ನೋಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT