ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯತ್ತ ಮುಖಮಾಡಿದ ನಿರ್ದೇಶಕ ಸಿಂಪಲ್‌ ಸುನಿ

Published 7 ಸೆಪ್ಟೆಂಬರ್ 2023, 23:30 IST
Last Updated 7 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ನಿರ್ದೇಶಕ ಸುನಿ ಇದೀಗ ಕಿರುತೆರೆಗೂ ಹೆಜ್ಜೆ ಇಟ್ಟಿದ್ದಾರೆ. ಉದಯ ಟಿ.ವಿಯಲ್ಲಿ ಆರಂಭವಾಗಲಿರುವ ‘ಶಾಂಭವಿ’ ಎನ್ನುವ ಧಾರಾವಾಹಿಯನ್ನು ಸುನಿ ನಿರ್ಮಿಸಿ,  ನಿರ್ದೇಶಿಸುತ್ತಿದ್ದಾರೆ. 

‘ಶಿವಗಾಮಿ’ ಸಾವಿರಾರು ಕೋಟಿ ಆಸ್ತಿಯ ಒಡತಿ. ಶ್ರೀ ಶಾಂಭವಿ ಶಿಕ್ಷಣ ಸಂಸ್ಥೆ ಜೊತೆ ಇನ್ನೂ ಹಲವು ಉದ್ಯಮಗಳನ್ನು ನಡೆಸುವಾಕೆ. ಅವಳ ಅಣ್ಣ ಹರಿಪ್ರಸಾದ್. ಈ ಕುಟುಂಬದ ಸುತ್ತ ಧಾರಾವಾಹಿಯ ಕಥೆ ಇದೆ ಎಂದಿದೆ ತಂಡ. ಸುನಿ ಸಿನಿಮಾಸ್ ಸಂಸ್ಥೆಯ ಅಡಿಯಲ್ಲಿ ‘ಶಾಂಭವಿ’ ನಿರ್ಮಾಣವಾಗುತ್ತಿದೆ. ವೈಬಿಆರ್‌ ಮನು ಛಾಯಾಚಿತ್ರಗ್ರಹಣ, ಪರಂ ಅವರ ಸಂಕಲನ ಈ ಧಾರಾವಾಹಿಗಿದೆ. ಜಗದೀಶ್ ದೊಡ್ಡೇರಿ ಸಹ-ನಿರ್ದೇಶನ, ಪುಗಳ್ಮಣಿ ಅವರ ಕಥೆ ಚಿತ್ರಕಥೆ, ರಾಧಾ ವೆಂಕಟ್‌ ಅವರ  ಸಂಭಾಷಣೆ, ನಾಗೇಂದ್ರ ಪ್ರಸಾದ್ ಅವರ ಸಂಗೀತ ಮತ್ತು ಸಾಹಿತ್ಯ ಈ ಧಾರಾವಾಹಿಗಿದೆ.

‘ಶಾಂಭವಿ’ಯ ಪಾತ್ರವನ್ನು ಬೇಬಿ ರಚನಾ ಟಿ.ಬಿ ನಿರ್ವಹಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಐಶ್ವರ್ಯ ಸಿಂಧೋಗಿ, ಹರೀಶ್ ಟಿವಿ, ವಿನಯ ಗೌಡ, ಅಂಬುಜಾಕ್ಷಿ ನಟಿಸಿದ್ದು, ಪೂಜಿತಾ, ಡಾಲಿ ರಾಜೇಶ್, ಸೂರ್ಯ ಕುಂದಾಪುರ, ರೋಹಿತ್ ನಾಯರ್, ಶ್ಯಾಮಲಮ್ಮ ಮುಂತಾದವರು ತಾರಾಗಣದಲ್ಲಿದ್ದಾರೆ. ಸೆ.11ರಿಂದ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT