ನಟ, ನಿರೂಪಕ ವಿಜಯ್ ಸೇತುಪತಿ ಅವರು ನಡೆಸಿಕೊಡುತ್ತಿದ್ದ ತಮಿಳು ಬಿಗ್ಬಾಸ್ ಸೀಸನ್-9ರ ವಿನ್ನರ್ ಆಗಿ ನಟಿ ದಿವ್ಯಾ ಗಣೇಶನ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ದಿವ್ಯಾ ಗಣೇಶನ್ ಅವರು ಬಿಗ್ಬಾಸ್ ಟ್ರೋಫಿ ಜೊತೆಗೆ ₹50 ಲಕ್ಷ ನಗದು ಮತ್ತು ಬ್ರ್ಯಾಂಡ್ ನ್ಯೂ ಮಾರುತಿ ಸುಜುಕಿ ಕಾರನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ. ಶಬರಿನಾಥನ್ ಅವರು ಮೊದಲ ರನ್ನರ್ ಅಪ್, ವಿಕ್ರಮ್ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಅರೋರಾ ಅವರು ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
.Bigg Boss Kannada: ಗಿಲ್ಲಿ ಗೆಲುವನ್ನು ಸಂಭ್ರಮಿಸಿದ ಅಭಿಮಾನಿಗಳು .
2025ರ ಅಕ್ಟೋಬರ್ 5ರಂದು ತಮಿಳು ಬಿಗ್ಬಾಸ್ ಸೀಸನ್-9 ಆರಂಭವಾಗಿತ್ತು.

ಆರಂಭದಲ್ಲಿ 20 ಸ್ಪರ್ಧಿಗಳು ಮನೆ ಒಳಗೆ ಪ್ರವೇಶಿಸಿದ್ದರು. ದಿವ್ಯಾ ಅವರು ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರೂ ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿ, ಅನೇಕ ಸವಾಲುಗಳನ್ನು ಸ್ವೀಕರಿಸಿ ವಿನ್ನರ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಟನೆ ಮತ್ತು ರೂಪದರ್ಶಿಯಾಗಿ ಜನಪ್ರಿಯತೆ ಗಳಿಸಿದ್ದ ದಿವ್ಯಾ ಅವರು, ಬಿಗ್ಬಾಸ್ ಮನೆಯ ಟಾಸ್ಕ್ಗಳ ಜೊತೆ ಮನರಂಜನೆಯನ್ನೂ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.