ಭಾನುವಾರ, ಜೂನ್ 20, 2021
28 °C

ಬಿಗ್‌ಬಾಸ್: ತಿಂದ ಏಟಿಗೆ ಪತ್ನಿ ಹೆಸರನ್ನೇ ಮರೆತರಾ ರಘು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಗ್‌ಬಾಸ್‌ ಮನೆಯಿಂದ ಹೊರಬಂದಿರುವ ಸ್ಪರ್ಧಿ ರಘುಗೆ ಅವರ ಪತ್ನಿ ಸೌಟು ಹಾಗೂ ಲಟ್ಟಣಿಗೆಯಿಂದ ಹೊಡೆದಿದ್ದಾರೆ! ಏಟು ತಿಂದಿರುವ ರಘು ಅವರು ತಮ್ಮ ಹೆಂಡತಿ ಹೆಸರನ್ನೇ ಮರೆತಿರುವಂತಿದೆ. ಇಂತಹ ಒಂದು ಫೋಟೊವನ್ನು ಸ್ವತಃ ರಘು ಅವರೇ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದು, ‘ಸ್ನೇಹಿತರೇ ನಾನು ಸುರಕ್ಷಿತವಾಗಿ ವಾಪಸ್‌ ಬಂದಿದ್ದೇನೆ. ದಿವ್ಯಾ ಸ್ಪೋರ್ಟಿವ್‌ ಆಗಿ ತೆಗೆದುಕೊಂಡಿದ್ದಾಳೆ’ ಎಂದು ಉಲ್ಲೇಖಿಸಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ವೈಷ್ಣವಿ ಹಾಗೂ ರಘು ಸ್ನೇಹಿತರಾಗಿದ್ದರು. ಈ ಕುರಿತು ಇತರೆ ಸ್ಪರ್ಧಿಗಳೇ ರಘು ಕಾಲೆಳೆದಿದ್ದರು. ಜೊತೆಗೆ ರಘು ಪತ್ನಿ ವಿದ್ಯಾಶ್ರೀ ಅವರೂ ವಾಯ್ಸ್‌ನೋಟ್‌ ಕಳುಹಿಸಿ, ‘ನಿನ್ನ ಜೊತೆಗೆ ಜಗಳವಾಡುವುದನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಮನೆಯೊಳಗೆ ನಡೆಯುವ ವಿಷಯವನ್ನು ಸ್ಪೋರ್ಟಿವ್‌ ಆಗಿ ತೆಗೆದುಕೊಳ್ಳುತ್ತೇನೆ’ ಎಂದಿದ್ದರು. ಇದೀಗ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಕೂಡಲೇ ಪತ್ನಿಯ ಜೊತೆಗಿರುವ ಫೋಟೊವನ್ನು ರಘು ಅಪ್‌ಲೋಡ್‌ ಮಾಡಿದ್ದಾರೆ. ತಮಾಷೆಗಾಗಿ ಮೂಗಿಗೆ ಗಾಯಗಳಾಗಿರುವಂತೆ ಬಣ್ಣ ಹಚ್ಚಿ, ತಲೆಗೆ ಏಟು ಬಿದ್ದಿರುವಂತೆ ಬ್ಯಾಂಡೇಜ್ ಅಂಟಿಸಿ ಫೋಟೊಗೆ ಪೋಸ್‌ ನೀಡಿದ್ದಾರೆ. ಇದಕ್ಕೆ ಇತರೆ ಸ್ಪರ್ಧಿಗಳೂ ಪ್ರತಿಕ್ರಿಯೆ ನೀಡಿದ್ದು, ‘ವಿದ್ಯಾ ಸ್ಪೋರ್ಟಿವ್‌ ಆಗೇ ತೆಗೆದುಕೊಂಡಿದ್ದಾರೆ’ ಎಂದು ನಿಧಿ ಸುಬ್ಬಯ್ಯ ಕಮೆಂಟ್‌ ಮಾಡಿದ್ದಾರೆ.

ಇನ್ನು ಪತ್ನಿಯ ಹೆಸರನ್ನು ದಿವ್ಯಾ ಎಂದು ರಘು ಉಲ್ಲೇಖಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ‘ಮತ್ತೊಮ್ಮೆ ಏಟು ತಿನ್ನುವ ಮೊದಲು ಈ ತಪ್ಪು ಸರಿಪಡಿಸಿ’, ‘ಮತ್ತೆ ರೌಂಡ್‌ 2 ಪ್ರಾರಂಭವಾಗುತ್ತೆ ಬ್ರೊ’, ‘ದಿವ್ಯಾ ಅಥವಾ ವಿದ್ಯಾ’, ‘ರಘು ಇನ್ನೂ ಬಿಗ್‌ಬಾಸ್‌ ಮನೆಯಿಂದ ಹೊರಬಂದಂತಿಲ್ಲ’ ಎಂದು ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು