ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶಿಜಾನ್‌ ಖಾನ್ ಬಂಧನ 

Last Updated 26 ಡಿಸೆಂಬರ್ 2022, 4:34 IST
ಅಕ್ಷರ ಗಾತ್ರ

ಪಾಲ್ಘರ್‌/ಮುಂಬೈ: ನಟಿ, ಮಾಡೆಲ್‌ ತುನಿಷಾ ಶರ್ಮಾ ಅವರು ತಮ್ಮ ಧಾರಾವಾಹಿಯೊಂದರ ಶೂಟಿಂಗ್ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ, ಶರ್ಮಾ ಅವರ ಸಹ ನಟ ಶೀಜನ್‌ ಮೊಹಮ್ಮದ್‌ ಖಾನ್‌ ಅವರನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ತುನಿಷಾ ಅವರ ತಾಯಿ ನೀಡಿರುವ ದೂರಿನ ಆಧಾರ ಮೇಲೆಶೀಜನ್‌ ಖಾನ್‌ ಅವರ ಮೇಲೆ ಐಪಿಸಿ ಸೆಕ್ಷನ್‌ 306ರಡಿ (ಆತ್ಮಹತ್ಯೆ ಕುಮ್ಮಕ್ಕು) ಪ್ರಕರಣ ದಾಖಲು ಮಾಡಲಾಗಿದೆ.ಶೀಜನ್‌ ಖಾನ್‌ ಅವರನ್ನು ವಸಾಯಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಖಾನ್‌ ಅವರನ್ನು ಡಿ. 28ರ ವರೆಗೆ ಪೊಲೀಸ್‌ ವಶಕ್ಕೆ ನೀಡಿತು.

ವರದಿಗಳ ಪ್ರಕಾರ, ತುನಿಷಾ (21) ಮತ್ತು ಶೀಜನ್‌ ಖಾನ್‌ (27) ಅವರ ಮಧ್ಯೆ ಪ್ರೇಮ ಸಂಬಂಧ ಇತ್ತು. ಆದರೆ, 15 ದಿನಗಳ ಹಿಂದಷ್ಟೇ ಇಬ್ಬರು ತಮ್ಮ ಪ್ರೇಮ ಸಂಬಂಧವನ್ನು ಕಡಿದುಕೊಂಡಿದ್ದರು ಎನ್ನಲಾಗಿದೆ.

‘ತುನಿಷಾ ಹಾಗೂಶೀಜನ್‌ ಖಾನ್‌ ಅವರ ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಅನೈತಿಕ ಸಂಬಂಧ, ಬ್ಲಾಕ್‌ಮೇಲ್‌ ಅಥವಾ ಲವ್‌ ಜಿಹಾದ್‌ ರೀತಿಯ ಆಯಾಮ ಇರುವುದು ಇಲ್ಲಿಯವರೆಗೆ ಕಂಡುಬಂದಿಲ್ಲ. ನಾವು ತನಿಖೆ ಮುಂದುವರೆಸಿದ್ದೇವೆ’ ಎಂದು ಸಹಾಯಕ ಪೊಲೀಸ್‌ ಆಯುಕ್ತ ಚಂದ್ರಕಾಂತ್‌ ಜಾದವ್‌ ಅವರು ತಿಳಿಸಿದರು.

ಸರ್‌ ಜೆ.ಜೆ ಆಸ್ಪತ್ರೆಯಲ್ಲಿ ತುನಿಷಾ ಅವರ ಮರಣೋತ್ತರ ಪರೀಕ್ಷೆ ನಡೆಯಿತು. ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಸೋಮವಾರ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದೆ.

‘ಅಲಿ ಬಾಬಾ: ದಾಸ್ತಾನ್‌–ಕೆ–ಕಾಬುಲ್‌’ ಧಾರಾವಾಹಿಯಲ್ಲಿ ತುನಿಷಾ ಹಾಗೂ ಶೀಜನ್‌ ಖಾನ್‌ ಅವರು ಒಟ್ಟಿಗೆ ನಟಿಸುತ್ತಿದ್ದರು.ಶೀಜನ್‌ ಖಾನ್‌ ಅವರು ‘ಫಿತೂರ್‌’ ಹಾಗೂ ‘ಬಾರ್‌ ಬಾರ್‌ ದೇಖೋ’ ಸಿನಿಮಾಗಳಲ್ಲಿ ನಟಿಸಿದ್ದರು. ‘ಭಾರತ್‌ ಕೆ ವೀರ್‌ ಪುತ್ರ– ಮಹಾರಾಣಾ ಪ್ರತಾಪ್‌’ ಧಾರಾವಾಹಿಯಲ್ಲೂ ಅವರು ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT