ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಫೋಟೊ ಶೇರ್ ಮಾಡಿದ ರಾಮಾಯಣ ಧಾರಾವಾಹಿಯ ಸೀತೆ ಪಾತ್ರಧಾರಿ

ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಫೋಟೊಗಳು ವೈರಲ್!
ಅಕ್ಷರ ಗಾತ್ರ

ಬೆಂಗಳೂರು: ದೇಶದ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ ಜನಪ್ರಿಯ ಧಾರಾವಾಹಿ ರಾಮಾಯಣದಲ್ಲಿ ‘ಸೀತೆ‘ ಪಾತ್ರ ನಿರ್ವಹಿಸಿದ್ದ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ನಟಿ ದೀಪಿಕಾ ಚಿಖ್ಲಿಯಾ ಅವರು ರಮಾನಂದ ಸಾಗರ ನಿರ್ದೇಶನದ ರಾಮಾಯಣ ಧಾರಾವಾಹಿಯಲ್ಲಿ ಸೀತೆಯಾಗಿ ಕಾಣಿಸಿಕೊಂಡಿದ್ದರು.

ಪತ್ತಾರ್, ಚೀಖ್, ಭಗವಾನ್ ದಾದಾ ಮತ್ತು ಘರ್ ಸಂಸಾರ್‌ ಎಂಬ ಸಿನಿಮಾಗಳಲ್ಲಿ ದೀಪಿಕಾ ಅವರು ನಟಿಸಿದ್ದರೂ, ರಾಮಾಯಣದ ಸೀತೆ ಪಾತ್ರ ಅವರಿಗೆ ಹೆಚ್ಚಿನ ಪ್ರಸಿದ್ಧಿ ತಂದುಕೊಟ್ಟಿತ್ತು.

ಸಿನಿಮಾವೊಂದರ ಪಾತ್ರ ನಿರ್ವಹಿಸುವ ಸಂದರ್ಭದಲ್ಲಿ ತೆಗೆದಿದ್ದ ಫೋಟೊಗಳನ್ನು ದೀಪಿಕಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕೆಂಪು ಬಣ್ಣದ ಅಂಚಿನ ಕಪ್ಪು ಸೀರೆಯಲ್ಲಿ ನಟಿ ದೀಪಿಕಾ ಮಿಂಚುತ್ತಿದ್ದು, ಫೋಟೊ ಕಂಡ ಅಭಿಮಾನಿಗಳು ರಾಮಾಯಣದ ನಟಿಯ ಅಂದವನ್ನು ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT