ಕನ್ನಡದ ನಟಿ ಸಂಯುಕ್ತಾ ಹೆಗಡೆ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. ಕಿರಿಕ್ ಪಾರ್ಟಿ ಬೆನ್ನಲ್ಲೆ ಬಿಗ್ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟು, ಅರ್ಧಕ್ಕೆ ವಾಪಸ್ ಆದರು.

ಬಿಗ್ಬಾಸ್ 5ನೇ ಆವೃತ್ತಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಸಂಯುಕ್ತಾ ಹೆಗಡೆ, ಸಹ ಸ್ಪರ್ಧಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರು. ಹೀಗಾಗಿ ಸಂಯುಕ್ತಾ ಅವರನ್ನು ಶೋದಿಂದ ಆಚೆ ಕಳುಹಿಸಲಾಗಿತ್ತು. ಇದೀಗ ಮತ್ತೆ ಹಿಂದಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
.Bigg Boss 12 |ಬಿಗ್ಬಾಸ್ ಆರಂಭಕ್ಕೆ ದಿನಗಣನೆ: ಇಲ್ಲಿದೆ ಕುತೂಹಲಕಾರಿ ಮಾಹಿತಿ.
ಈ ಹಿಂದೆ ಕೆಲವೊಂದು ಹಿಂದಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸಂಯುಕ್ತಾ, ಇದೀಗ ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ ಶೋನಲ್ಲಿ ರೆಬೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಈ ಶೋ ಪ್ರಸಾರವಾಗುತ್ತಿದೆ.

ವರುಣ್ ಸೂದ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮದಲ್ಲಿ ಒಟ್ಟು 12 ಮಹಿಳಾ ಸ್ಪರ್ಧಿಗಳಿದ್ದು, ಅವರಿಗೆ ಕಾಲಕ್ಕೆ ತಕ್ಕಂತೆ ಕಠಿಣ ಟಾಸ್ಕ್ಗಳನ್ನು ನೀಡಲಾಗುತ್ತದೆ. ಗೋವಾದ ಕಡಲ ತೀರದಲ್ಲಿ 12 ಸ್ಪರ್ಧಿಗಳು ಹೊಸ ಹೊಸ, ವಿಚಿತ್ರ ಸಾಹಸಕ್ಕೆ ಧುಮುಕಲಿದ್ದಾರೆ. ಈ ಕಾರ್ಯಕ್ರಮವು ಸೆ. 22ರಿಂದಲೇ ಆರಂಭಗೊಂಡಿದೆ. ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ ಶೋ ಅನಿರೀಕ್ಷಿತ ತಿರುವುಗಳು ವೀಕ್ಷಕರಿಗೆ ಸಾಹಸಮಯ ಮನರಂಜನೆಯನ್ನ ನೀಡುತ್ತಿದೆ.
.ಬಿಗ್ಬಾಸ್ ವೀಕ್ಷಕರಿಗೆ ಚಿನ್ನದ ಅವಕಾಶ: ಬಂಗಾರದ ನಾಣ್ಯ ಪಡೆಯಲು ಹೀಗೆ ಮಾಡಿ.
ಸದ್ಯ ರಿಯಾಲಿಟಿ ರಾಣಿಸ್ ಆಫ್ ಜಂಗಲ್ ಸೀಸನ್ 2ರಲ್ಲಿ ಕನ್ನಡದ ನಟಿ ಸಂಯುಕ್ತಾ ಹೆಗಡೆ ಬಲಿಷ್ಠ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾದ ಎರಡು ಪ್ರೋಮೊಗಳು ನೋಡಿದ ವೀಕ್ಷಕರು ದಂಗಾಗಿದ್ದಾರೆ. ಆ ಪ್ರೋಮೊದಲ್ಲಿ ನಿರೂಪಕ ‘ಐ ಬಕೆಟ್ ಚಾಲೆಂಜ್’ ನೀಡಿದ್ದಾರೆ. ಟೇಬಲ್ ಮೇಲೆ ಪ್ರಾಣಿ ಒಂದರ ಕಣ್ಣುಗಳನ್ನು ಇಡಲಾಗಿದೆ. ಅದನ್ನು ತಿನ್ನೋ ಸವಾಲು ಸ್ಪರ್ಧಿಗಳಿಗೆ ನೀಡಲಾಗಿದೆ. ಹೀಗೆ ಟಾಸ್ಕ್ ಮಧ್ಯೆ ಕಣ್ಣುಗಳನ್ನು ತಿಂದ ಕೆಲವರು ಸ್ಥಳದಲ್ಲೇ ವಾಂತಿ ಮಾಡಿಕೊಂಡಿದ್ದಾರೆ.

ಮತ್ತೊಂದು ಟಾಸ್ಕ್ನಲ್ಲಿ ಸ್ಪರ್ಧಿಗಳಿಗೆ ಸ್ಟ್ರಾ ಮೂಲಕ ಗೋಮೂತ್ರ ಕುಡಿಯುವ ಸವಾಲು ನೀಡಿದ್ದಾರೆ. ಆಗ ನಟಿ ಸಂಯುಕ್ತಾ ಹೆಗಡೆ ಹಾಗೂ ಮತ್ತೋರ್ವ ಸ್ಪರ್ಧಿ ಕುಡಿದು ವಾಂತಿ ಮಾಡಿಕೊಂಡಿದ್ದಾರೆ.

ಸಹ ಸ್ಪರ್ಧಿಗಳ ಜೊತೆಗೆ ನಟಿ ಸಂಯುಕ್ತಾ ಹೆಗಡೆ ವಾಗ್ವಾದ

ಈ ಹಿಂದೆ ಬಿಗ್ಬಾಸ್ ಶೋನಲ್ಲಿ ರೆಬೆಲ್ ಆಗಿದ್ದ ಸಂಯುಕ್ತಾ ಹೆಗಡೆ ಈ ಶೋನಲ್ಲಿಯೂ ಕೂಡ ಸಹ ಸ್ಪರ್ಧಿಗಳ ಜೊತೆಗೆ ಜೋರು ಧ್ವನಿಯಲ್ಲಿ ವಾಗ್ವಾದ ನಡೆಸುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಯುಕ್ತಾ ಹೆಗಡೆ ಯಾವ ರೀತಿ ಟಾಸ್ಕ್ ಎದುರಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.