ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ ಈ ನಟಿ. ಇದೀಗ ಕನ್ನಡದ ಜನಪ್ರಿಯ ನಿರೂಪಕಿ, ನಟಿ ಸುಷ್ಮಾ ರಾವ್ ಅವರು ನಟನಾ ಕ್ಷೇತಕ್ಕೆ ಕಾಲಿಟ್ಟು 25 ವರ್ಷಗಳು ಭರ್ತಿಯಾಗಿದೆ. ಇದೇ ಸಂಭ್ರಮವನ್ನು ಅನುಬಂಧ ಅವಾರ್ಡ್ಸ್ 2025ನಲ್ಲಿ ದುಪ್ಪಟ್ಟು ಮಾಡಲಾಗಿದೆ.
.ಮಗುವಿನ ಜೊತೆ ಮಗುವಾದ ಶಿವಣ್ಣ: ಚಂದದ ವಿಡಿಯೊ ಸೆರೆ ಹಿಡಿದ ನಿರೂಪಕಿ ಅನುಶ್ರೀ.ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಅವರು ಚಿತ್ರರಂಗಕ್ಕೆ ಕಾಲಿಟ್ಟು, 25 ವರ್ಷಗಳಾಗಿವೆ. ಇದೇ ಖುಷಿಯಲ್ಲಿದ್ದ ನಟಿಗೆ ವೇದಿಕೆ ಮೇಲೆ ಅಚ್ಚರಿ ಕಾದಿತ್ತು. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸುಷ್ಮಾ ಕೆ ರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಆ ವೇಳೆ ನಟ, ನಿರೂಪಕ ಸೃಜನ್ ಲೋಕೇಶ್ ಅವರು ವೇದಿಕೆಗೆ ಸುಷ್ಮಾ ಕೆ ರಾವ್ ಅವರ ಪತಿ ಹಾಗೂ ಮಗನನ್ನು ಕರೆಸಿದ್ದಾರೆ. ಮಗ, ಪತಿಯನ್ನು ನೋಡುತ್ತಿದ್ದಂತೆ ಸುಷ್ಮಾ ಕೆ ರಾವ್ ಅವರು ಖುಷಿ ಪಟ್ಟಿದ್ದಾರೆ.

ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೊದಲ್ಲಿ, ಸುಷ್ಮಾ ಕೆ ರಾವ್ ಅವರು ಇದೇ ಮೊದಲ ಬಾರಿಗೆ ತಮ್ಮ ಕುಟುಂಬವನ್ನು ಪರಿಚಯಿಸಿದ್ದಾರೆ. ಆಗ ಸೃಜನ್ ಲೋಕೇಶ್ ಅವರು ಸುಷ್ಮಾ ಕೆ ರಾವ್ ಅವರ ಮಗನಿಗೆ , ‘ಅಮ್ಮ, ನಿನಗೆ ಜಾಸ್ತಿ ಹೊಡಿತಾರಾ? ಅಪ್ಪನಿಗೆ ಹೊಡಿತಾರಾ?’ ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಮಗ ಆರ್ಯನ್, ‘ಅಮ್ಮ ನನಗೆ ಹೊಡೆಯುತ್ತಾರೆ’ ಎಂದು ಹೇಳಿದ್ದಾರೆ. ನಂತರ ಸುಷ್ಮಾ ಅವರು, ‘ನಾನು ಯಾವಾಗ ನಿನಗೆ ಪೊರಕೆಯಲಿ ಹೊಡೆದನೋ?’ ಎಂದು ಪ್ರಶ್ನೆ ಮಾಡಿದ್ದಾರೆ. ‘ಕುಟುಂಬದಿಂದಲೇ ನಾನು ಇಲ್ಲಿರೋದು’ ಎಂದು ಸುಷ್ಮಾ ಅವರು ಹೆಮ್ಮೆಯಿಂದ ಹೇಳಿದ್ದಾರೆ. ಇನ್ನು, ಅನುಬಂಧ ಅವಾರ್ಡ್ಸ್ 2025 ಕಾರ್ಯಕ್ರಮವು ಇದೇ ಶನಿ-ಭಾನು-ಸೋಮ ಸಂಜೆ 7ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.