ಅಹಮದಾಬಾದ್: ಸಿಂಹ ಹಾಗೂ ಸಿಂಹಿಣಿಕಾದಾಟದ ಒಂದು ಸಣ್ಣ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೊವನ್ನು ವೈಲ್ಡ್ ಇಂಡಿಯಾ ಟ್ವೀಟ್ ಮಾಡಿದ್ದು, ಇದನ್ನು ಜುಬೆನ್ ಆಶ್ರಾ ಎಂಬುವರ ಪ್ರಕಟಿಸಿದ್ದಾರೆ ಎಂದು ಹೇಳಿದೆ.
ಜುಬೆನ್ ಆಶ್ರಾ ಅವರು ಗುಜರಾತ್ ಬಿಜೆಪಿಯ ನಾಯಕರಾಗಿದ್ದಾರೆ. ಈ ವಿಡಿಯೊವನ್ನು ಗುಜರಾತಿನ ಗೀರ್ ಅರಣ್ಯದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಸಿಂಹಗಳಿಗೆ ಪ್ರಸಿದ್ಧವಾಗಿರುವ ಗಿರ್ ಅರಣ್ಯದಲ್ಲಿ ಸಿಂಹ ಹಾಗೂ ಸಿಂಹಿಣಿಗರ್ಜಿಸುತ್ತ ಕಾದಾಡುತ್ತಿರುವುದನ್ನುಸೆರೆ ಹಿಡಿಯಲಾಗಿದೆ. 22 ಸೆಂಕೆಡ್‌ಗಳ ಈ ಸಣ್ಣ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಾದಾಟವನ್ನು ಕೆಲವರು ಗಂಡ ಹೆಂಡತಿಗೂ ಹೋಲಿಕೆ ಮಾಡುತ್ತ ಟ್ವೀಟ್‌ಗಳನ್ನು ಹಾಕುತ್ತಿದ್ದಾರೆ.
ವೈಲ್ಡ್ ಇಂಡಿಯಾ ಟ್ವೀಟ್ ಖಾತೆಯಲ್ಲಿ ವಿಡಿಯೊವನ್ನು 2.75 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.