ಗುರುವಾರ , ಮಾರ್ಚ್ 23, 2023
30 °C
ಕಾಕನಕೋಟೆಯ ಸಫಾರಿ ಕೇಂದ್ರದಲ್ಲಿ ಎದುರಾದ ಹುಲಿ, ಕರಡಿ

ಕಾಕನಕೋಟೆಯ ಸಫಾರಿ ಕೇಂದ್ರದಲ್ಲಿ ಕರಡಿ ಕಂಡು ಕಾಲ್ಕಿತ್ತ ಹುಲಿರಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಂಪಾಪುರ: ಎಚ್‌.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾ ರಣ್ಯದ ಕಾಕನಕೋಟೆಯ ಸಫಾರಿ ಕೇಂದ್ರದಲ್ಲಿ ಬುಧವಾರ ಸಫಾರಿಗೆ ತೆರಳಿದವರಿಗೆ ಹುಲಿ ಹಾಗೂ ಕರಡಿ ಪರಸ್ಪರ ಎದುರಾಗಿದ್ದ ದೃಶ್ಯ ಕಂಡಿದೆ.

ಅಂತರಸಂತೆ ವಲಯ ವ್ಯಾಪ್ತಿಯಲ್ಲಿರುವ ಕೆರೆಯಲ್ಲಿ ನೀರು ಕುಡಿದು ವಾಪಸ್‌ ತೆರಳುತ್ತಿದ್ದ ಹುಲಿಗೆ ಕರಡಿಯೊಂದು ಎದುರಾಗಿದೆ. ಕರಡಿ ಬರುವುದನ್ನು ಕಂಡ ಹುಲಿಯು ಕೆಲಕಾಲ ಗಮನಿಸಿದೆ. ಹುಲಿ ಬಳಿಗೆ ಬಂದ ಕರಡಿ ತನ್ನ ಕೈಗಳನ್ನು ಎತ್ತಿ ದಾಳಿ ನಡೆಸಲು ಮುಂದಾಗಿದೆ. ಇದರಿಂದ ಭಯಗೊಂಡ ಹುಲಿ ತಾನಿದ್ದ ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಅರಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಹಸಿರು ಆವರಿಸಿದೆ. ಸಫಾರಿಗೆ ತೆರಳಿದವರಿಗೆ ಹೆಚ್ಚಿನ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ.

ಕಾಡಿನಲ್ಲಿ ಹುಲಿಗಿಂತ ಕರಡಿ ಬಲಶಾಲಿ. ಹುಲಿ ಮತ್ತು ಕರಡಿ ಕಾದಾಟಕ್ಕೆ ನಿಂತರೆ ಕರಡಿಯೇ ಗೆಲ್ಲುತ್ತದೆ. ಕರಡಿ ಕಂಡಲ್ಲಿ ಹುಲಿಯು ತಾನಾಗಿಯೇ ಓಡಿ ಹೋಗುತ್ತದೆ ಎಂದು ವನ್ಯಜೀವಿ ಪ್ರೇಮಿ ಸಮೀರ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು