ಶುಕ್ರವಾರ, ಜನವರಿ 22, 2021
27 °C

ನಾಗಪುರ | ಗುಲಾಬಿ ಬಣ್ಣಕ್ಕೆ ತಿರುಗಿದ್ದ ಕೆರೆಯ ನೀರು: ಕಾರಣ ಪತ್ತೆಗೆ ತಜ್ಞರ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ನಾಗಪುರ: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿನ ಲೋನಾರ್‌ ಕೆರೆಯ ನೀರು ಈಚೆಗೆ ಗುಲಾಬಿ ಬಣ್ಣಕ್ಕೆ ತಿರುಗಿದ್ದರ ಹಿಂದಿನ ಸೋಜಿಗವನ್ನು ಪತ್ತೆ ಮಾಡಲು ಇಲ್ಲಿನ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆಯ (ಎನ್‌ಇಇಆರ್‌ಐ) ತಂಡ ಶೀಘ್ರವೇ ಭೇಟಿ ನೀಡಲಿದೆ.

ದುಂಡಗಿನ ಆಕೃತಿಯುಳ್ಳ ಲೋನಾರ್ ಕೆರೆಯು ಸುಮಾರು 50 ಸಾವಿರ ವರ್ಷಗಳ ಹಿಂದೆ ಉಲ್ಕಾಪಾತದ ಪರಿಣಾಮ ಅಸ್ತಿತ್ವಕ್ಕೆ ಬಂದಿದೆ. ಇದು, ಮಹಾರಾಷ್ಟ್ರ ಹೆಸರಾಂತ ಪ್ರವಾಸಿ ತಾಣವೂ ಆಗಿದ್ದು, ಪ್ರಕೃತಿ ಪ್ರಿಯರು ಹಾಗೂ ವಿಜ್ಞಾನಿಗಳನ್ನು ಸೆಳೆಯುತ್ತಿದೆ. ಕೆರೆಯ ಒಟ್ಟು ತ್ಯಾಜ್ಯ 1.2 ಕಿ.ಮೀ ಆಗಿದೆ.

ಕೆರೆಯ ನೀರು ಇತ್ತೀಚೆಗೆ ಗುಲಾಬಿ ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರಿಗಷ್ಟೇ ಅಲ್ಲದೆ ಪ್ರಕೃತಿ ಪ್ರಿಯರು, ವಿಜ್ಞಾನಿಗಳ ಆಸಕ್ತಿಯನ್ನು ಕೆರಳಿಸಿತ್ತು.

ಪರಿಣತರ ತಂಡ ಕೆರೆಯ ನೀರನ್ನು ವಿಶ್ಲೇಷಿಸಲಿದ್ದು, ಬಣ್ಣ ಬದಲಾವಣೆಯ ಕಾರಣವನ್ನು ಪತ್ತೆ ಮಾಡಲಿದೆ ಎಂದು ಬುಲ್ದಾನಾ ಜಿಲ್ಲಾಧಿಕಾರಿ ಸುಮನ್‌ ಚಂದ್ರಾ ತಿಳಿಸಿದರು.

ಬ್ರಿಟಿಷ್‌ ಅಧಿಕಾರಿ ಸಿ.ಜೆ.ಇ. ಅಲೆಕ್ಸಾಂಡರ್‌ ಅವರು 1823ರಲ್ಲಿ ಈ ಕೆರೆಯ ತಾಣವನ್ನು ವಿಶಿಷ್ಟ ಭೌಗೋಳಿಕ ಸ್ಥಳ ಎಂದು ಗುರುತಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು