ಮಂಗಳವಾರ, ಮಾರ್ಚ್ 31, 2020
19 °C

ರಾಜ್ಯೋತ್ಸವಕ್ಕೆ ಪರಿಸರ ಸ್ನೇಹಿ ಬಾವುಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ ನ್ನಡ ರಾಜ್ಯೋತ್ಸವವನ್ನು ಪರಿಸರಸ್ನೇಹಿಯಾಗಿ ಆಚರಿಸುವ ಸಂಕಲ್ಪ ಮಾಡಿದವರು ಬೀಜ ಬಾವುಟಗಳನ್ನು ಖರೀದಿಸಬಹುದು.

ಸೀಡ್‌ ಇಂಡಿಯಾ ಪೇಪರ್‌ ವಿಭಿನ್ನ ಮಾದರಿಯ ಪರಿಸರ ಸ್ನೇಹಿ ಬೀಜ ಬಾವುಟಗಳನ್ನು ತಯಾರಿಸಿದೆ. ಈ ಬಾವುಟ ಸುಲಭವಾಗಿ ಮಣ್ಣಿನಲ್ಲಿ ಕರಗುತ್ತದೆ. ಅಷ್ಟೇ ಅಲ್ಲ, ಈ ಬಾವುಟದಲ್ಲಿ ವಿವಿಧ ಪ್ರಬೇಧದ ಬೀಜಗಳು ಇರಲಿವೆ. ಮಣ್ಣಿನಲ್ಲಿ ಕರಗುವಂತಹ ದಪ್ಪ ಪೇಪರ್‌ನ ಅಲ್ಲಲ್ಲಿ ಬೇರೆ ಬೇರೆ ಹೂವು, ಕಾಯಿಗಳ ಬೀಜವನ್ನು ಹುದುಗಿಸಿಡಲಾಗಿದೆ. ಈ ಕಾಗದದ ಬಾವುಟ ಭೂಮಿಯಲ್ಲಿ ಕರಗಿದ ನಂತರ ಅದರಲ್ಲಿನ ಬೀಜ ಮೊಳಕೆಯೊಡೆದು, ಗಿಡವಾಗಿ ಬೆಳೆಯುತ್ತದೆ.

ರೋಶನ್ ರೇ ಅವರು ಅನೇಕ ವರ್ಷಗಳಿಂದ ಇಂತಹ ಜೈವಿಕ ಬಾವುಟಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಕಳೆದ ಹಲವು ತಿಂಗಳಲ್ಲಿ ದೇಶದ ವಿವಿಧ ಭಾಗಗಳ ಸಾವಿರಾರು ಜನರಿಗೆ ಈ ಬಾವುಟಗಳನ್ನು ಮಾರಾಟ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಬಾವುಟವನ್ನು ತಯಾರಿಸಿದ್ದಾರೆ.

‘ರಸ್ತೆಗಳಲ್ಲಿ ಪ್ಲಾಸ್ಟಿಕ್ ಬಾವುಟಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಈ ಬಾವುಟಗಳು ರಸ್ತೆ ಬದಿಯಲ್ಲಿ ಬಿದ್ದು ಅಥವಾ ಕಸದ ತೊಟ್ಟಿಗಳ ಮೂಲಕ ಭೂಮಿಯ ಒಡಲನ್ನು ಸೇರಿ ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ಇದರಿಂದ ಎಲ್ಲಾ ರೀತಿಯ ಜೀವಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸೀಡ್ ಬಾವುಟಗಳನ್ನು ತಯಾರಿಸಿದರೆ ಹೇಗೆ ಎಂಬ ಆಲೋಚನೆ ನನ್ನಲ್ಲಿ ಬಂದಿತು. ಈ ಜೈವಿಕ ಕಾಗದದ ಬೀಜ ಬಾವುಟಗಳು ಪರಿಸರಕ್ಕೆ ಉತ್ತಮವಾಗುವುದಲ್ಲದೇ, ನೀರನ್ನೂ ಸಹ ಉಳಿತಾಯ ಮಾಡಲಿವೆ. ಈ ಬಾವುಟದಲ್ಲಿ ಬಳಸುವ ಬಣ್ಣದ ಇಂಕ್ ಕೂಡ ಪರಿಸರಕ್ಕೆ ಯಾವುದೇ ಹಾನಿಕಾರಕವಲ್ಲ’ ಎಂದು ಸೀಡ್‌ ಇಂಡಿಯಾ ಪೇಪರ್‌ ಸಂಸ್ಥಾಪಕ ರೋಶನ್‌ ರೇ ವಿವರಣೆ  ನೀಡುತ್ತಾರೆ.

ಬಾವುಟವನ್ನು ಬಳಸುವುದು ಹೇಗೆ?

ಬಾವುಟವನ್ನು ಬಳಕೆ ಮಾಡಿದ ನಂತರ 2-3 ದಿನ ನೀರಿನಲ್ಲಿ ನೆನೆಸಿಡಬೇಕು.  ನಂತರ ಮಣ್ಣಿನಲ್ಲಿ ಹಾಕಬೇಕು. ಪ್ರತಿದಿನ ನೀರನ್ನು ಹಾಕಬೇಕು. ಹೀಗೆ ದಿನ ಕಳೆದಂತೆ ಕಾಗದ ಮಣ್ಣಿನಲ್ಲಿ ಕರಗುತ್ತದೆ ಮತ್ತು 4-5 ವಾರಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ.

ಈ ಬೀಜ ಬಾವುಟದ ಬೆಲೆ ₹10.

ಖರೀದಿಗೆ– ಸೀಡ್‌ ಇಂಡಿಯಾ ಪೇಪರ್‌, ರೇ ಇಂಟರ್‌ನ್ಯಾಷನಲ್‌. 164/9, ವಿವಿ ಪುರಂ, ಆರ್‌.ವಿ.ರಸ್ತೆ. ಸಂಪರ್ಕಕ್ಕೆ– 6364– 699837.

www.seedpaperindia.com

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು