ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ದೇಶದ 21 ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮ: ಪಟ್ಟಿಯಲ್ಲಿವೆ ರಾಜ್ಯದ 12 ನಗರ

Last Updated 16 ನವೆಂಬರ್ 2021, 14:44 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಮಂಗಳವಾರ ವಾಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿರುವ ನಗರಗಳ ಪಟ್ಟಿಯನ್ನು ‘ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ (ಸಿಪಿಸಿಬಿ)’ ಬಿಡುಗಡೆ ಮಾಡಿದೆ.

ಇಂದು ದೇಶದಲ್ಲಿ 21 ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ ಎಂದು ಸಿಪಿಸಿಬಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಗೊತ್ತಾಗಿದೆ. ಇದರಲ್ಲಿ ಕರ್ನಾಟಕದ 12 ನಗರಗಳು ಸ್ಥಾನ ಪಡೆದುಕೊಂಡಿವೆ.

ವಾಯು ಗುಣಮಟ್ಟ ಸೂಚ್ಯಂಕ ಪಟ್ಟಿಯ ಪ್ರಕಾರ ಅಮರಾವತಿ, ಬಾಗಲಕೋಟೆ, ಬೀದರ್, ಚಿಕ್ಕಮಗಳೂರು, ಕೊಯಮತ್ತೂರು, ದಾವಣಗೆರೆ, ಎಲ್ಲೂರು, ಗದಗ, ಹಾಸನ, ಹುಬ್ಬಳ್ಳಿ, ಕೊಚ್ಚಿ, ಕೋಲಾರ, ಕೊಪ್ಪಳ, ಕೋಯಿಕ್ಕೋಡ್‌, ಮೈಸೂರು, ಪುದುಚೇರಿ, ರಾಜಮಹೇಂದ್ರವರಂ, ರಾಮನಗರ, ಶಿವಮೊಗ್ಗ, ತಲಶೇರಿ ಮತ್ತು ತಿರುಪತಿ 'ಉತ್ತಮ' (Good) ವಾಯು ಗುಣಮಟ್ಟದ ಪಟ್ಟಿಯಲ್ಲಿವೆ.

ಮಡಿಕೇರಿಯು ಭಾರತದಲ್ಲೇ ಅತ್ಯುತ್ತಮ (Best) ವಾಯು ಗುಣಮಟ್ಟ ಹೊಂದಿದೆ.

ದೆಹಲಿ, ಭೋಪಾಲ್‌, ಗುರುಗ್ರಾಮ ಸೇರಿದಂತೆ ದೇಶದ ಹಲವು ನಗರಗಳ ವಾಯು ಗುಣಮಟ್ಟ ಗಂಭೀರ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT