ದೇಶದ ನ್ಯಾಯಾಂಗದ ಆಡಳಿತದ ಪರಿಭಾಷೆಯಲ್ಲಿ ಕೆಳ ಹಂತದ ಸಿಬ್ಬಂದಿಯನ್ನು ಸಂಬೋಧಿಸಲು ಬಳಕೆಯಲ್ಲಿರುವ ಕೆಲವು ಪದಗಳು ನಿಂದನಾತ್ಮಕವಾಗಿದ್ದು, ಅವುಗಳು ಮನುಷ್ಯನ ಘನತೆಗೆ ಧಕ್ಕೆ ತರುತ್ತಿವೆ. ವಸಾಹತುಶಾಹಿ, ಊಳಿಗಮಾನ್ಯ ಮತ್ತು ಜಾತಿ ಪದ್ಧತಿಗೆ ಸಂಬಂಧಿಸಿದ ಶ್ರೇಣೀಕರಣದ ನಿಯಮಗಳು ನ್ಯಾಯಾಂಗದ ನಿಂದನಾತ್ಮಕ ವೃತ್ತಿಸೂಚಕಗಳ ಹುಟ್ಟಿಗೆ ಕಾರಣವಾಗಿವೆ. ಅವು ಸಂವಿಧಾನದ ಒಳಗೊಳ್ಳುವ ಮತ್ತು ಮೇಲುಕೀಳುರಹಿತ ವ್ಯವಸ್ಥೆ ನಿರ್ಮಾಣದ ಆಶಯಕ್ಕೆ ವಿರುದ್ಧವಾಗಿವೆ. ಹಾಗಾಗಿ, ಅವುಗಳ ಬದಲಾಗಿ ಮನುಷ್ಯನ ಘನತೆಯನ್ನು ಕಾಪಾಡುವ, ಗೌರವಿಸುವ ಪದಗಳನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ನ ಸಂಶೋಧನೆ ಮತ್ತು ಯೋಜನಾ ಕೇಂದ್ರದ ಇತ್ತೀಚಿನ ವರದಿ ಹೇಳಿದೆ..

ಸಂವಿಧಾನದ ಆಶಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲವು ನಿಂದನಾತ್ಮಕ ವೃತ್ತಿಸೂಚಕ ಪದಗಳು ಬಳಕೆಯಲ್ಲಿರುವುದರ ಬಗ್ಗೆ ಸುಪ್ರೀಂ ಕೋರ್ಟ್ನ ವರದಿಯೊಂದು ಗಮನ ಸೆಳೆದಿದೆ. ನ್ಯಾಯಾಂಗದಲ್ಲಿ ಅಸಮಾನತೆಯ ಭಾಷೆ ಬಳಕೆಯಲ್ಲಿದೆ ಎಂದು ಸುಪ್ರೀಂ ಕೋರ್ಟ್ನ ಸಂಶೋಧನೆ ಮತ್ತು ಯೋಜನಾ ಕೇಂದ್ರದ ವರದಿ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ಮತ್ತು 25 ಹೈಕೋರ್ಟ್ಗಳ ಸೇವಾ ಸೇವಾ ನಿಯಮಗಳು, ಚಾರಿತ್ರಿಕವಾದ ದಾಖಲೆಗಳು, ನ್ಯಾಯಶಾಸ್ತ್ರ ಇತ್ಯಾದಿಗಳನ್ನು ಅಧ್ಯಯನ ಮಾಡಿ ವರದಿಯಲ್ಲಿ ವಿವಿಧ ಅವಹೇಳನಕಾರಿ ವೃತ್ತಿಸೂಚಕ ಪದಗಳನ್ನು ಪಟ್ಟಿ ಮಾಡಲಾಗಿದೆ.

ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆ, ಭ್ರಾತೃತ್ವ ಮತ್ತು ಘನತೆಯನ್ನು ಖಾತರಿಪಡಿಸುತ್ತದೆ. ಆದರೆ, ಸುಪ್ರೀಂ ಕೋರ್ಟ್, ಹೈಕೋರ್ಟ್ಗಳಲ್ಲಿ ಆಡಳಿತಾತ್ಮಕವಾಗಿ ಬಳಸಲಾಗುತ್ತಿರುವ ಕೆಲವು ವೃತ್ತಿಸೂಚಕ ಪದಗಳು ಉದ್ಯೋಗಿಗಳ ಘನತೆಗೆ ಕುಂದು ತರುವಂತಿವೆ. ಈ ಪದಗಳು ದೇಶದಲ್ಲಿ ಆಳವಾಗಿ ಬೇರುಬಿಟ್ಟಿರುವ ವಸಾಹತುಶಾಹಿ ಮತ್ತು ಜಾತಿ ಶ್ರೇಣೀಕರಣದ ಫಲವಾಗಿದ್ದು, ಇವುಗಳ ಸಾಂಸ್ಥಿಕ ಬಳಕೆಯು ಅಸ್ತಿತ್ವದಲ್ಲಿರುವ ಶ್ರೇಣೀಕೃತ ಸಾಮಾಜಿಕ ಸಂರಚನೆಯನ್ನು ಬಲಪಡಿಸುತ್ತಿದೆ.

ಆಡಳಿತದ ಪರಿಭಾಷೆಯಾಗಿ ಇಂಥ ಪದಗಳನ್ನು ಪದೇ ಪದೇ ಬಳಸುವುದರಿಂದ ಚಾರಿತ್ರಿಕವಾದ ಅಸಮಾನತೆಯನ್ನು ಪುನರ್ ಪ್ರತಿಷ್ಠಾಪಿಸಿದಂತಾಗುತ್ತಿದೆ. ಜತೆಗೆ, ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪಾದ ಗುರುತಿಸುವಿಕೆಗೆ ಕಾರಣವಾಗುತ್ತಿದೆ. ವಿವಿಧ ಹೈಕೋರ್ಟ್ಗಳ ಸೇವಾ ನಿಯಮಗಳಲ್ಲೇ ಉಲ್ಲೇಖವಾಗಿರುವ ಈ ಪದಗಳು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ ಎಂದು ವರದಿ ಹೇಳಿದೆ.

ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್ ಸಂಶೋಧನೆ ಮತ್ತು ಯೋಜನಾ ಕೇಂದ್ರವು, ಕೆಲವು ನಿಂದನಾತ್ಮಕವಾದ ವೃತ್ತಿಸೂಚಕ ಪದಗಳ ನಿಷ್ಪತ್ತಿ, ಬಳಕೆ, ಅರ್ಥವಿಸ್ತಾರವನ್ನು ವಿಶ್ಲೇಷಣೆಗೊಳಪಡಿಸಿದೆ. ನ್ಯಾಯಾಂಗದ ಆಡಳಿತ ಪರಿಭಾಷೆಯಲ್ಲಿ ಹಲಾಲ್ಖೋರ್, ಸ್ಕ್ಯಾವೆಂಜರ್, ಪ್ಯೂನ್, ಸೇವಕ ಮುಂತಾದ ಪದಗಳು ಬಳಕೆಯಾಗುತ್ತಿವೆ. ಈ ವೃತ್ತಿಸೂಚಕ ಪದಗಳು ನಿಂದನಾತ್ಮಕವಾಗಿದ್ದು, ಇದು ಸಂವಿಧಾನದ 14, 15, 16, 17, 21 ಮತ್ತು 23ನೇ ವಿಧಿಗಳ ಉಲ್ಲಂಘನೆಯಾಗಿದೆ. ಇವು ಸಂಸ್ಥೆಗಳಲ್ಲಿನ ಅಸಮಾನತೆ ಮತ್ತು ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದ ಆಚರಣೆಗಳ ಪ್ರತಿರೂಪವಾಗಿವೆ ಎಂದಿದೆ.

ಆಡಳಿತದ ಪರಿಭಾಷೆಯನ್ನು ಸಂವಿಧಾನದ ಭಾಷೆಯೊಂದಿಗೆ, ಆಶಯಗಳೊಂದಿಗೆ ಬೆಸೆಯಬೇಕು. ನ್ಯಾಯಾಂಗದ ಆಶಯಗಳು ಮತ್ತು ಅದರ ಆಚರಣೆಯ ನಡುವಿನ ಅಂತರವನ್ನು ಹೋಗಲಾಡಿಸಬೇಕು. ನ್ಯಾಯಾಂಗದ ಪರಿಭಾಷೆಯೇ ನ್ಯಾಯದ ಮೊದಲ ಹೆಜ್ಜೆಯಾಗಬೇಕು ಎಂದಿರುವ ವರದಿಯು ಈ ನಿಟ್ಟಿನಲ್ಲಿ ಮೊದಲು ಕೆಲವು ವೃತ್ತಿಸೂಚಕ ಪದಗಳನ್ನು ಬದಲಿಸಬೇಕು ಎಂದು ಶಿಫಾರಸು ಮಾಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನ ಸೇವಾ ನಿಯಮಗಳಲ್ಲಿ ಬದಲಾವಣೆ ಆಗಬೇಕಿದ್ದು, ಹುದ್ದೆ ಆಧಾರಿತ, ಕೆಲಸ ಆಧಾರಿತ ವೃತ್ತಿ ಸೂಚಕಗಳಿಂದ ಹೊರಬರಬೇಕಿದೆ ಎಂದು ಅಭಿಪ್ರಾಯ ಪಟ್ಟಿರುವ ವರದಿಯು, ನಿಂದನಾತ್ಮಕ ಪದಗಳಿಗೆ ಪರ್ಯಾಯವಾಗಿ ಬಳಸಬಹುದಾದ ಪದಗಳನ್ನು ಪಟ್ಟಿ ಮಾಡಿದೆ.

ನ್ಯಾ. ಗವಾಯಿ ಸೂಚನೆ: ಇತ್ತೀಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರು, ತಾವು ನಿವೃತ್ತರಾಗುವ ಮುನ್ನ ಈ ವರದಿಯನ್ನು ಎಲ್ಲ ರಾಜ್ಯಗಳ ಹೈಕೋರ್ಟ್ಗಳಿಗೂ ಕಳುಹಿಸಿದ್ದಾರೆ. ‘ಆಡಳಿತದ ಪರಿಭಾಷೆಯನ್ನು ಬದಲಿಸವಂಥ ಸಣ್ಣ ಕ್ರಿಯೆಯ ಮೂಲಕ ನ್ಯಾಯಾಂಗದಲ್ಲಿರುವ ಪ್ರತಿ ವ್ಯಕ್ತಿಯ ಘನತೆ ಮತ್ತು ಗೌರವವನ್ನು ಆತ ಯಾವುದೇ ಹುದ್ದೆಯಲ್ಲಿದ್ದರೂ ಎತ್ತಿಹಿಡಿಯಬೇಕಿದೆ. ಹೀಗಾಗಿ, ಆದಷ್ಟು ಬೇಗ ಸೇವಾ ನಿಯಮಗಳಿಗೆ ತಿದ್ದುಪಡಿ ತರಬೇಕು’ ಎಂದು ಸೂಚಿಸಿದ್ದಾರೆ.

ವರದಿಯ ಪ್ರಕಾರ, 1973ರ ಕರ್ನಾಟಕ ಹೈಕೋರ್ಟ್ (ಸೇವೆಗಳು ಮತ್ತು ನೇಮಕಾತಿ ಷರತ್ತುಗಳು) ಸೇವಾ ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ ಮನುಷ್ಯನ ಘನತೆಗೆ ಧಕ್ಕೆ ತರುವ ಪದಗಳು: ಕೋರ್ಟ್ ಸರ್ವೆಂಟ್, ಜಮೆದಾರ್, ಡ್ರೈವರ್, ಧೋಬಿ, ಪ್ಯೂನ್, ದಫ್ತರ್ಬಂದ್, ಚೌಕಿದಾರ್, ಮುಚಿ, ಮಾಲಿ.

ವಸಾಹತುಶಾಹಿ ಆಡಳಿತದ ಅವಹೇಳನಕಾರಿ ಪದಗಳು

1 ಕೋರ್ಟ್ ಸರ್ವೆಂಟ್ (ನ್ಯಾಯಾಲಯ ಸಹಾಯಕ): ಸುಪ್ರೀಂ ಕೋರ್ಟ್, ಅಲಹಾಬಾದ್, ದೆಹಲಿ, ಗುವಾಹಟಿ, ಕರ್ನಾಟಕ ಮತ್ತು ಮಣಿಪುರ ಹೈಕೋರ್ಟ್ಗಳಲ್ಲಿ ಇದರ ಬಳಕೆ ಇದೆ. ಬ್ರಿಟನ್ ಸಾಂವಿಧಾನಿಕ ಚೌಕಟ್ಟಿನಲ್ಲಿ ಈ ಪದ ಬಳಕೆಯ ಇತಿಹಾಸವಿದೆ. ಕಾನೂನಾತ್ಮಕವಾಗಿ ಈ ಪದವು ಸಂವಿಧಾನದಲ್ಲಿ ಹೇಳಲಾದ ಸಮಾನತೆ ಮತ್ತು ಘನತೆಯ ಮಾನದಂಡಗಳಿಗೆ ವಿರುದ್ಧವಾಗಿದೆ.

2 ಚೋಬದಾರ್: ಬಾಂಬೆ ಹೈಕೋರ್ಟ್, ಗುಜರಾತ್ ಮತ್ತು ಮದ್ರಾಸ್ ಹೈಕೋರ್ಟ್ಗಳ ಸೇವಾ ನಿಯಮಗಳಲ್ಲಿ ಈ ಪದವನ್ನು ಕಾಣಬಹುದು. ಚೋಬದಾರ್ ಅಂದರೆ ಬೆಳ್ಳಿಯ ದಂಡವನ್ನು ಹಿಡಿಯುವ ವ್ಯಕ್ತಿ ಮತ್ತು ಪ್ರಭಾವಿ ಅಥವಾ ಉನ್ನತ ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಸೇವಕ. ನ್ಯಾಯಾಲಯದಲ್ಲಿ ಇದೀಗ ಶಿಷ್ಟಾಚಾರದ ಭಾಗ. ಅತ್ಯಂತ ಮುಖ್ಯ, ಪ್ರಭಾವಿ ವ್ಯಕ್ತಿಯನ್ನು ಕಾಯುವವನು ಎಂಬ ವಿಶ್ಲೇಷಣೆ ಇರುವುದರಿಂದ ಈ ಪದವು ನಿಂದನಾತ್ಮಕವಾದುದು.

3 ಚೌಕೀದಾರ್: ಕಾವಲುಗಾರ ಅಥವಾ ಆರೈಕೆದಾರ ಎಂಬುದು ಇದರ ಅರ್ಥ. ಕರ್ನಾಟಕ, ಅಲಹಾಬಾದ್, ಆಂಧ್ರ ಪ್ರದೇಶ, ಬಾಂಬೆ, ಛತ್ತೀಸಗಢ, ಗುವಾಹಟಿ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಒಡಿಶಾ, ಪಟ್ನಾ, ಪಂಜಾಬ್ ಮತ್ತು ಹರಿಯಾಣ, ಸಿಕ್ಕಿಂ ಮತ್ತು ಉತ್ತರಾಖಂಡ ಹೈಕೋರ್ಟ್ಗಳಲ್ಲಿ ಇದು ಬಳಕೆಯಲ್ಲಿದೆ. ಈ ಪದದ ಮೂಲವು ಯಜಮಾನಿಕೆ ಮತ್ತು ವಶಾಹತುಶಾಹಿ ಕಾಲಕ್ಕೆ ಸೇರಿದ್ದು. ಆ ಕಾಲದಲ್ಲಿ ಜಮೀನ್ದಾರ ಅಥವಾ ಅಧಿಕಾರಿಯ ಆಸ್ತಿಯನ್ನು ಕಾಯುತ್ತಿದ್ದವ ಚೌಕೀದಾರ.

4 ಕೂಲಿ: ಅಲಹಾಬಾದ್ ಹೈಕೋರ್ಟ್ ಅಧಿಕಾರಿಗಳು ಸಿಬ್ಬಂದಿ ಸೇವಾ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಕೂಲಿ ಪದದ ಮೂಲ ಭಾರತದಲ್ಲಿರುವ ಕೋಲಿ ಜಾತಿ, ತಮಿಳು ಪದ ‘ಕುಲಿ’ (ಸಂಬಳ ಅಥವಾ ಕಾರ್ಮಿಕ) ಮತ್ತು ಟರ್ಕಿ ಪದ ‘ಕುಲಿ’ಯಲ್ಲಿದೆ (ಗುಲಾಮ) ಎಂದು ಹೇಳಲಾಗುತ್ತದೆ. ಈ ಪದವು ದಿನಗೂಲಿ ನೌಕರರನ್ನು ಸೂಚಿಸುತ್ತದೆ. ಆದರೆ, ಇದು ಮನುಷ್ಯರನ್ನು ಘನತೆಯಿಂದ ಕಾಣುವ ಬದಲು, ಅವರ ಶ್ರಮವನ್ನು ಸರಕಿನ ರೀತಿಯಲ್ಲಿ ಬಿಂಬಿಸುತ್ತದೆ.

5 ದರಬಾನ್: ಬಾಂಬೆ ಹೈಕೋರ್ಟ್, ಕಲ್ಕತ್ತಾ ಹೈಕೋರ್ಟ್, ಗುವಾಹಟಿ ಹೈಕೋರ್ಟ್ ನಿಯಮಗಳಲ್ಲಿ ಇದು ಬಳಕೆಯಲ್ಲಿದೆ. ದರಬಾನ್ ಎಂದರೆ ದ್ವಾರಪಾಲನೆಗಾಗಿ ನಿಯೋಜಿಸಿರುವ ಸೇವಕ ಎಂದರ್ಥ. ಇದು ದಾಸ್ಯದ ವೃತ್ತಿಯಾಗಿರುವುದರಿಂದ ಒಂದು ರೀತಿಯಲ್ಲಿ ಅವಮಾನ ಮಾಡಿದಂತಾಗುತ್ತದೆ

6 ಹವೀಲ್ದಾರ್: ಬಾಂಬೆ, ಗುಜರಾತ್ ಮತ್ತು ಆಂಧ್ರ ಪ್ರದೇಶದ ಹೈಕೋರ್ಟ್ ಸೇವಾ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಇದರ ಮೂಲ ಹಿಂದಿಯ ಹವಾಲ್ದಾರ್ ಪದ. ಬ್ರಿಟಿಷರ ಕಾಲದಲ್ಲಿ ಇದು ಸೇನಾ ರ್ಯಾಂಕ್ನ ಹುದ್ದೆ. ಈಗ ಡಿ ದರ್ಜೆಯ ಹುದ್ದೆಯಾಗಿದೆ.

7 ನಾಯ್ಕ್/ನಾಯಕ್: ಬಾಂಬೆ, ಗುಜರಾತ್ ಹೈಕೋರ್ಟ್ಗಳಲ್ಲಿ ಇದರ ಬಳಕೆ ಇದೆ. ವಿಜಯನಗರ ಆಡಳಿತದಲ್ಲಿ ಚಾಲ್ತಿಯಲ್ಲಿದ್ದ ಪದ. ‘ನಾಯಕ’ರು ಸೇನಾ ಮುಖಂಡರು ಮತ್ತು ಆಡಳಿತಗಾರರಾಗಿ ಕಾರ್ಯನಿರ್ವಹಿಸಿದವರು. ಮರಾಠಾ ಸೇನೆಯಲ್ಲೂ ನಾಯ್ಕ್ ಪದ ಬಳಕೆಯಲ್ಲಿತ್ತು. ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಪದವಿ ಆಗಿತ್ತು. ಬ್ರಿಟಿಷರ ಆಡಳಿತದಲ್ಲೂ ಇದು ಮುಂದುವರಿದಿತ್ತು. ವಸಾಹತುಶಾಹಿ ಆಡಳಿತದಲ್ಲಿ ಪೊಲೀಸ್ ಮತ್ತು ಸೇನಾ ಹುದ್ದೆಗಳನ್ನು ಬಿಂಬಿಸುವ ಈ ಪದವು ನಾಗರಿಕ–ನ್ಯಾಯಾಂಗ ವ್ಯವಸ್ಥೆಗೆ ಸರಿ ಹೊಂದುವುದಿಲ್ಲ.

8 ಪ್ಯೂನ್: ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲ ಹೈಕೋರ್ಟ್ಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಪ್ಯೂನ್ ಎಂದರೆ ದಾಖಲೆಗಳನ್ನು ಕೊಂಡೊಯ್ಯುವ ವ್ಯಕ್ತಿ ಅಥವಾ ಕ್ಲರ್ಕ್ ಸಹಾಯಕ ಎಂದರ್ಥ. ಈ ಪದವು ಶ್ರೇಣೀಕರಣ ಮತ್ತು ಗುಲಾಮಗಿರಿಯನ್ನು ಬಿಂಬಿಸುತ್ತದೆ.

9 ರೂಮ್ ಬಾಯ್: ಮದ್ರಾಸ್ ಹೈಕೋರ್ಟ್ನಲ್ಲಿ ಇದು ಬಳಕೆಯಲ್ಲಿದೆ. ಬ್ರಿಟಿಷರ ಕಾಲದಲ್ಲಿ ಮನೆಕೆಲಸಗಳನ್ನು ಮಾಡುತ್ತಿದ್ದ ಪುರುಷ ಸೇವಕರಿಗೆ ಈ ರೀತಿ ಕರೆಯುತ್ತಿದ್ದರು. ಇದು ಕೂಡ ಸೇವಕತನವನ್ನು ಪ್ರತಿಪಾದಿಸುತ್ತದೆ.

10 ವಾಚ್ ಆ್ಯಂಡ್ ವಾರ್ಡ್: ಮದ್ರಾಸ್ ಹೈಕೋರ್ಟ್ನ ಸೇವಾ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಇಂಗ್ಲೆಂಡ್ನಲ್ಲಿ 13ನೇ ಶತಮಾನದಲ್ಲಿ ಹುಟ್ಟಿದ ಪದ ಇದು. ಅಂದರೆ ಭದ್ರತಾ ಸಿಬ್ಬಂದಿ ಅಥವಾ ಕಾವಲುಗಾರ. ಆದರೆ, ಈ ಪದಗಳು ವ್ಯಕ್ತಿಯನ್ನು ಭದ್ರತಾ ವೃತ್ತಿಪರರನ್ನಾಗಿ ಬಿಂಬಿಸುವುದಿಲ್ಲ. ಕಾವಲುಗಾರರನ್ನಾಗಿ ತೋರಿಸುತ್ತದೆ

ಕೀಳು ಕೆಲಸ/ಗುಲಾಮಗಿರಿ ಬಿಂಬಿಸುವ ಪದಗಳು

1 ಬಸ್ತಾ ಬರ್ದಾರ್/ಬಂಡಲ್ ಲಿಫ್ಟರ್: ಅಲಹಾಬಾದ್, ರಾಜಸ್ಥಾನ ಮತ್ತು ಉತ್ತರಾಖಂಡ ಹೈಕೋರ್ಟ್ ಸೇವಾ ನಿಯಮಗಳಲ್ಲಿ ಇದರ ಬಳಕೆ ಇದೆ. ನ್ಯಾಯಾಲಯದಲ್ಲಿ ಕಾನೂನು ದಾಖಲೆಗಳು ಸಾಗಣೆ ಮತ್ತು ಅವುಗಳ ನಿರ್ವಹಣೆಯ ಕೆಲಸವನ್ನು ಇದು ವಿವರಿಸುತ್ತದೆ. ಇದು ವ್ಯಕ್ತಿಯೊಬ್ಬನ ಗುರುತನ್ನು ಸಂಪೂರ್ಣವಾಗಿ ಮರೆಮಾಡುತ್ತದೆ. ಬದಲಿಗೆ ಆತ ಮಾಡುವ ಕೆಲಸವನ್ನು ಸೂಚಿಸುತ್ತದೆ. ಇದು ಸಂವಿಧಾನದ ಸಮಾನತೆ, ಘನತೆ ಮತ್ತು ಜೀವನದ ಹಕ್ಕುಗಳಿಗೆ ವಿರುದ್ಧವಾದುದು

2 ಫರಾಶ್:ಉತ್ತರ ಭಾರತದ ಬಹುತೇಕ ಎಲ್ಲ ಹೈಕೋರ್ಟ್ಗಳ ಸೇವಾ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲ ಬೀಗದ ಕೈಗಳನ್ನು ನಿರ್ವಹಿಸುವ ಅಂದರೆ, ಬೆಳಿಗ್ಗೆ ಬಾಗಿಲು ತೆಗೆಯುವುದು ಸಂಜೆ, ಬಾಗಿಲು ಹಾಕುವ ಜವಾಬ್ದಾರಿ ಹೊಂದಿರುವ ವ್ಯಕ್ತಿಗೆ ಫರಾಶ್ ಎನ್ನಲಾಗುತ್ತದೆ. ಮೊಘಲ್ ಆಡಳಿತದಿಂದ ಬಳಕೆಗೆ ಬಂದ ಪದ ಇದು. ಇದು ಕೂಡ ವ್ಯಕ್ತಿಗಿಂತ ಆತ ನಡೆಸುವ ಕೆಲಸವನ್ನೇ ಪ್ರತಿಪಾದಿಸುತ್ತದೆ

3 ಮಶಾಲ್ಚಿ: ಮಣಿಪುರ ಮತ್ತು ಆಂಧ್ರ ಪ್ರದೇಶದ ಹೈಕೋರ್ಟ್ ದಾಖಲೆಗಳಲ್ಲಿ ಬಳಕೆ; ಪಾತ್ರೆ ತೊಳೆಯುವವನು ಮತ್ತು ಬೆಳಕಿನ ದೊಂದಿಗಳನ್ನು ನಿರ್ವಹಿಸುವವನು ಎನ್ನುವ ಅರ್ಥ ಇದೆ. ನ್ಯಾಯಾಂಗದ ಅಧಿಕಾರಿಗಳ ಮನೆಕೆಲಸ ಸಹಾಯಕರಿಗೆ ಬಳಸಲಾಗುವ ಈ ಪದವು ಮಾಲೀಕ, ಸೇವಕ ಎನ್ನುವ ಊಳಿಗಮಾನ್ಯ ಹಾಗೂ ವಸಾಹತುಶಾಹಿ ಧೋರಣೆಯನ್ನು ಪ್ರತಿನಿಧಿಸುತ್ತದೆ

4 ಹಮಾಲ್ (ಸರಕು ಸಾಗಣೆ ಮಾಡುವವರು): ಬಾಂಬೆ ಹೈಕೋರ್ಟ್ನಲ್ಲಿ ಬಳಕೆ; ಇದು ಸಾಂಕೇತಿಕ ಹಿಂಸೆ ಮತ್ತು ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಸೂಚಿಸುತ್ತಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳುವಂತೆ ‘ಶ್ರೇಣೀಕರಣ’ದ ಪ್ರತಿಬಿಂಬವಾಗಿದೆ

5 ಮುಲಿಯಾ (ಕೆಳಹಂತದ ಕೃಷಿ ಕೂಲಿ ಕಾರ್ಮಿಕ): ಒಡಿಶಾ ಹೈಕೋರ್ಟ್ (ಸಿಬ್ಬಂದಿ ನೇಮಕಾತಿ ಮತ್ತು ಸೇವಾ) ನಿಯಮಗಳು– 2019ರ ದಾಖಲೆಯಲ್ಲಿ ಬಳಕೆಯಾಗಿದೆ. ಈ ಪದವನ್ನು ನ್ಯಾಯಾಲಯದಲ್ಲಿ ಬಳಸುವುದರಿಂದ ಉದ್ಯೋಗಿಯ ಸಾಮರ್ಥ್ಯವನ್ನು ಕುಗ್ಗಿಸಿದಂತಾಗುತ್ತದೆ; ಅವರಿಗೆ ಯಾವ ಕೌಶಲವೂ ಇಲ್ಲ ಎನ್ನುವಂತಾಗುತ್ತದೆ

6 ಸೇವಕ್ (ಸೇವೆ ಮಾಡುವವನು): ಸಿಕ್ಕಿಂ, ಅಲಹಾಬಾದ್, ಉತ್ತರಾಖಂಡ್ ಹೈಕೋರ್ಟ್ಗಳಲ್ಲಿ ಬಳಕೆ; ಸೇವೆ ಮಾಡುವುದು ಎಂದರೆ, ಕಡೆಗಣಿಸಲ್ಪಟ್ಟ ಕೆಲಸಗಳನ್ನು ಮಾಡುವವನು ಎಂಬ ಅರ್ಥ ಇದೆ. ಇದು ಭ್ರಾತೃತ್ವ ಮತ್ತು ಪರಸ್ಪರ ಗೌರವಕ್ಕೆ ಚ್ಯುತಿ ತರುವಂಥ ಪದವಾಗಿದೆ

ಜಾತಿ ಆಧಾರಿತ ನಿಂದನಾತ್ಮಕ ಪದಗಳು

1 ಧೋಬಿ: ಕರ್ನಾಟಕ, ತೆಲಂಗಾಣ ಹೈಕೋರ್ಟ್ ಸೇವಾ ನಿಯಮಗಳಲ್ಲಿ ಈ ಪದವನ್ನು ಬಳಸಲಾಗಿದೆ. ಅಗಸ ವೃತ್ತಿ ಮಾಡುವವರನ್ನು ಧೋಬಿ ಎನ್ನಲಾಗುತ್ತದೆ. ಜಾತಿ ಆಧಾರಿತ ಪದವನ್ನು ವೃತ್ತಿಗೆ ಬಳಸುವುದರಿಂದ ಸಂವಿಧಾನದ 14,15, 17 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ

2 ಹಲಾಲ್ಖೋರ್: ಬಾಂಬೆ ಹೈಕೋರ್ಟ್ನಲ್ಲಿ ಇದನ್ನು ಬಳಸಲಾಗುತ್ತಿದೆ. ‘ಪ್ರಾಮಾಣಿಕವಾಗಿ ದುಡಿದು ಜೀವನ ನಡೆಸುವವನು’ ಎಂಬುದು ಇದರ ಅರ್ಥ. ಇತಿಹಾಸದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಮತ್ತು ನೈರ್ಮಲ್ಯ ಕಾರ್ಮಿಕರಾಗಿ ದುಡಿಯುತ್ತಿದ್ದ ದಲಿತ ಮುಸ್ಲಿಮರನ್ನು ಹೀಗೆ ಕರೆಯಲಾಗುತ್ತಿತ್ತು

3 ಮಾಲನ್: ಈ ಪದವು ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ಬಳಕೆಯಲ್ಲಿದೆ. ‘ಮಾಲಿ’ ಪದದ ಮಹಿಳಾ ರೂಪ. ಇದು ಲಿಂಗ ಆಧಾರಿತ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ಮಾಡುತ್ತದೆ

4 ಸ್ಕ್ಯಾವೆಂಜರ್: ಆಂಧ್ರ ಮತ್ತು ಮದ್ರಾಸ್ ಹೈಕೋರ್ಟ್ಗಳ ಸೇವಾ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ನ್ಯಾಯಾಲಯಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸುವ, ಕಸ ತೆರವುಗೊಳಿಸುವ ಮತ್ತು ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡುವ ವೃತ್ತಿಯಲ್ಲಿರುವವರನ್ನು ಈ ರೀತಿ ಕರೆಯಲಾಗುತ್ತದೆ. ಈ ಪದವು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಯ ಘನತೆಯನ್ನು ಕುಂದಿಸುತ್ತದೆ

ಸಾಮಾಜಿಕ ಗ್ರಹಿಕೆಯ ಪದಗಳು

1 ಭಿಶ್ತಿ: ಅಲಹಾಬಾದ್ ಮತ್ತು ಉತ್ತರಾಖಂಡ ಹೈಕೋರ್ಟ್ಗಳ ಸೇವಾ ನಿಯಮಗಳಲ್ಲಿ ಇದನ್ನು ಬಳಸಲಾಗಿದೆ. ಇದರ ಅರ್ಥ ಕುಡಿಯುವ ನೀರು ಪೂರೈಸುವವರು. ಇತಿಹಾಸದಲ್ಲಿ ಭಿಶ್ತಿಗಳು ಎಂದರೆ ದಾರಿ ಮಧ್ಯ ಸಿಕ್ಕಿ ಹಾಕಿಕೊಂಡವರಿಗೆ ‘ಮಶಾಕ್ಸ್’ ಎಂದು ಕರೆಯಲಾಗುವ ಮೇಕೆಯ ಚರ್ಮದಲ್ಲಿ ಮಾಡಿದ ಚೀಲದಲ್ಲಿ ಕುಡಿಯುವ ನೀರು ಪೂರೈಸುತ್ತಿದ್ದವರು. ಈ ಪದವು ಸಕಾರಾತ್ಮಕವಾಗಿದ್ದರೂ ಇದು ಜಾತಿ ಆಧಾರಿತ ವೃತ್ತಿಯನ್ನು ಬಿಂಬಿಸುತ್ತದೆ. ಈ ಕೆಲಸವನ್ನು ದಲಿತ ಸಮುದಾಯವದರೇ ಹೆಚ್ಚಾಗಿ ಮಾಡುತ್ತಿದ್ದರು

2 ಜಮದಾರ್: ಬಹುತೇಕ ಎಲ್ಲ ಹೈಕೋರ್ಟ್ಗಳಲ್ಲಿ ಇದರ ಬಳಕೆ ಇದೆ. ಈ ಹುದ್ದೆಯಲ್ಲಿ ಇರುವವರಿಗೆ ನಿರ್ದಿಷ್ಟ ಪಾತ್ರ ಮತ್ತು ಜವಾಬ್ದಾರಿಗಳನ್ನು ವ್ಯಾಖ್ಯಾನಿಸಲಾಗಿಲ್ಲ. ಸ್ವಚ್ಛತೆ, ಉಸ್ತುವಾರಿ, ನಿರ್ವಹಣೆ ಸೇರಿದಂತೆ ವಿವಿಧ ಕೆಲಸಗಳನ್ನು ಈ ಹುದ್ದೆಯಲ್ಲಿದ್ದವರು ಮಾಡುತ್ತಾರೆ. ಇತಿಹಾಸದಲ್ಲಿ ಇದು ಅಸ್ಪೃಶ್ಯತೆಯೊಂದಿಗೆ ತಳಕುಹಾಕಿಕೊಂಡಿದ್ದ ಜವಾಬ್ದಾರಿ

‘‘ವರದಿಯ ಪ್ರಕಾರ, 1973ರ ಕರ್ನಾಟಕ ಹೈಕೋರ್ಟ್ (ಸೇವೆಗಳು ಮತ್ತು ನೇಮಕಾತಿ ಷರತ್ತುಗಳು) ಸೇವಾ ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ ಮನುಷ್ಯನ ಘನತೆಗೆ ಧಕ್ಕೆ ತರುವ ಪದಗಳು: ಕೋರ್ಟ್ ಸರ್ವೆಂಟ್, ಜಮೆದಾರ್, ಡ್ರೈವರ್, ಧೋಬಿ, ಪ್ಯೂನ್, ದಫ್ತರ್ಬಂದ್, ಚೌಕಿದಾರ್, ಮುಚಿ, ಮಾಲಿ ’’

ನ್ಯಾ. ಗವಾಯಿ ಸೂಚನೆ

ಇತ್ತೀಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರು ತಾವು ನಿವೃತ್ತರಾಗುವ ಮುನ್ನ ಈ ವರದಿಯನ್ನು ಎಲ್ಲ ರಾಜ್ಯಗಳ ಹೈಕೋರ್ಟ್ಗಳಿಗೂ ಕಳುಹಿಸಿದ್ದಾರೆ. ‘ಆಡಳಿತದ ಪರಿಭಾಷೆಯನ್ನು ಬದಲಿಸವಂಥ ಸಣ್ಣ ಕ್ರಿಯೆಯ ಮೂಲಕ ನ್ಯಾಯಾಂಗದಲ್ಲಿರುವ ಪ್ರತಿ ವ್ಯಕ್ತಿಯ ಘನತೆ ಮತ್ತು ಗೌರವವನ್ನು ಆತ ಯಾವುದೇ ಹುದ್ದೆಯಲ್ಲಿದ್ದರೂ ಎತ್ತಿಹಿಡಿಯಬೇಕಿದೆ. ಹೀಗಾಗಿ ಆದಷ್ಟು ಬೇಗ ಸೇವಾ ನಿಯಮಗಳಿಗೆ ತಿದ್ದುಪಡಿ ತರಬೇಕು’ ಎಂದು ಸೂಚಿಸಿದ್ದಾರೆ.

ಆಧಾರ: ರಿಫಾರ್ಮಿಂಗ್ ಅಡ್ಮಿನಿಸ್ಟ್ರೇಟಿವ್ ನಾಮನ್ಕ್ಲೇಚರ್ ಇನ್ ದ ಇಂಡಿಯನ್ ಜ್ಯುಡೀಷಿಯರಿ; ಎಂಬೆಡ್ಡಿಂಗ್ ಡಿಗ್ನಿಟಿ ಆ್ಯಂಡ್ ಈಕ್ವಾಲಿಟಿ ಇನ್ ಸರ್ವೀಸ್ ರೂಲ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.