2019ರ ಮಳೆಗಾಲದಲ್ಲಿ ಜಮ್ಮು ಪ್ರಾಂತ್ಯದಲ್ಲಿ ಕೆಮ್ಮು, ನೆಗಡಿಯಿಂದ ಬಳಸುತ್ತಿದ್ದ ಕೆಲವು ಮಕ್ಕಳಿಗೆ ವೈದ್ಯರು ಕೆಮ್ಮಿನ ಸಿರಪ್ ನೀಡಿದ್ದರು. ಕೆಲವೇ ದಿನಗಳಲ್ಲಿ ಅವರ ಕಿಡ್ನಿಗಳು ವಿಫಲವಾಗಿ 11 ಮಕ್ಕಳು ಸತ್ತುಹೋದರು. ಸತ್ತವರು ಆರು ತಿಂಗಳಿನಿಂದ ಹಿಡಿದು 6 ವರ್ಷದ ಒಳಗಿನವರಾಗಿದ್ದರು. ಕೆಮ್ಮಿನ ಸಿರಪ್ನ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಡೈಎಥಿಲೀನ್ ಗ್ಲೈಕಾಲ್ (ಡಿಇಜಿ) ಎನ್ನುವ ಅಪಾಯಕಾರಿ ರಾಸಾಯನಿಕ ಇದ್ದುದು ದೃಢಪಟ್ಟಿತ್ತು.

ಅಂದಿನಿಂದಲೂ ಭಾರತದಲ್ಲಿ ತಯಾರಾಗುವ ಕೆಲವು ಕೆಮ್ಮಿನ ಸಿರಪ್ಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇವೆ. ಅದನ್ನು ಪುಷ್ಟೀಕರಿಸುವಂತೆ, ದೇಶದ ಒಳಗೆ ಮತ್ತು ಹೊರದೇಶಗಳಲ್ಲಿ ಕೆಮ್ಮಿನ ಸಿರಪ್ ಕುಡಿದ ಮಕ್ಕಳು ಸಾವಿಗೀಡಾಗುವ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇವೆ.

ಕೆಮ್ಮಿನ ಸಿರಪ್ಗಳಿಂದ ಸಾವುಗಳು ಸಂಭವಿಸುತ್ತಿರುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಗುರುತಿಸಲಾಗುತ್ತದೆ. ಮೊದಲನೆಯದು, ಆ ಸಿರಪ್ಗಳ ಕಳಪೆ ಗುಣಮಟ್ಟ. ಎರಡನೆಯದು, ಭಾರತದಲ್ಲಿ ಔಷಧಗಳ ಗುಣಮಟ್ಟ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು.

ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಔಷಧಗಳು ತಯಾರಾಗುತ್ತಿದ್ದರೂ ಅವುಗಳ ಗುಣಮಟ್ಟ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವ ದೂರು ಇದೆ. ಹೊಸ ಔಷಧಗಳಿಗೆ ಅನುಮತಿ ನೀಡುವುದು, ಅವುಗಳ ಕ್ಲಿನಿಕಲ್ ಟ್ರಯಲ್ಸ್, ಆಮದು, ರಫ್ತು ಇತ್ಯಾದಿ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಔಷಧಗಳ ಗುಣಮಟ್ಟ ನಿಯಂತ್ರಣದ ಉಸ್ತುವಾರಿಯನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘ (ಸಿಡಿಎಸ್ಎಸ್ಒ) ವಹಿಸುತ್ತದೆ. ಗುಣಮಟ್ಟ ಪರೀಕ್ಷೆಗಾಗಿ ಏಳು ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯಗಳಿವೆ. ಆದರೆ, ಇವುಗಳಲ್ಲಿ ಮೂಲಸೌಕರ್ಯಗಳು ಮತ್ತು ಸಿಬ್ಬಂದಿಯ ಕೊರತೆ ಇದ್ದು, ನಿರೀಕ್ಷೆಯಂತೆ ಗುಣಮಟ್ಟ ಪರೀಕ್ಷೆ ನಡೆಯುತ್ತಿಲ್ಲ ಎನ್ನುವ ಆರೋಪಗಳಿವೆ.

2007 ಮತ್ತು 2020ರ ನಡುವೆ ದೇಶದ ಆರು ರಾಜ್ಯ ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಗ್ರಹಿಸಲಾಗಿದ್ದ 7,500 ಔಷಧ ಮಾದರಿಗಳು ಅಗತ್ಯ ಗುಣಮಟ್ಟ ಹೊಂದಿಲ್ಲ ಎಂದು ವರದಿಯಾಗಿತ್ತು. ಆದರೆ, ಹೀಗೆ ಕಳಪೆ ಗುಣಮಟ್ಟ ಎಂದು ಕಂಡುಬಂದ ನಂತರ ಅವುಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯುವ ವ್ಯವಸ್ಥೆ ಇಲ್ಲ ಎನ್ನಲಾಗುತ್ತಿದೆ. ಇಂಥ ಕಳಪೆ ಔಷಧಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟವಾಗುತ್ತವೆ ಎಂದೂ ಕೆಲವು ವರದಿಗಳು ಹೇಳುತ್ತವೆ.

ಕೇಂದ್ರದ ನಿರಾಕರಣೆ: ಆದರೆ, ಈಗಿನ ಪ್ರಕರಣ ಮತ್ತು ಈ ಹಿಂದಿನ ಪ್ರಕರಣಗಳಲ್ಲಿಯೂ ಕೆಮ್ಮಿನ ಸಿರಪ್ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದುದೇ ಮಕ್ಕಳ ಸಾವಿಗೆ ಕಾರಣ ಎನ್ನುವ ವಾದವನ್ನು ಕೇಂದ್ರ ಸರ್ಕಾರವು ನಿರಾಕರಿಸುತ್ತಲೇ ಬಂದಿದೆ.

ಭಾರತವು ‘ಜಗತ್ತಿನ ಗುಣಮಟ್ಟದ ಔಷಧಾಲಯ’ ಆಗಿದೆ ಎಂದು ಪ್ರತಿಪಾದಿಸಿದ್ದ ಕೇಂದ್ರ ಸರ್ಕಾರವು ಗುಣಮಟ್ಟ ಕಾಯ್ದುಕೊಳ್ಳಲು ಸರ್ವ ಪ್ರಯತ್ನಗಳನ್ನೂ ಮಾಡುತ್ತಿರುವುದಾಗಿಯೂ ಹೇಳಿದೆ. ಸಾವುಗಳಿಗೆ ವೈದ್ಯರ ತಪ್ಪುಗಳು ಕಾರಣವಾಗಿರಬಹುದು ಎನ್ನುವುದು ಅದರ ವಾದ.

ಭಾರತದ ಔಷಧಗಳು ಕಳಪೆ ಎನ್ನುವುದರ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ಡಬ್ಲ್ಯುಎಚ್ಒ ಅನ್ನು ಕೇಳಿದ್ದೇವೆ. ಆದರೆ, ನಮಗೆ ಇದುವರೆಗೂ ಅದರ ವಿವರಗಳು ಸಿಕ್ಕಿಲ್ಲ ಎಂದು 2023ರಲ್ಲಿ ಆಗಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಮನ್ಸುಖ್ ಮಾಂಡವೀಯ ಹೇಳಿದ್ದರು.

ಕಳಪೆ, ಕಲಬೆರಕೆ

ಜಗತ್ತಿನ ಅತಿದೊಡ್ಡ ಔಷಧ ಉತ್ಪಾದಕ ರಾಷ್ಟ್ರಗಳಲ್ಲಿ ಭಾರತವು ಮೂರನೇ ಸ್ಥಾನ ಪಡೆದಿದೆ. ದೇಶದಲ್ಲಿ ಸುಮಾರು ಮೂರು ಸಾವಿರ ಕಂಪನಿಗಳು 10 ಸಾವಿರಕ್ಕೂ ಹೆಚ್ಚು ತಯಾರಿಕಾ ಘಟಕಗಳನ್ನು ಹೊಂದಿದ್ದು, ಜೆನರಿಕ್ ಔಷಧ ತಯಾರಿಕೆಯಲ್ಲಿ ತೊಡಗಿವೆ. ಹೀಗೆ ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿರುವ ಔಷಧಗಳನ್ನು ಕಡಿಮೆ ಬೆಲೆಗೆ ವಿದೇಶಗಳಿಗೆ ರಫ್ತು ಮಾಡುತ್ತಿದೆ. 2024–25ರಲ್ಲಿ ಭಾರತವು ರಫ್ತು ಮಾಡಿರುವ ಔಷಧಗಳ ಮೌಲ್ಯ ₹2.66 ಲಕ್ಷ ಕೋಟಿ (3,000 ಕೋಟಿ ಡಾಲರ್). ಜಾಗತಿಕ ಲಸಿಕೆಗಳ ಬೇಡಿಕೆಯಲ್ಲಿ ಶೇ 50, ಅಮೆರಿಕದ ಜೆನರಿಕ್ ಔಷಧಗಳ ಪೈಕಿ ಶೇ 40ರಷ್ಟು ಮತ್ತು ಇಂಗ್ಲೆಂಡ್ನ ಎಲ್ಲ ರೀತಿಯ ಔಷಧಗಳ ಪೈಕಿ ಶೇ 25ರಷ್ಟನ್ನು ಭಾರತವೇ ಪೂರೈಸುತ್ತಿದೆ. ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ ಅನೇಕ ದೇಶಗಳಿಗೆ, ವೈದ್ಯರ ಚೀಟಿ ಇಲ್ಲದೇ ಮಾರಾಟವಾಗುವ (ಓವರ್ ದ ಕೌಂಟರ್) ಔಷಧಗಳಲ್ಲಿ ಗಣನೀಯ ಪಾಲನ್ನು ಭಾರತವೇ ಪೂರೈಸುತ್ತದೆ. 200ರಷ್ಟು ದೇಶಗಳಿಗೆ ಭಾರತವು ಔಷಧ ಮತ್ತು ಲಸಿಕೆಗಳನ್ನು ರಫ್ತು ಮಾಡುತ್ತದೆ. ಎಚ್ಐವಿ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಗಳ ಪೈಕಿ ಮೂರನೇ ಎರಡರಷ್ಟು ಪಾಲನ್ನು ಭಾರತವೇ ಪೂರೈಸುತ್ತದೆ.

ಆದರೆ, ಭಾರತದಲ್ಲಿ ತಯಾರಾಗುವ ಔಷಧಗಳ ಗುಣಮಟ್ಟದ ಕುರಿತು ಜಾಗತಿಕ ಮಟ್ಟದಲ್ಲಿ ಆಗಾಗ ಆಕ್ಷೇಪಗಳು ಕೇಳಿ ಬಂದಿವೆ. ಹಲವು ದೇಶಗಳು ಭಾರತದಿಂದ ಆಮದು ಮಾಡಲಾಗುವ ಕೆಲವು ಔಷಧಗಳಿಗೆ ನಿಷೇಧ ಹೇರಿದ ಉದಾಹರಣೆಗಳೂ ಇವೆ. ಐರೋಪ್ಯ ಒಕ್ಕೂಟವು ಭಾರತದ 700 ಜೆನರಿಕ್ ಔಷಧಗಳನ್ನು ನಿಷೇಧಿಸಿದ್ದು ತೀರಾ ಇತ್ತೀಚೆಗಿನ ಉದಾಹರಣೆ. ವೈಜ್ಞಾನಿಕ ಕಾರಣಗಳಿಗಾಗಿ ಔಷಧಗಳನ್ನು ನಿರ್ಬಂಧಿಸಲಾಗಿದೆ ಎಂದು ಒಕ್ಕೂಟ ಹೇಳಿದೆ.

ಭಾರತದ ಕಂಪನಿಗಳು ತಯಾರಿಸಿದ ಕೆಮ್ಮಿನ ಸಿರಪ್ಗಳನ್ನು ಕುಡಿದು ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನದಲ್ಲಿ ಮಕ್ಕಳು ಮೃತಪಟ್ಟಾಗ ಈ ಸಿರಪ್ಗಳನ್ನು ಬಳಸುವುದರ ವಿರುದ್ಧ ಜಗತ್ತಿನ ಇತರ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯೇ (ಡಬ್ಲ್ಯುಎಚ್ಒ) ಎಚ್ಚರಿಕೆ ನೀಡಿತ್ತು. ಈ ಎರಡು ದೇಶಗಳಲ್ಲಿ ನಡೆದ ಘಟನೆಯ ಬಳಿಕ ಹಲವು ರಾಷ್ಟ್ರಗಳು ಭಾರತದ ಔಷಧಗಳಿಗೆ ನಿಷೇಧ ಹೇರಿದ್ದವು.

ಔಷಧಗಳ ತಯಾರಿಕಾ ಹಂತದಲ್ಲಿನ ಕೊರತೆಗಳ ಕಾರಣಕ್ಕೆ ಅಮೆರಿಕ ಕೂಡ ಈ ಹಿಂದೆ ಭಾರತ ಪೂರೈಸುತ್ತಿದ್ದ ಕೆಲವು ಜೆನರಿಕ್ ಔಷಧಗಳಿಗೆ (ರ್ಯಾನ್ಬಾಕ್ಸಿ ಕಂಪನಿಯ ಕೆಲವು ಔಷಧಗಳು) ನಿರ್ಬಂಧ ಹೇರಿತ್ತು. ಅಲ್ಲದೇ ಈ ಕಂಪನಿಗೆ ದೊಡ್ಡ ಮೊತ್ತದ ದಂಡವನ್ನೂ ವಿಧಿಸಿತ್ತು.

2023ರಲ್ಲಿ ಮಾರ್ಷಲ್ ದ್ವೀಪಗಳು ಮತ್ತು ಮೈಕ್ರೊನೇಸಿಯಾಗೆ ಭಾರತದಿಂದ ಪೂರೈಕೆಯಾಗಿದ್ದ ಔಷಧಗಳು ಕಲಬೆರಕೆಗೊಂಡಿವೆ ಎಂಬ ಸಂಗತಿ ಆಸ್ಟ್ರೇಲಿಯಾದ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದ್ದರಿಂದ, ಆ ಔಷಧಗಳನ್ನು ಭಾರತ ವಾಪಸ್ ತರಿಸಿಕೊಂಡಿತ್ತು.

2023ರ ಆರಂಭದಲ್ಲಿ ಲೈಬೇರಿಯಾ ದೇಶವು ಭಾರತದಿಂದ ಆಮದು ಮಾಡಿಕೊಂಡಿದ್ದ ಕೆಮ್ಮಿನ ಸಿರಪ್ ಕೂಡ ಕಲಬೆರಕೆಗೊಂಡಿದ್ದು ದೃಢಪಟ್ಟಿತ್ತು. ಅದೃಷ್ಟವಶಾತ್ ಅಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ.

ಅಗ್ಗದ ವಿಷಕಾರಿ ರಾಸಾಯನಿಕ ಬಳಕೆ

ಔಷಧಗಳ ಕಚ್ಚಾ ವಸ್ತುಗಳು ದುಬಾರಿ ಎಂಬ ಕಾರಣಕ್ಕೆ ಕೆಲವು ಕಂಪನಿಗಳು ಅವುಗಳಿಗೆ ನಕಲಿ ರಾಸಾಯನಿಕ ವಸ್ತುಗಳನ್ನು ಬಳಸುತ್ತವೆ ಎಂಬುದು ತಜ್ಞರ ವಿವರಣೆ.

ಉದಾಹರಣೆಗೆ ಕೆಮ್ಮಿನ ಸಿರಪ್ನಲ್ಲಿ ಸಾಮಾನ್ಯವಾಗಿ ಪ್ರೊಪಿಲೀನ್ ಗ್ಲೈಕಾಲ್ ಅನ್ನು ಬಳಸಲಾಗುತ್ತದೆ. ಆದರೆ, ಇದು ಕೊಂಚ ದುಬಾರಿ. ಹೀಗಾಗಿ, ಅಗ್ಗದ ಎಥಿಲೀನ್ ಗ್ಲೈಕಾಲ್ ಮತ್ತು ಡೈಎಥಿಲೀನ್ ಗ್ಲೈಕಾಲ್ ಅನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ.

ವಿಷಕಾರಿ ರಾಸಾಯನಿಕಗಳಾಗಿರುವ ಬ್ರೇಕ್ ಆಯಿಲ್ ಹಾಗೂ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಬಳಸುವ ಇವುಗಳು ಮನುಷ್ಯರ ಸೇವನೆಗೆ ಯೋಗ್ಯವಲ್ಲ ಎಂದು ವಿವರಿಸುತ್ತಾರೆ ಅವರು.

ಮಾರಕವಾದ ಕೆಮ್ಮಿನ ಸಿರಪ್

2019–20ರಲ್ಲಿ ಜಮ್ಮು ಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ್ದ 11 ಮಕ್ಕಳು ಸಾವು. ಡಿಜಿಟಲ್ ವಿಷನ್ ಎಂಬ ಕಂಪನಿ ಈ ಸಿರಪ್ ತಯಾರಿಸಿತ್ತು. ಬಣ್ಣ, ಶಾಯಿ, ಬ್ರೇಕ್ ಆಯಿಲ್ ತಯಾರಿಕೆಗೆ ಬಳಸುವ ಡೈಎಥಿಲೀನ್ ಗ್ಲೈಕಾಲ್ (ಡಿಇಜಿ) ಎಂಬ ರಾಸಾಯನಿಕ ಈ ಸಿರಪ್ನಲ್ಲಿ ಇರುವುದು ಪತ್ತೆಯಾಗಿತ್ತು

2022ರಲ್ಲಿ ಪಶ್ಚಿಮ ಆಫ್ರಿಕಾದ ದೇಶವಾದ ಗ್ಯಾಂಬಿಯಾದಲ್ಲಿ ಭಾರತದಿಂದ ಆಮದು ಮಾಡಿಕೊಂಡಿದ್ದ ನಾಲ್ಕು ಕೆಮ್ಮಿನ ಸಿರಪ್ಗಳನ್ನು ಸೇವಿಸಿ 66 ಮಕ್ಕಳು ಮೃತಪಟ್ಟಿದ್ದರು. ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ತಯಾರಿಸಿದ್ದ ಸಿರಪ್ನಲ್ಲಿ ಡೈಎಥಿಲೀನ್ ಗ್ಲೈಕಾಲ್ ಮಿತಿ ಮೀರಿದ ಪ್ರಮಾಣದಲ್ಲಿತ್ತು

2022ರ ಡಿಸೆಂಬರ್ನಲ್ಲಿ ಉಜ್ಬೇಕಿಸ್ತಾನದಲ್ಲಿ ಭಾರತದ ಕಂಪನಿಯೊಂದು ತಯಾರಿಸಿದ ಎರಡು ಕೆಮ್ಮಿನ ಸಿರಪ್ಗಳನ್ನು ಸೇವಿಸಿ 22 ಮಕ್ಕಳು ಕೊನೆಯುಸಿರೆಳೆದಿದ್ದರು. ಮ್ಯಾರಿಯನ್ ಬಯೊಟೆಕ್ ಕಂಪನಿ ತಯಾರಿಸಿದ್ದ ಈ ಸಿರಪ್ಗಳಲ್ಲಿ ಡಿಇಜಿ ಪ್ರಮಾಣ ಹೆಚ್ಚಿದ್ದುದು ಕಂಡು ಬಂದಿತ್ತು

‘ಮಕ್ಕಳಿಗೆ ಸಿರಪ್ ಬೇಡ’

ಐದು ವರ್ಷದ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ಗಳನ್ನು ಕೊಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ 2001ರಿಂದಲೂ ಹೇಳುತ್ತಾ ಬಂದಿದೆ. ಸಣ್ಣ ಮಕ್ಕಳಲ್ಲಿ ಇವುಗಳ ಪರಿಣಾಮಕಾರಿತ್ವ ಸಾಬೀತುಪಡಿಸುವಂತಹ ಮತ್ತು ಅವುಗಳು ಬೀರುವ ಅಡ್ಡಪರಿಣಾಮಗಳ ಬಗೆಗಿನ ಸಾಕ್ಷ್ಯಗಳು ಸೀಮಿತವಾಗಿವೆ ಎಂಬುದು ಅದರ ವಾದ.

50 ವರ್ಷಗಳಲ್ಲಿ ಕಲಬೆರಕೆಯಾಗಿರುವ ಕೆಮ್ಮಿನ ಸಿರಪ್ಗಳ ಸೇವನೆಯಿಂದ ಮಕ್ಕಳು ಮೃತಪಟ್ಟಂತಹ ಕನಿಷ್ಠ ಐದು ಪ್ರಕರಣಗಳು ಜಗತ್ತಿನಲ್ಲಿ ವರದಿಯಾಗಿವೆ. 2006ರಲ್ಲಿ ಪನಾಮಾದಲ್ಲಿ ವಿಷಕಾರಿ ರಾಸಾಯನಿಕ ಡೈಎಥಿಲೀನ್ ಗ್ಲೈಕಾಲ್ ಬೆರೆಸಿದ ಕೆಮ್ಮಿನ ಸಿರಪ್ ಸೇವಿಸಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.