ಕೇರಳದ ಪಾಲಕ್ಕಾಡ್ ಬಳಿಯ ಕೊಲ್ಲಂಗೋಡು ಪಟ್ಟಣದವರಾದ ನಿಮಿಷ ಪ್ರಿಯಾ ಅವರು ಯೆಮನ್ಗೆ ಹೋಗಿದ್ದು (2008) ಉತ್ತಮವಾದ ಬದುಕು ಅರಸಿ. ಹೋಗುವಾಗ ಜತೆಯಲ್ಲಿ ಅವರ ಗಂಡನೂ ಇದ್ದರು. ಒಂದಷ್ಟು ವರ್ಷ ಯೆಮನ್ ರಾಜಧಾನಿ ಸನಾ ನಗರದ ವಿವಿಧ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕೆಲಸ ಮಾಡಿದರು. ಅಲ್ಲಿ ಅವರಿಗೆ ಒಂದು ಹೆಣ್ಣುಮಗುವೂ ಜನಿಸಿತು. ಆದರೆ, ನಿರೀಕ್ಷಿಸಿದಂತೆ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲಿಲ್ಲ ಎಂದು ಗಂಡ ಮತ್ತು ಮಗಳು ಕೇರಳಕ್ಕೆ ವಾಪಸ್ಸಾದರು. ಏಕಾಂಗಿಯಾಗಿ ಸನಾ ನಗರದಲ್ಲಿ ವಾಸ ಮಾಡುತ್ತಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ತಾವೇ ಏಕೆ ಒಂದು ಕ್ಲಿನಿಕ್ ನಡೆಸಬಾರದು ಎನ್ನುವ ಯೋಚನೆ ಬಂತು. ಆ ದೇಶದ ನಿಯಮದ ಪ್ರಕಾರ, ಅಲ್ಲಿನ ಪ್ರಜೆಯೊಬ್ಬರನ್ನು ಪಾಲುದಾರರನ್ನಾಗಿ ಮಾಡಿಕೊಂಡರೆ ಮಾತ್ರ ಅದು ಸಾಧ್ಯವಿತ್ತು. ಆ ರೀತಿ ನಿಮಿಷ ಅವರಿಗೆ ಜತೆಯಾದವರು ಯೆಮನ್ ಪ್ರಜೆ ತಲಾಲ್ ಅಬ್ದೊ ಮೆಹ್ದಿ.

ಕ್ಲಿನಿಕ್ ಆರಂಭಿಸಿದ ನಂತರ ನಿಮಿಷ ಮತ್ತು ಮೆಹ್ದಿ ನಡುವೆ ಮನಸ್ತಾಪ ಹುಟ್ಟಿಕೊಂಡಿತು. ಒಂದು ಮೂಲದ ಪ್ರಕಾರ, ‘ನಿಮಿಷ ನನ್ನ ಹೆಂಡತಿ’ ಎಂದು ಮೆಹ್ದಿ ಹೇಳಿಕೊಂಡು ತಿರುಗುತ್ತಿದ್ದುದೇ ಅದಕ್ಕೆ ಕಾರಣ. ಜತೆಗೆ, ನಿಮಿಷ ಅವರಿಗೆ ಮೆಹ್ದಿಯು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ನಿಮಿಷ ಬಳಿ ಇದ್ದ ಹಣ ಮತ್ತು ಪಾಸ್ಪೋರ್ಟ್ ಅನ್ನೂ ಕಸಿದುಕೊಂಡಿದ್ದರು ಎನ್ನುವ ಆರೋಪಗಳಿವೆ. ಇದರಿಂದ ಕಂಗೆಟ್ಟಿದ್ದ ನಿಮಿಷ ಅವರು, ಹೇಗಾದರೂ ಮಾಡಿ ಅವುಗಳನ್ನು ಮರಳಿ ಪಡೆಯಬೇಕು ಎನ್ನುವ ತವಕದಲ್ಲಿ ಮೆಹ್ದಿಗೆ ಮತ್ತು ಬರಿಸುವ ಚುಚ್ಚುಮದ್ದು ನೀಡಿದ್ದರು. ಆದರೆ, ಅದರ ಡೋಸ್ ಹೆಚ್ಚಾಗಿ ಮೆಹ್ದಿ ಉಸಿರು ಚೆಲ್ಲಿದ್ದರು. ಪ್ರಕರಣವನ್ನು ಮುಚ್ಚಿಹಾಕಲು ನಿಮಿಷ ಅವರು ಮೆಹ್ದಿಯ ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ, ಟ್ಯಾಂಕ್ಗೆ ಎಸೆದಿದ್ದರು ಎಂದೂ ಹೇಳಲಾಗುತ್ತಿದೆ. ಈ ಪ್ರಕರಣದ ನಂತರ ನಿಮಿಷ ಅವರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ; ಸಾವನ್ನು ಎದುರುನೋಡುತ್ತಲೇ ಎಂಟು ವರ್ಷಗಳಿಂದ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ.

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ ಪ್ರಿಯಾ ಅವರಿಗೆ ಅಲ್ಲಿನ ಸ್ಥಳೀಯ ನ್ಯಾಯಾಲಯವು ಮರಣ ದಂಡನೆ ವಿಧಿಸಿತು. ಅಲ್ಲಿನ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಯೆಮನ್ನ ಅಧ್ಯಕ್ಷ ರಷದ್ ಅಲ್–ಅಲಿಮಿ ಕೂಡ ಮರಣ ದಂಡನೆಯನ್ನು ಅನುಮೋದಿಸಿದರು. ಎಲ್ಲ ದಾರಿಗಳೂ ಮುಚ್ಚಿಹೋದವು ಎನ್ನುವಂಥ ಸ್ಥಿತಿಯಲ್ಲಿ ಅವರಿಗೆ ಬೆಳಕಿಂಡಿಯಾಗಿ ಕಂಡದ್ದು ಪರಿಹಾರ ನೀಡಿ ಕ್ಷಮಾದಾನ ಗಳಿಸುವ ದಾರಿ (ಬ್ಲಡ್ ಮನಿ). ಆದರೆ, ಅದಕ್ಕೆ ಕೊಲೆಗೀಡಾದ ಮೆಹ್ದಿ ಕುಟುಂಬಸ್ಥರ ಅನುಮತಿ ಬೇಕು. ಈ ದಿಸೆಯಲ್ಲಿ ನಿಮಿಷ ಅವರ ತಾಯಿ ಪ್ರೇಮಾಕುಮಾರಿ ಮತ್ತು ಪತಿ ಟೋಮಿ ಥಾಮಸ್ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ನಿಮಿಷ ಅವರ ರಕ್ಷಣೆಗಾಗಿಯೇ ವಕೀಲರು ಮತ್ತು ಇತರರು ಇರುವ ಅಂತರರಾಷ್ಟ್ರೀಯ ಕಾರ್ಯಪಡೆಯೊಂದು ರಚನೆಯಾಗಿದ್ದು, ಭಾರತ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.

2024ರ ಏಪ್ರಿಲ್ನಿಂದಲೂ ನಿಮಿಷ ಅವರ ತಾಯಿ ಯೆಮನ್ನಲ್ಲಿದ್ದು, ಮಗಳ ಬಿಡುಗಡೆಗಾಗಿ ಶ್ರಮಿಸುತ್ತಿದ್ದಾರೆ. ಮಗಳನ್ನು ಕ್ಷಮಿಸುವುದಾದರೆ, ಅದಕ್ಕಾಗಿ ದುಬಾರಿ ಮೊತ್ತದ ಪರಿಹಾರ ನೀಡುವುದಾಗಿ ಅವರು ಪ್ರತಿಪಾದಿಸುತ್ತಿದ್ದಾರೆ. ವಕೀಲರ ಮೂಲಕ ಮೆಹ್ದಿ ಕುಟುಂಬದೊಂದಿಗೆ ಮಾತುಕತೆಗೆ ಪ್ರಯತ್ನ ನಡೆಸುತ್ತಿದ್ದಾರೆ.

ಯೆಮನ್ನಲ್ಲಿ ಯುದ್ಧರೀತಿಯ ಸ್ಥಿತಿಯಿದ್ದು, ರಾಜಧಾನಿ ಸನಾವು ಹುಥಿ ಬಂಡುಕೋರರ ಹಿಡಿತದಲ್ಲಿದೆ. ಅವರೊಂದಿಗೆ ಭಾರತವು ಯಾವುದೇ ರೀತಿಯ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ. ಹೀಗಾಗಿ ಭಾರತ ಸರ್ಕಾರವು ಯೆಮನ್ನೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇಲ್ಲ. ಆದರೂ ರಾಜತಾಂತ್ರಿಕ ಅಧಿಕಾರಿಗಳು ನಿಮಿಷ ಅವರ ಕುಟುಂಬಸ್ಥರೊಂದಿಗೆ ಕೈಜೋಡಿಸಿದ್ದು, ನಿಮಿಷ ಅವರ ಬಿಡುಗಡೆಗೆ ಇರುವ ದಾರಿಗಳ ಹುಡುಕಾಟದಲ್ಲಿದ್ದಾರೆ.

ನಿಮಿಷ ಅವರ ಗಂಡ ಟೋಮಿ ಥಾಮಸ್ ಒಬ್ಬ ಕಾರು ಚಾಲಕನಾದರೆ, ತಾಯಿ ಪ್ರೇಮಾಕುಮಾರಿ ಮನೆಗೆಲಸ ಮಾಡಿಕೊಂಡು ಬದುಕು ನಡೆಸುವವರು. ವಕೀಲರ ವೆಚ್ಚ ಮತ್ತು ಇತರ ಖರ್ಚುಗಳಿಗಾಗಿ ಅವರ ಕೇರಳದಲ್ಲಿದ್ದ ತಮ್ಮ ಮನೆ, ಕಾರು ಸೇರಿದಂತೆ ಎಲ್ಲ ಆಸ್ತಿಯನ್ನೂ ಮಾರಿದ್ದಾರೆ. ಅವರ ಮಗಳು ವಸತಿ ಶಾಲೆಯಲ್ಲಿದ್ದು, 7ನೇ ತರಗತಿ ಓದುತ್ತಿದ್ದಾಳೆ. ಇದು ಸಾಲದು ಎನ್ನುವಂತೆ ಯೆಮನ್ನಲ್ಲಿ ಕ್ಲಿನಿಕ್ ಆರಂಭಿಸಲು ಅವರು ಮಾಡಿದ್ದ ₹60 ಲಕ್ಷದ ಸಾಲವೂ ಇದೆ. ಆದರೂ ಈ ಕುಟುಂಬ ಭರವಸೆ ಕಳೆದುಕೊಂಡಿಲ್ಲ. ನಿಮಿಷ ಅವರು ಬಿಡುಗಡೆಯಾಗುತ್ತಾರೆ ಎನ್ನುವ ವಿಶ್ವಾಸದಿಂದಿದೆ. ಅದಕ್ಕಾಗಿ ದಾನಿಗಳು ಮತ್ತಿತರರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ನಿಮಿಷ ಅವರ ತಾಯಿಯು ಯೆಮನ್ನಿಂದ ವಿಡಿಯೊ ಮೂಲಕ ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಸ್ಯಾಮ್ಯುಯೆಲ್ ಜೆರೋಮ್ ರೀತಿಯ ಹಲವು ಸಮಾಜ ಸೇವಕರು, ವಕೀಲರು ನಿಮಿಷ ಅವರ ಕುಟುಂಬದ ನೆರವಿಗೆ ನಿಂತಿದ್ದು, ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಇರಾನ್ ಕೂಡಾ ಪ್ರಯತ್ನ ಪಡುತ್ತಿರುವುದಾಗಿ ಹೇಳಿದೆ.

‘ಕ್ಷಮೆಗಾಗಿ ಪರಿಹಾರ’

ಇಂಗ್ಲಿಷ್ನಲ್ಲಿ ಇದನ್ನು ‘ಬ್ಲಡ್ ಮನಿ’ ಎಂದು ಕರೆಯಲಾಗುತ್ತದೆ. ಅರಬ್ಬೀ ಭಾಷೆಯಲ್ಲಿ ‘ದಿಯಾ’ ಎನ್ನಲಾಗುತ್ತದೆ. ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಪ್ರಕರಣದ ತಪ್ಪಿತಸ್ಥರು/ಆರೋಪಿಗಳು ಪರಿಹಾರದ ರೂಪದಲ್ಲಿ ನೀಡುವ ಮೊತ್ತವೇ
ದಿಯಾ.

ಇಸ್ಲಾಂ ಷರಿಯಾ ಕಾನೂನು ಅನುಸರಿಸುವ ರಾಷ್ಟ್ರಗಳಲ್ಲಿ ಕ್ಷಮೆಗಾಗಿ ಪರಿಹಾರದ ಮೊತ್ತ ನೀಡುವ ಪದ್ಧತಿ ಅನುಸರಿಸಲಾಗುತ್ತದೆ. ಈ ನಿಯಮದ ಅಡಿಯಲ್ಲಿ ಅಪರಾಧ ಕೃತ್ಯ ಎಸಗಿದ ವ್ಯಕ್ತಿಯು ಪ್ರಕರಣದ ಸಂತ್ರಸ್ತ ಅಥವಾ ಅವರ ಕುಟುಂಬದವರಿಗೆ ನಿರ್ದಿಷ್ಟ ಪ್ರಮಾಣದ ಬೆಲೆಬಾಳುವ ವಸ್ತುವನ್ನು (ಬಹುತೇಕ ಸಂದರ್ಭಗಳಲ್ಲಿ ಹಣವೇ ಆಗಿರುತ್ತದೆ) ನೀಡಬೇಕಾಗುತ್ತದೆ. ಹತ್ಯೆ ಪ್ರಕರಣಗಳಲ್ಲಿ ಪ್ರಮುಖವಾಗಿ ಈ ಪದ್ಧತಿಯನ್ನು ಬಳಸಲಾಗುತ್ತದೆ.

ಸಂತ್ರಸ್ತನ ಜೀವಕ್ಕೆ ಬೆಲೆ ಕಟ್ಟುವ ಉದ್ದೇಶ ಇದರದ್ದಲ್ಲ; ಬದಲಿಗೆ ಅಪರಾಧಿಯ ಕುಟುಂಬದ ಕಷ್ಟ ಹಾಗೂ ಶಿಕ್ಷೆಯಾಗುವುದರಿಂದ ಅಪರಾಧಿಯ ಕುಟುಂಬದ ಮೇಲೆ ಬೀರುವ ಪರಿಣಾಮವನ್ನು ತಗ್ಗಿಸುವ ಸದಾಶಯವನ್ನು ಇದು ಹೊಂದಿದೆ ಎಂದು ವಿವರಿಸಲಾಗಿದೆ. ಕುಟುಂಬವು ಮರಣ ದಂಡನೆಯಿಂದ ಕ್ಷಮಾದಾನ ನೀಡಿದರೂ ನ್ಯಾಯಾಲಯ/ಸರ್ಕಾರಗಳು ತಪ್ಪಿತಸ್ಥರಿಗೆ ಬೇರೆ ಸ್ವರೂಪದ ಶಿಕ್ಷೆ ನೀಡಬಹುದು. ಹಲವು ಅರಬ್ ರಾಷ್ಟ್ರಗಳು ಈ ಕ್ಷಮಾದಾನ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಆದರೆ, ಕೆಲವು ಕಡೆಗಳಲ್ಲಿ ನಿಯಮ ಅನುಸರಣೆಯಲ್ಲಿ ವ್ಯತ್ಯಾಸಗಳಿವೆ.

ಕ್ಷಮೆ: ₹8.57 ಕೋಟಿ ಪರಿಹಾರದ ಪ್ರಸ್ತಾಪ

ನಿಮಿಷ ಪ್ರಿಯಾ ಪ್ರಕರಣದಲ್ಲಿ ಅವರ ಕುಟುಂಬದವರು ಮೆಹ್ದಿಯ ಕುಟುಂಬದವರಿಗೆ 10 ಲಕ್ಷ ಡಾಲರ್ (ಸುಮಾರು ₹8.57 ಕೋಟಿ) ಹಣವನ್ನು ಕ್ಷಮಾದಾನ ಪರಿಹಾರವನ್ನಾಗಿ ನೀಡಲು ಮುಂದೆ ಬಂದಿದ್ದಾರೆ. ಆದರೆ, ಇದನ್ನು ಮೆಹ್ದಿ ಕುಟುಂಬ ಇನ್ನೂ ಒಪ್ಪಿಲ್ಲ. ಯೆಮನ್ನಲ್ಲಿ ಅಶಾಂತಿ ನೆಲಸಿರುವುದರಿಂದ ರಾಜಿ ಸಂಧಾನ ಮಾತುಕತೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗಿಲ್ಲ ಎಂದೂ ಹೇಳಲಾಗುತ್ತಿದೆ.

14ರಂದು ‘ಸುಪ್ರೀಂ’ ವಿಚಾರಣೆ

ನಿಮಿಷ ಅವರನ್ನು ಶಿಕ್ಷೆಯಿಂದ ಪಾರು ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳು, ವಿವಿಧ ಸಂಘಟನೆಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೇಲೆ ಒತ್ತಡ ಹಾಕುತ್ತಿವೆ. ಬೆಳವಣಿಗೆಯನ್ನು ಗಮನಿಸುತ್ತಿರುವುದಾಗಿ ಸಚಿವಾಲಯ ಹೇಳಿದೆ.

ನರ್ಸ್ ಅನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಸಮ್ಮತಿಸಿದ್ದು, 14ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ‘ಸೇವ್ ನಿಮಿಷ ಪ್ರಿಯಾ–ಇಂಟರ್ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್’ ಎಂಬ ಸಂಘಟನೆ ಈ ಅರ್ಜಿ ಸಲ್ಲಿಸಿದೆ.

ಅರ್ಜಿಯ ಪ್ರತಿಯೊಂದನ್ನು ಅಟಾರ್ನಿ ಜನರಲ್ ಅವರಿಗೂ ನೀಡುವಂತೆ ವಕೀಲರಿಗೆ ತಿಳಿಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ, ಈ ಪ್ರಕರಣದಲ್ಲಿ ಅಟಾರ್ನಿ ಜನರಲ್ ಅವರ ನೆರವನ್ನೂ ಬಯಸಿದೆ.

ಆಧಾರ: ಪಿಟಿಐ, ಬಿಬಿಸಿ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.