ಹೇಮಾವತಿ ನದಿ ನೀರು ಹಂಚಿಕೆ ವಿವಾದ ತುಮಕೂರು ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗಳಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ‘ಹಂಚಿಕೆ’ ರಾಜಕೀಯ ಸ್ವರೂಪ ಪಡೆದುಕೊಂಡ ನಂತರ ಹಲವು ಮಗ್ಗಲು ದಾಟಿ ಸಾಗುತ್ತಿದೆ. ನೀರು ಹರಿಸುವ ವಿಚಾರದಲ್ಲಿ ರಾಜಕಾರಣ ನುಸುಳುತ್ತಿದ್ದಂತೆಯೇ ಪ್ರತಿಷ್ಠೆ, ದ್ವೇಷದ ಕಿಚ್ಚು ಹೆಚ್ಚಾಗಿದೆ. ‘ನೀ ಕೊಡೆ, ನಾ ಬಿಡೆ’ ಎಂಬ ಪರಿಸ್ಥಿತಿ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರ ಬೆಟ್ಟದಂತೆ ಎದ್ದು ನಿಂತಿದೆ. ಸಣ್ಣ ಕಿಡಿಯು ಜ್ವಾಲೆಯ ರೂಪ ಪಡೆದುಕೊಂಡಿದ್ದು, ಅಣ್ಣ–ತಮ್ಮಂದಿರಂತೆ ಇದ್ದ ತುಮಕೂರಿನ ಅಕ್ಕಪಕ್ಕದ ತಾಲ್ಲೂಕುಗಳು ಮತ್ತು ಎರಡೂ ಜಿಲ್ಲೆಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕೈಬಿಟ್ಟು ನಾಲೆ ಮೂಲಕ ನೀರು ಹರಿಸಲಿ. ಮೊದಲು ಕುಣಿಗಲ್ ಭಾಗಕ್ಕೆ ನೀರು ಹರಿಸಿದ ನಂತರ ಇತರೆ ಭಾಗಕ್ಕೆ ಕೊಡುವ ಬಗ್ಗೆ ನಿಯಮ ರೂಪಿಸಲಿ–ಬಿ.ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ
ತಮಗೆ ಬೇಕಾದವರನ್ನು ತಾಂತ್ರಿಕ ಸಮಿತಿಗೆ ನೇಮಿಸಿಕೊಂಡು ತಮಗೆ ಬೇಕಾದಂತೆ ವರದಿ ಬರೆಸಿಕೊಂಡಿದ್ದಾರೆ. ಈ ಯೋಜನೆಗೆ ನನ್ನ ವಿರೋಧವಿದೆ–ಎಸ್.ಆರ್.ಶ್ರೀನಿವಾಸ್, ಗುಬ್ಬಿ ಕಾಂಗ್ರೆಸ್ ಶಾಸಕ
ನಮ್ಮ ಪಾಲಿನ ನೀರನ್ನು ನಾವು ಕೇಳುತ್ತಿದ್ದೇವೆ. ಪಕ್ಕದ ತಾಲ್ಲೂಕಿನವರಿಗೆ ಅನ್ಯಾಯ ಮಾಡಿ ಕಿತ್ತುಕೊಳ್ಳುತ್ತಿಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ–ಡಾ. ಎಚ್.ಡಿ.ರಂಗನಾಥ್, ಕುಣಿಗಲ್ ಕಾಂಗ್ರೆಸ್ ಶಾಸಕ
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈಗಿರುವ ನಾಲೆಯಲ್ಲೇ ಕುಣಿಗಲ್‌ಗೆ ನೀರು ಹರಿಸಬೇಕು. ಕಾಮಗಾರಿ ನಿಲ್ಲುವವರೆಗೂ ಹೋರಾಟ ಮುಂದುವರಿಯಲಿದೆ–ಎ.ಗೋವಿಂದರಾಜು, ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.