ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೂರನೇ ಉಡಾವಣೆ ನಡೆಸಿದೆ. ಎನ್ವಿಎಸ್–02 ಉಪಗ್ರಹ ಹೊತ್ತ ಜಿಎಸ್ಎಲ್ವಿ–ಎಫ್15 ರಾಕೆಟ್ ಇಲ್ಲಿಂದ ಉಡಾವಣೆಯಾಗಿದ್ದು, ಯಶಸ್ವಿಯಾಗಿ ಕಕ್ಷೆ ಸೇರಿದೆ. ಇದರೊಂದಿಗೆ ಇಸ್ರೊ ಮತ್ತು ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರವು ಭಾರತದ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಆಂಧ್ರಪ್ರದೇಶದಲ್ಲಿರುವ ಶ್ರೀಹರಿಕೋಟ ದಶಕಗಳ ಹಿಂದೆ ಹೊರಜಗತ್ತಿನೊಂದಿಗೆ ಅಷ್ಟಾಗಿ ಸಂಪರ್ಕವೇ ಇಲ್ಲದಿದ್ದ ಒಂದು ದ್ವೀಪವಾಗಿತ್ತು. ಇಂದು ಆ ಪ್ರದೇಶವು ಜಗತ್ತಿನ ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇಸ್ರೊದ ಪ್ರಮುಖ ಉಡಾವಣಾ ಕೇಂದ್ರವಾಗಿದೆ. ರಾಕೆಟ್ ಉಡಾವಣೆಗೆ ಅಗತ್ಯವಾದ ಮೂಲಸೌಕರ್ಯವನ್ನು ಹೊಂದಿದೆ. ಇಸ್ರೊದ ರಾಕೆಟ್ಗಳ ನಿರ್ಮಾಣ, ಜೋಡಣೆ ಮತ್ತು ಉಡಾವಣೆಗೆ ಅಗತ್ಯವಾದ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಇಲ್ಲಿ ಎರಡು ಲಾಂಚ್ ಪ್ಯಾಡ್ಗಳಿದ್ದು (ಉಡಾವಣಾ ಕಟ್ಟೆ), ಮೂರನೇ ಲಾಂಚ್ ಪ್ಯಾಡ್ ಅನ್ನು ₹3,984 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಪೂರ್ವ ಕರಾವಳಿಯಲ್ಲಿ, ಜನವಸತಿ ಪ್ರದೇಶಗಳಿಂದ ದೂರದಲ್ಲಿ ರಾಕೆಟ್ ಉಡಾವಣಾ ಕೇಂದ್ರವನ್ನು ಆರಂಭಿಸಬೇಕು ಎನ್ನುವುದು ವಿಕ್ರಮ್ ಸಾರಾಭಾಯ್ ಅವರ ಕನಸು. ಇಸ್ರೊದ ವಿವಿಧ ರೀತಿಯ ಬಾಹ್ಯಾಕಾಶ ಯೋಜನೆಗಳಿಗೆ ತಕ್ಕಂತೆ ವ್ಯವಸ್ಥಿತವಾದ ಸಂಶೋಧನೆ ಮತ್ತು ಉಡಾವಣಾ ಕೇಂದ್ರವನ್ನು ಸಜ್ಜುಗೊಳಿಸಬೇಕು ಎಂಬ ಆಶಯದೊಂದಿಗೆ ಸ್ಥಳದ ಹುಡುಕಾಟದಲ್ಲಿ ತೊಡಗಿದ ವಿಕ್ರಮ್ ಅವರ ತಂಡ ಕೊನೆಗೆ ಬಂದು ನಿಂತದ್ದು ಶ್ರೀಹರಿಕೋಟಕ್ಕೆ.

ಒಂದು ಕಡೆ ಪುಲಿಕಾಟ್ ಸರೋವರ, ಮತ್ತೊಂದು ಕಡೆ ಬಂಗಾಳ ಕೊಲ್ಲಿ, ಮಗದೊಂದು ಕಡೆ ಬಕಿಂಗ್ಹ್ಯಾಮ್ ಕಾಲುವೆಯಿಂದ ಸುತ್ತುವರಿದಿರುವ ಶ್ರೀಹರಿಕೋಟ ಒಂದು ದ್ವೀಪವಾಗಿದೆ. 50 ಕಿ.ಮೀ. ತೀರಪ್ರದೇಶ ಹೊಂದಿರುವ ಈ ಪ್ರದೇಶ 43,360 ಎಕರೆಯಲ್ಲಿ ವ್ಯಾಪಿಸಿದೆ. ನೀಲಗಿರಿ ಮರಗಳಿಂದ ಹಿಡಿದು ಅಪರೂಪದ ಸಸ್ಯ, ಮರಗಳಿಂದ ಕೂಡಿರುವ ಶ್ರೀಹರಿಕೋಟಕ್ಕೆ ಪ್ರತಿವರ್ಷದ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ವಲಸೆ ಹಕ್ಕಿಗಳು ಭೇಟಿ ನೀಡುತ್ತವೆ. ಈ ಮೂಲಕ ಇದೊಂದು ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ.

1969ರಲ್ಲಿ ಶ್ರೀಹರಿಕೋಟದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಅನ್ನು ಸ್ಥಾಪಿಸಲಾಯಿತು. 1971ರ ಅ.9ರಂದು ಕೇಂದ್ರವು ಕಾರ್ಯಾರಂಭ ಮಾಡಿತು. ಮುಂದೆ ಹಂತಹಂತವಾಗಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಯಿತು. 2002ರ ಸೆ.5ರಂದು ಇದಕ್ಕೆ ಇಸ್ರೊ ಮಾಜಿ ಅಧ್ಯಕ್ಷ ಸತೀಶ್ ಧವನ್ ಅವರ ಸ್ಮರಣಾರ್ಥ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್ಡಿಎಸ್ಸಿ –ಎಸ್ಎಚ್ಎಆರ್) ಎಂದು ನಾಮಕರಣ ಮಾಡಲಾಯಿತು.

ಶ್ರೀಹರಿಕೋಟವೇ ಏಕೆ?: ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂಥ ಹಲವು ಕೇಂದ್ರಗಳು ದೇಶದಲ್ಲಿವೆ. ತಿರುವನಂತಪುರದಲ್ಲಿ ಉಪಗ್ರಹ ನಿರ್ಮಾಣ ಕೇಂದ್ರ ಇದೆ. ಇಂಥ ಕೇಂದ್ರಗಳ ಪೈಕಿ ಎಸ್ಡಿಎಸ್ಸಿ– ಎಸ್ಎಚ್ಎಆರ್ಗೆ ಮಹತ್ವದ ಸ್ಥಾನವಿದೆ. ಇಸ್ರೊ ಉಪಗ್ರಹ/ರಾಕೆಟ್ ಉಡಾವಣೆಗೆ ಶ್ರೀಹರಿಕೋಟವನ್ನೇ ಆಯ್ಕೆ ಮಾಡಲು ಹಲವು ಕಾರಣಗಳಿವೆ.

ಶ್ರೀಹರಿಕೋಟ ಭೂಮಧ್ಯೆ ರೇಖೆಗೆ ಅತಿ ಹತ್ತಿರದಲ್ಲಿದೆ. ಇಲ್ಲಿಂದ ರಾಕೆಟ್ ಉಡಾವಣೆ ಮಾಡಿದರೆ, ಹೆಚ್ಚಿನ ವೇಗದಲ್ಲಿ ನಭಕ್ಕೆ ಹಾರುತ್ತದೆ. ಭೂಮಧ್ಯೆ ರೇಖೆಯ ಸನಿಹದಿಂದ ಉಡಾಯಿಸಿದರೆ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದು ಸುಲಭ. ಇಲ್ಲದಿದ್ದರೆ, ಗುರುತ್ವಾಕರ್ಷಣೆಗೆ ಒಳಗಾಗಿ ಅವು ಪಥ ಬದಲಾಯಿಸುವ ಸಾಧ್ಯತೆ ಇರುತ್ತದೆ.

ನಭದತ್ತ ಚಿಮ್ಮಿದ ರಾಕೆಟ್ಗಳು ಎಲ್ಲ ಸಂದರ್ಭಗಳಲ್ಲಿಯೂ ಕಕ್ಷೆ ಸೇರುತ್ತವೆ ಎಂದು ಹೇಳಲಾಗದು. ತಾಂತ್ರಿಕ ಕಾರಣಗಳಿಂದ ಕೆಲವೊಮ್ಮೆ ಅವು ಕೆಳಕ್ಕೆ ಬೀಳುವುದೂ ಉಂಟು. ಶ್ರೀಹರಿಕೋಟದ ಪೂರ್ವದಲ್ಲಿ ವಿಸ್ತಾರವಾದ ಸಮುದ್ರ ಇದೆ. ಒಂದೊಮ್ಮೆ ರಾಕೆಟ್ಗಳು ಬಿದ್ದರೂ ಅವು ಜನರ ಮೇಲಾಗಲಿ, ಮನೆಗಳ ಮೇಲಾಗಲಿ ಬೀಳದೇ ಸಮುದ್ರದಲ್ಲಿ ಬೀಳುತ್ತವೆ.

ಶ್ರೀಹರಿಕೋಟಕ್ಕೆ ನೆಲ, ಜಲ ಮಾರ್ಗ ಸೇರಿದಂತೆ ಸಂಚಾರಕ್ಕೆ ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಭಾರಿ ಯಂತ್ರಗಳು, ತೂಕದ ಸಲಕರಣೆಗಳನ್ನು ಸಾಗಿಸಲು ಇದರಿಂದ ಅನುಕೂಲ.

ನೈಋತ್ಯ ಮತ್ತು ಈಶಾನ್ಯ ಮಾರುತಗಳೆರಡೂ ಇಲ್ಲಿಂದ ಹಾದುಹೋಗುತ್ತವೆ. ಈಶಾನ್ಯ ಮಾರುತಗಳು ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಮಾತ್ರವೇ ಈ ಭಾಗದಲ್ಲಿ ಮಳೆ ಸುರಿಸುತ್ತವೆ. ಮಳೆ ಕಡಿಮೆ ಇರುವುದರಿಂದ ಉಪಗ್ರಹ ಜೋಡಣೆ, ಉಡಾವಣೆಗೆ ಸಂಬಂಧಿಸಿದ ಹೊರಾಂಗಣದ ಕೆಲಸಗಳಿಗೆ ಹೆಚ್ಚು ಅನುಕೂಲ. ರಾಕೆಟ್ ಉಡಾವಣೆಯ ಸಮಯದಲ್ಲಿ ಭೂಮಿಯು ಕಂಪಿಸುತ್ತದೆ. ಹೀಗಾಗಿ ಉಡಾವಣೆಯ ಸ್ಥಳವು ಗಟ್ಟಿಯಾಗಿರಬೇಕು. ಶ್ರೀಹರಿಕೋಟದ ಭೂಮಿಯು ದೃಢವಾಗಿದ್ದು, ರಾಕೆಟ್ ಉಡಾವಣೆಗೆ ಸೂಕ್ತವಾಗಿದೆ.

ಫ್ರೆಂಚ್ ಗಯಾನಾದಲ್ಲಿರುವ ಕೌರೌ, ಅಮೆರಿಕದಲ್ಲಿರುವ ಫ್ಲಾರಿಡಾ ಕೆನಡಿ ಬಾಹ್ಯಾಕಾಶ ಕೇಂದ್ರಗಳೂ ಭೂಮಧ್ಯೆ ರೇಖೆಗೆ ಸನಿಹದಲ್ಲಿವೆ. ಯೂರೋಪ್ನ ರಾಕೆಟ್ಗಳನ್ನೂ ಕೆನಡಿ ಬಾಹ್ಯಾಕಾಶ ಕೇಂದ್ರದಿಂದಲೇ ಉಡಾವಣೆ ಮಾಡಲಾಗುತ್ತದೆ.

ಮೊದಲ ಪ್ರಯತ್ನವೇ ಯಶಸ್ವಿ...

ಶ್ರೀಹರಿಕೋಟದ ಸತೀಶ್ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿಗೆ 1979ರ ಆಗಸ್ಟ್ 10ರಂದು ರಾಕೆಟ್ ಉಡಾವಣೆ ಮಾಡಲಾಗಿತ್ತು. ಉಡಾವಣೆ ಯಶಸ್ವಿಯಾಗಿತ್ತಾದರೂ, ಇಸ್ರೊ ನಡೆಸಿದ ಪ್ರಯೋಗ ಸಫಲವಾಗಿರಲಿಲ್ಲ. ಎಸ್ಎಲ್ವಿ–3 (ಸ್ಮಾಲ್ ಲಾಂಚ್ ವೆಹಿಕಲ್) ಎಂಬ ರಾಕೆಟ್ನಲ್ಲಿ 35 ಕೆ.ಜಿ ತೂಕದ ರೋಹಿಣಿ ಟೆಕ್ನಾಲಜಿ ಪೇಲೋಡ್ (ಆರ್ಟಿಪಿ) ಎಂಬ ಹೆಸರಿನ ಪ್ರಯೋಗಾತ್ಮಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಇಸ್ರೊ ಬಯಸಿತ್ತು. ಭಾರತದ ಮೊದಲ ರಾಕೆಟ್ ಎಸ್ಎಲ್ವಿ–3ಯ ಹಾರಾಟ, ಚಲನೆ, ವೇಗದ ಮೇಲ್ವಿಚಾರಣೆ ನಡೆಸುವ ಉಪಕರಣಗಳನ್ನು ಈ ಉಪಗ್ರಹ ಹೊಂದಿತ್ತು. ಆದರೆ, ಆ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಸೇರಿಸಲು ಇಸ್ರೊಗೆ ಸಾಧ್ಯವಾಗಿರಲಿಲ್ಲ.

ಸಾಧನೆಗಳ ‘ಚಿಮ್ಮು ಹಲಗೆ’

ಜಾಗತಿಕ ಮಟ್ಟದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ, ಅರ್ಥಾತ್ ಭಾರತ ಮಾಡಿರುವ ಅಭೂತಪೂರ್ವ ಸಾಧನೆಗಳಿಗೆ ‘ಚಿಮ್ಮು ಹಲಗೆ’ಯಾಗಿರುವುದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ, ರಷ್ಯಾ, ಚೀನಾದಂತಹ ರಾಷ್ಟ್ರಗಳು ಮಾಡಿರುವ, ಇತರ ಅಭಿವೃದ್ಧಿಹೊಂದಿದ ರಾಷ್ಟ್ರಗಳಿಗೂ ಸಾಧ್ಯವಾಗದಿರುವ ಪ್ರಯೋಗಗಳು, ಸಾಧನೆಗಳನ್ನು ಭಾರತಕ್ಕೆ ಮಾಡಲು ಸಾಧ್ಯವಾಗಿಸುವಲ್ಲಿ ಈ ಕೇಂದ್ರದ ಕೊಡುಗೆ ದೊಡ್ಡದಿದೆ. ಚಂದ್ರಯಾನ, ಮಂಗಳಯಾನ ಸೇರಿದಂತೆ ಇಸ್ರೊದ ಪ್ರಮುಖ ಯೋಜನೆಗಳ ಗಗನನೌಕೆಗಳನ್ನು ರಾಕೆಟ್ಗಳ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿದ್ದು ಇದೇ ಕೇಂದ್ರದಿಂದ. ಅಂತರಿಕ್ಷಕ್ಕೆ ಮಾನವವನ್ನು ಕಳುಹಿಸುವುದು ಸೇರಿದಂತೆ ಭವಿಷ್ಯದ ಯೋಜನೆಗಳಲ್ಲೂ ಇದು ಪ್ರಮುಖ ಪಾತ್ರವಹಿಸಲಿದೆ.

* ಚಂದ್ರನನ್ನು ಅಧ್ಯಯನ ನಡೆಸುವ ಇಸ್ರೊದ ಮೊದಲ ಪ್ರಯತ್ನ ಚಂದ್ರಯಾನ–1 ನೌಕೆಯನ್ನು 2008ರ ಅ.22ರಂದು ಪಿಎಸ್ಎಲ್ವಿ–ಸಿ11 ರಾಕೆಟ್ನಲ್ಲಿ ಇದೇ ಕೇಂದ್ರದಿಂದ ನಭಕ್ಕೆ ಕಳುಹಿಸಲಾಗಿತ್ತು. ಚಂದ್ರನ ಅಂಗಳದಲ್ಲಿ ನೀರು ಇರುವುದನ್ನು ಈ ಯೋಜನೆ ದೃಢಪಡಿಸಿತ್ತು. ಅದು ಈ ಕೇಂದ್ರದಿಂದ ನಡೆದಿದ್ದ 27ನೇ ಉಡಾವಣೆಯಾಗಿತ್ತು

* 2013ರ ನವೆಂಬರ್ 5ರಂದು ಮಂಗಳಗ್ರಹದ ಅಧ್ಯಯನಕ್ಕಾಗಿ ಮಂಗಳಗ್ರಹದ ಕಕ್ಷೆಗೆ ಕಳುಹಿಸಿದ್ದ ನೌಕೆಯನ್ನು (ಮಾರ್ಸ್ ಆರ್ಬಿಟರ್ ಮಿಷನ್) ಪಿಎಸ್ಎಲ್ವಿ–ಸಿ25 ರಾಕೆಟ್ ಮೂಲಕ ಕಳುಹಿಸಲಾಗಿತ್ತು. 2014ರ ಸೆಪ್ಟೆಂಬರ್ 24ರಂದು ನೌಕೆ ಮಂಗಳನ ಕಕ್ಷೆ ತಲುಪಿತ್ತು. ಭಾರತದ ಮೊದಲ ಈ ಅಂತರಗ್ರಹೀಯ ಯೋಜನೆಯು ಯಶಸ್ವಿಯಾಗಿತ್ತಲ್ಲದೆ, ಮಂಗಳ ಗ್ರಹದ ಬಳಿಗೆ ನೌಕೆಯನ್ನು ಕಳುಹಿಸಲು ಯಶಸ್ವಿಯಾದ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ (ಅಮೆರಿಕ, ರಷ್ಯಾ, ಚೀನಾ) ಭಾರತವೂ ಸೇರಿತು

* 2019ರ ಜುಲೈ 22ರಂದು ಚಂದ್ರನ ದಕ್ಷಿಣ ಧ್ರುವದ ಅಧ್ಯಯನಕ್ಕಾಗಿ ಎರಡನೇ ನೌಕೆ ಚಂದ್ರಯಾನ–2 ಅನ್ನು ಭಾರತ ಚಂದ್ರನಲ್ಲಿಗೆ ಜಿಎಸ್ಎಲ್ವಿ ಎಂಕೆ III-ಎಂ1 ರಾಕೆಟ್ ಮೂಲಕ ಕಳುಹಿಸಿತ್ತು. ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವುದು ಇಸ್ರೊ ಉದ್ದೇಶವಾಗಿತ್ತು. 2019ರ ಸೆ.7ರಂದು ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿತು

* ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸುವ, ಮೊದಲ ಪ್ರಯತ್ನದ ಮುಂದುವರಿದ ಭಾಗವಾಗಿ ಇಸ್ರೊ ಹಮ್ಮಿಕೊಂಡಿದ್ದ ಎರಡನೇ ಯೋಜನೆ ಚಂದ್ರಯಾನ–3ರ ನೌಕೆಯನ್ನು ಹೊತ್ತೊಯ್ದ ಎಲ್ವಿಎಂ3 ಎಂ4 ರಾಕೆಟ್ 2023ರ ಜುಲೈ 14ರಂದು ಇದೇ ಕೇಂದ್ರದಿಂದ ಆಗಸಕ್ಕೆ ಚಿಮ್ಮಿತ್ತು. ಇದು ಈ ಕೇಂದ್ರದಿಂದ ನಡೆದ 91ನೇ ಉಡಾವಣೆಯಾಗಿತ್ತು. 2023ರ ಆಗಸ್ಟ್ 23ರಂದು ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವುದರೊಂದಿಗೆ ಭಾರತವು ಚಂದ್ರನ ನೆಲದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು

* ಸೌರವ್ಯೂಹದ ಕೇಂದ್ರಬಿಂದು ಸೂರ್ಯನ ಅಧ್ಯಯನಕ್ಕಾಗಿ ಇಸ್ರೊ ರೂಪಿಸಿದ್ದ ಆದಿತ್ಯ–ಎಲ್1 ನೌಕೆಯು 2023ರ ಸೆ.2ರಂದು ಪಿಎಸ್ಎಲ್ವಿ ಸಿ–57 ರಾಕೆಟ್ ಮೂಲಕ ಇದೇ ಕೇಂದ್ರದಿಂದ ಬಾಹ್ಯಾಕಾಶಕ್ಕೆ ನೆಗೆದಿತ್ತು. ಇದು ಈ ಕೇಂದ್ರದಿಂದ ನಡೆದಿದ್ದ 93ನೇ ಉಡಾವಣೆ

ತಮಿಳುನಾಡಿನಲ್ಲಿ ಮತ್ತೊಂದು ಕೇಂದ್ರ

ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ರಾಕೆಟ್ ಉಡಾಯಿಸುವ ಸಾಮರ್ಥ್ಯವಿರುವ ಏಕೈಕ ಉಡಾವಣಾ ಕೇಂದ್ರ. ಇದಕ್ಕೆ ಪೂರಕವಾಗಿ ಇಸ್ರೊ, ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಣನಲ್ಲಿ ₹986 ಕೋಟಿ ವೆಚ್ಚದಲ್ಲಿ ರಾಕೆಟ್ ಉಡಾವಣಾ ಸಾಮರ್ಥ್ಯದ ಮತ್ತೊಂದು ಬಾಹ್ಯಾಕೇಶ ಕೇಂದ್ರವನ್ನು ನಿರ್ಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಫೆಬ್ರುವರಿ 28ರಂದು ಭೂಮಿಪೂಜೆ ನೆರವೇರಿಸಿದ್ದಾರೆ. ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಈ ಕೇಂದ್ರವನ್ನು ಬಳಸಲಾಗುವುದು ಎಂದು ಇಸ್ರೊದ ಹಿಂದಿನ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದರು.

ಕೇಂದ್ರ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿಯವರಿಗೆ ಅವಕಾಶ ಕಲ್ಪಿಸಲು ಮುಂದಾಗಿದ್ದು, ಹೆಚ್ಚು ಹೆಚ್ಚು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಅಧ್ಯಯನದಲ್ಲಿ ತೊಡಗಿದರೆ ಉಪಗ್ರಹಗಳ ಉಡಾವಣೆ ಇನ್ನಷ್ಟು ಹೆಚ್ಚಲಿದೆ. ಇದರಿಂದ ಸತೀಶ್ ಧವನ್ ಬಾಹ್ಯಾಕೇಂದ್ರ ಕೇಂದ್ರದ ಮೇಲೆ ಒತ್ತಡವೂ ಜಾಸ್ತಿಯಾಗಲಿದೆ. ಇದನ್ನು ತಪ್ಪಿಸುವುದಕ್ಕಾಗಿ ಮತ್ತೊಂದು ಉಡಾವಣಾ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

100 ಉಡಾವಣೆ ಮೈಲಿಗಲ್ಲಿನ ಹಾದಿ...

* ಮೊದಲ ಉಡಾವಣೆ 1979 ಆಗಸ್ಟ್ 10 ರೋಹಿಣಿ ತಂತ್ರಜ್ಞಾನ ಉಪಗ್ರಹ ಹೊತ್ತಿದ್ದ ಎಸ್ಎಲ್ವಿ–2 ಇ1 ರಾಕೆಟ್

* 25ನೇ ಉಡಾವಣೆ 2008ರ ಜನವರಿ 21 ಟಿಇಸಿಎಸ್ಎಆರ್ ಉಪಗ್ರಹ ಹೊಂದಿದ್ದ ಪಿಎಸ್ಎಲ್ವಿ–ಸಿ10 ರಾಕೆಟ್

* 50ನೇ ಉಡಾವಣೆ 2015ರ ಡಿ.16 ಟೆಎಲ್ಇಒಎಸ್–1 ಸೇರಿ ಸಿಂಗಪುರದ ಆರು ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ಎಲ್ವಿ–ಸಿ29 ರಾಕೆಟ್

* 40ನೇ ಉಡಾವಣೆ 2013ರ ನವೆಂಬರ್ 5 ಮಂಗಳಗ್ರಹದ ಅಧ್ಯಯನಕ್ಕಾಗಿ ಅದರ ಕಕ್ಷೆಗೆ ಭಾರತ ಕಳುಹಿಸಿದ್ದ ನೌಕೆ (ಮಾರ್ಚ್ ಆರ್ಬಿಟರ್ ಮಿಷನ್) ಹೊತ್ತೊಯ್ದಿದ್ದ ಪಿಎಸ್ಎಲ್ವಿ–ಸಿ25 ರಾಕೆಟ್

* 75ನೇ ಉಡಾವಣೆ 2019ರ ಜುಲೈ 22 ಚಂದ್ರಯಾನ–2 ನೌಕೆ ಹೊಂದಿದ್ದ ಜಿಎಸ್ಎಲ್ವಿ–ಎಂಕೆ–III-ಎಂ1 ರಾಕೆಟ್ 100ನೇ ಉಡಾವಣೆ 2025ರ ಜನವರಿ 29 ಪಥದರ್ಶಕ ಉಪಗ್ರಹ ಎನ್ವಿಎಸ್–02 ಉಪಗ್ರಹ ಹೊತ್ತಿದ್ದ ಜಿಎಸ್ಎಲ್ವಿ–ಎಫ್15 ರಾಕೆಟ್

ಮೊದಲ ಪ್ರಯತ್ನವೇ ಯಶಸ್ವಿ...

ಶ್ರೀಹರಿಕೋಟದ ಸತೀಶ್ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿಗೆ 1979ರ ಆಗಸ್ಟ್ 10ರಂದು ರಾಕೆಟ್ ಉಡಾವಣೆ ಮಾಡಲಾಗಿತ್ತು. ಉಡಾವಣೆ ಯಶಸ್ವಿಯಾಗಿತ್ತಾದರೂ ಇಸ್ರೊ ನಡೆಸಿದ ಪ್ರಯೋಗ ಸಫಲವಾಗಿರಲಿಲ್ಲ. ಎಸ್ಎಲ್ವಿ–3 (ಸ್ಮಾಲ್ ಲಾಂಚ್ ವೆಹಿಕಲ್) ಎಂಬ ರಾಕೆಟ್ನಲ್ಲಿ 35 ಕೆ.ಜಿ ತೂಕದ ರೋಹಿಣಿ ಟೆಕ್ನಾಲಜಿ ಪೇಲೋಡ್ (ಆರ್ಟಿಪಿ) ಎಂಬ ಹೆಸರಿನ ಪ್ರಯೋಗಾತ್ಮಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಇಸ್ರೊ ಬಯಸಿತ್ತು. ಭಾರತದ ಮೊದಲ ರಾಕೆಟ್ ಎಸ್ಎಲ್ವಿ–3ಯ ಹಾರಾಟ ಚಲನೆ ವೇಗದ ಮೇಲ್ವಿಚಾರಣೆ ನಡೆಸುವ ಉಪಕರಣಗಳನ್ನು ಈ ಉಪಗ್ರಹ ಹೊಂದಿತ್ತು. ಆದರೆ ಆ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಸೇರಿಸಲು ಇಸ್ರೊಗೆ ಸಾಧ್ಯವಾಗಿರಲಿಲ್ಲ.

ಸಾಧನೆಗಳ ‘ಚಿಮ್ಮು ಹಲಗೆ’

ಜಾಗತಿಕ ಮಟ್ಟದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊ ಅರ್ಥಾತ್ ಭಾರತ ಮಾಡಿರುವ ಅಭೂತಪೂರ್ವ ಸಾಧನೆಗಳಿಗೆ ‘ಚಿಮ್ಮು ಹಲಗೆ’ಯಾಗಿರುವುದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ರಷ್ಯಾ ಚೀನಾದಂತಹ ರಾಷ್ಟ್ರಗಳು ಮಾಡಿರುವ ಇತರ ಅಭಿವೃದ್ಧಿಹೊಂದಿದ ರಾಷ್ಟ್ರಗಳಿಗೂ ಸಾಧ್ಯವಾಗದಿರುವ ಪ್ರಯೋಗಗಳು ಸಾಧನೆಗಳನ್ನು ಭಾರತಕ್ಕೆ ಮಾಡಲು ಸಾಧ್ಯವಾಗಿಸುವಲ್ಲಿ ಈ ಕೇಂದ್ರದ ಕೊಡುಗೆ ದೊಡ್ಡದಿದೆ. ಚಂದ್ರಯಾನ ಮಂಗಳಯಾನ ಸೇರಿದಂತೆ ಇಸ್ರೊದ ಪ್ರಮುಖ ಯೋಜನೆಗಳ ಗಗನನೌಕೆಗಳನ್ನು ರಾಕೆಟ್ಗಳ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿದ್ದು ಇದೇ ಕೇಂದ್ರದಿಂದ. ಅಂತರಿಕ್ಷಕ್ಕೆ ಮಾನವವನ್ನು ಕಳುಹಿಸುವುದು ಸೇರಿದಂತೆ ಭವಿಷ್ಯದ ಯೋಜನೆಗಳಲ್ಲೂ ಇದು ಪ್ರಮುಖ ಪಾತ್ರವಹಿಸಲಿದೆ.

l ಚಂದ್ರನನ್ನು ಅಧ್ಯಯನ ನಡೆಸುವ ಇಸ್ರೊದ ಮೊದಲ ಪ್ರಯತ್ನ ಚಂದ್ರಯಾನ–1 ನೌಕೆಯನ್ನು 2008ರ ಅ.22ರಂದು ಪಿಎಸ್ಎಲ್ವಿ–ಸಿ11 ರಾಕೆಟ್ನಲ್ಲಿ ಇದೇ ಕೇಂದ್ರದಿಂದ ನಭಕ್ಕೆ ಕಳುಹಿಸಲಾಗಿತ್ತು. ಚಂದ್ರನ ಅಂಗಳದಲ್ಲಿ ನೀರು ಇರುವುದನ್ನು ಈ ಯೋಜನೆ ದೃಢಪಡಿಸಿತ್ತು. ಅದು ಈ ಕೇಂದ್ರದಿಂದ ನಡೆದಿದ್ದ 27ನೇ ಉಡಾವಣೆಯಾಗಿತ್ತು

l 2013ರ ನವೆಂಬರ್ 5ರಂದು ಮಂಗಳಗ್ರಹದ ಅಧ್ಯಯನಕ್ಕಾಗಿ ಮಂಗಳಗ್ರಹದ ಕಕ್ಷೆಗೆ ಕಳುಹಿಸಿದ್ದ ನೌಕೆಯನ್ನು (ಮಾರ್ಸ್ ಆರ್ಬಿಟರ್ ಮಿಷನ್) ಪಿಎಸ್ಎಲ್ವಿ–ಸಿ25 ರಾಕೆಟ್ ಮೂಲಕ ಕಳುಹಿಸಲಾಗಿತ್ತು. 2014ರ ಸೆಪ್ಟೆಂಬರ್ 24ರಂದು ನೌಕೆ ಮಂಗಳನ ಕಕ್ಷೆ ತಲುಪಿತ್ತು. ಭಾರತದ ಮೊದಲ ಈ ಅಂತರಗ್ರಹೀಯ ಯೋಜನೆಯು ಯಶಸ್ವಿಯಾಗಿತ್ತಲ್ಲದೆ ಮಂಗಳ ಗ್ರಹದ ಬಳಿಗೆ ನೌಕೆಯನ್ನು ಕಳುಹಿಸಲು ಯಶಸ್ವಿಯಾದ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ (ಅಮೆರಿಕ ರಷ್ಯಾ ಚೀನಾ) ಭಾರತವೂ ಸೇರಿತು

l 2019ರ ಜುಲೈ 22ರಂದು ಚಂದ್ರನ ದಕ್ಷಿಣ ಧ್ರುವದ ಅಧ್ಯಯನಕ್ಕಾಗಿ ಎರಡನೇ ನೌಕೆ ಚಂದ್ರಯಾನ–2 ಅನ್ನು ಭಾರತ ಚಂದ್ರನಲ್ಲಿಗೆ ಜಿಎಸ್ಎಲ್ವಿ ಎಂಕೆ III-ಎಂ1 ರಾಕೆಟ್ ಮೂಲಕ ಕಳುಹಿಸಿತ್ತು. ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವುದು ಇಸ್ರೊ ಉದ್ದೇಶವಾಗಿತ್ತು. 2019ರ ಸೆ.7ರಂದು ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿತು

l ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸುವ ಮೊದಲ ಪ್ರಯತ್ನದ ಮುಂದುವರಿದ ಭಾಗವಾಗಿ ಇಸ್ರೊ ಹಮ್ಮಿಕೊಂಡಿದ್ದ ಎರಡನೇ ಯೋಜನೆ ಚಂದ್ರಯಾನ–3ರ ನೌಕೆಯನ್ನು ಹೊತ್ತೊಯ್ದ ಎಲ್ವಿಎಂ3 ಎಂ4 ರಾಕೆಟ್ 2023ರ ಜುಲೈ 14ರಂದು ಇದೇ ಕೇಂದ್ರದಿಂದ ಆಗಸಕ್ಕೆ ಚಿಮ್ಮಿತ್ತು. ಇದು ಈ ಕೇಂದ್ರದಿಂದ ನಡೆದ 91ನೇ ಉಡಾವಣೆಯಾಗಿತ್ತು. 2023ರ ಆಗಸ್ಟ್ 23ರಂದು ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವುದರೊಂದಿಗೆ ಭಾರತವು ಚಂದ್ರನ ನೆಲದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು

l ಸೌರವ್ಯೂಹದ ಕೇಂದ್ರಬಿಂದು ಸೂರ್ಯನ ಅಧ್ಯಯನಕ್ಕಾಗಿ ಇಸ್ರೊ ರೂಪಿಸಿದ್ದ ಆದಿತ್ಯ–ಎಲ್1 ನೌಕೆಯು 2023ರ ಸೆ.2ರಂದು ಪಿಎಸ್ಎಲ್ವಿ ಸಿ–57 ರಾಕೆಟ್ ಮೂಲಕ ಇದೇ ಕೇಂದ್ರದಿಂದ ಬಾಹ್ಯಾಕಾಶಕ್ಕೆ ನೆಗೆದಿತ್ತು. ಇದು ಈ ಕೇಂದ್ರದಿಂದ ನಡೆದಿದ್ದ 93ನೇ ಉಡಾವಣೆ

ತಮಿಳುನಾಡಿನಲ್ಲಿ ಮತ್ತೊಂದು ಕೇಂದ್ರ

ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ರಾಕೆಟ್ ಉಡಾಯಿಸುವ ಸಾಮರ್ಥ್ಯವಿರುವ ಏಕೈಕ ಉಡಾವಣಾ ಕೇಂದ್ರ. ಇದಕ್ಕೆ ಪೂರಕವಾಗಿ ಇಸ್ರೊ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಣನಲ್ಲಿ ₹986 ಕೋಟಿ ವೆಚ್ಚದಲ್ಲಿ ರಾಕೆಟ್ ಉಡಾವಣಾ ಸಾಮರ್ಥ್ಯದ ಮತ್ತೊಂದು ಬಾಹ್ಯಾಕೇಶ ಕೇಂದ್ರವನ್ನು ನಿರ್ಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಫೆಬ್ರುವರಿ 28ರಂದು ಭೂಮಿಪೂಜೆ ನೆರವೇರಿಸಿದ್ದಾರೆ. ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಈ ಕೇಂದ್ರವನ್ನು ಬಳಸಲಾಗುವುದು ಎಂದು ಇಸ್ರೊದ ಹಿಂದಿನ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದರು. ಕೇಂದ್ರ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿಯವರಿಗೆ ಅವಕಾಶ ಕಲ್ಪಿಸಲು ಮುಂದಾಗಿದ್ದು ಹೆಚ್ಚು ಹೆಚ್ಚು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಅಧ್ಯಯನದಲ್ಲಿ ತೊಡಗಿದರೆ ಉಪಗ್ರಹಗಳ ಉಡಾವಣೆ ಇನ್ನಷ್ಟು ಹೆಚ್ಚಲಿದೆ. ಇದರಿಂದ ಸತೀಶ್ ಧವನ್ ಬಾಹ್ಯಾಕೇಂದ್ರ ಕೇಂದ್ರದ ಮೇಲೆ ಒತ್ತಡವೂ ಜಾಸ್ತಿಯಾಗಲಿದೆ. ಇದನ್ನು ತಪ್ಪಿಸುವುದಕ್ಕಾಗಿ ಮತ್ತೊಂದು ಉಡಾವಣಾ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.