ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೆ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಗೆ ಮರಳುತ್ತಿದ್ದಾರೆ. ಹೀಗಾಗಿಯೇ ದೇಶದೆಲ್ಲೆಡೆ ಪ್ರಕೃತಿ ಚಿಕಿತ್ಸಾ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಪಾರಂಪರಿಕ ಪದ್ಧತಿಯನ್ನು ಶಾಸ್ತ್ರೀಯವಾಗಿ ಕಲಿತು ಪ್ರಚುರಪಡಿಸುವ ಕಾರ್ಯ ಸ್ವಾಗತಾರ್ಹ. ಈ ನೆಲೆಗಟ್ಟಿನಲ್ಲಿ ಪ್ರತೀ ವರ್ಷ ನವೆಂಬರ್ 18ರಂದು ‘ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನ ಬರಿಯ ಆಚರಣೆಯಾಗದೆ, ಪ್ರಕೃತಿ ಚಿಕಿತ್ಸೆಯು ಉಳ್ಳವರ ಆಯ್ಕೆಯಾಗದೆ ಜನಸಾಮಾನ್ಯರ ದೈನಂದಿನ ಜೀವನಕ್ರಮವಾಗಬೇಕು

ಒಂದು ಜೀವಕ್ಕೆ ಭೂಮಿಯ ಮೇಲೆ ಹುಟ್ಟಿನಿಂದ ಸಾವಿನ ತನಕ ಇರಲು ಶರೀರವೇ ಆಧಾರ. ಧರ್ಮ, ಅರ್ಥ, ಕಾಮ, ಮೋಕ್ಷ ಜೀವನದಲ್ಲಿ ಸಮಸ್ಥಾನ ಸಿಗಲು ಶರೀರ ಅಗತ್ಯ. ಅಧ್ಯಾತ್ಮದ ಹಾದಿಯಲ್ಲಿ ಎತ್ತರಕ್ಕೆ ಏರಲು ಸ್ವಸ್ಥ- ದೃಢ ಶರೀರ ಅತ್ಯಗತ್ಯ. ಹಾಗಾದರೆ ಅಂತಹ ಶರೀರ ಪಡೆಯುವುದು ಹೇಗೆ? ಭೌತಿಕ ಶರೀರ ಪಂಚಭೂತಗಳಿಂದ ಆದ ಕಾರಣ ಎಲ್ಲಾ ತತ್ವಗಳಲ್ಲಿ ಸಮತೋಲನ ಕಂಡುಕೊಳ್ಳಬೇಕು. ಇದಕ್ಕೆ ಶರೀರದ ಅಂತರ್ವಾಣಿಯನ್ನು ಕೇಳಬೇಕು. ಶರೀರದ ಮಾತನ್ನು ಕೇಳುವುದನ್ನು ಮನುಷ್ಯ ಕಲಿತೇ ಇಲ್ಲ. ಮಕ್ಕಳು ಬಾಹ್ಯ ಶಿಕ್ಷಣದಲ್ಲೇ ಬಾಲ್ಯವನ್ನು ಕಳೆಯುತ್ತಿದ್ದಾರೆ. ಅಭ್ಯಾಸಗಳನ್ನು ಬದಲಾಯಿಸಬಹುದೇ ಹೊರತು ಬಾಲ್ಯದಲ್ಲಿ ದೊರೆತಿರುವ ಸಂಸ್ಕಾರಗಳನ್ನಲ್ಲ. ಹಾಗಾದರೆ, ಪ್ರಕೃತಿಯೊಡನೆ ಒಂದಾಗಿ ಸಿಗುವ ಆರೋಗ್ಯ ಒಂದು ಕನಸೇ? ಅದಕ್ಕೂ ಪರಿಹಾರವಿದೆ. ಈ ಪರಿಹಾರವನ್ನು ಮನುಷ್ಯನ ಇಚ್ಛಾಶಕ್ತಿಯ ಫಲ ಎಂದೇ ಕರೆಯಬಹುದು. ಆ ಹಾದಿಯೇ ಪ್ರಕೃತಿಗೆ ಮರಳುವುದು.

ಹಿಂದೆ ಮಾನವನ ಬದುಕು ಪ್ರಕೃತಿಯೊಂದಿಗೆ ಅಂತರ್ಗತವಾಗಿತ್ತು. ತನ್ನೆಲ್ಲ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಮಾನವ ಪ್ರಕೃತಿಯಲ್ಲಿ ಉತ್ತರ ಹುಡುಕುತ್ತಿದ್ದ. ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಜೀವನಶೈಲಿ ನಿಸರ್ಗದ ಸಹಜತೆಯಿಂದ ವಿಮುಖವಾಗತೊಡಗಿತು. ಅದರ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತಿದೆ. ಈ ಬದಲಾವಣೆಗಳನ್ನು ಮನಗಂಡು ಪ್ರಕೃತಿಯೊಂದಿಗಿನ ಅನುಸಂಧಾನದಿಂದ ಪುನಶ್ಚೇತನಗೊಳ್ಳಲು ಬಯಸುವವರಿಗೆ ಸಹಾಯವಾಗುವುದು ಪರಂಪರೆಯಿಂದ ಬೆಳೆದು ಬಂದಿರುವ ಪ್ರಕೃತಿ ಚಿಕಿತ್ಸಾ ಪದ್ಧತಿಗಳು.

ಪ್ರಕೃತಿ ಚಿಕಿತ್ಸೆಯು ದೇಹದ ಸ್ವಯಂ ಗುಣಪಡಿಸುವ ಸಾಮರ್ಥ್ಯಗಳಿಗೆ ಒತ್ತು ನೀಡುವ ಒಂದು ವಿಶಿಷ್ಟ, ಪ್ರಾಥಮಿಕ ಆರೋಗ್ಯ ರಕ್ಷಣಾ ವ್ಯವಸ್ಥೆ. ಇದು ಕೇವಲ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವ ಬದಲು ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವ ಸಮಗ್ರ ವಿಧಾನ. ಪ್ರಕೃತಿ ಚಿಕಿತ್ಸೆಯ ಮೂಲ ತತ್ವಶಾಸ್ತ್ರವು ನೈಸರ್ಗಿಕವಾಗಿಯೇ ಇರುವ ಚಿಕಿತ್ಸೆಗಳನ್ನು ಬಳಸಿಕೊಂಡು ದೇಹವು ತನ್ನನ್ನು ತಾನೇ ಗುಣಪಡಿಸಿಕೊಳ್ಳುತ್ತದೆ ಎಂಬುದರ ಮೇಲೆ ನಿಂತಿದೆ. ಹಾಗೆಯೇ ಪ್ರಕೃತಿ ಚಿಕಿತ್ಸಾ ವಿಧಾನವೂ ಕೆಲವು ಮೂಲತತ್ವಗಳನ್ನು ಅನುಸರಿಸುತ್ತದೆ. ಮೊದಲನೆಯದಾಗಿ, ಪ್ರಕೃತಿ ಮತ್ತು ಮಾನವನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು. ಏಕೆಂದರೆ, ಪ್ರಕೃತಿಯ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶವನ್ನು ಆಧರಿಸಿ ಮಾನವನ ದೇಹದ ಸೃಷ್ಟಿಯಾಗಿದೆ. ಪ್ರಕೃತಿಯ ಪಂಚಭೂತಗಳಲ್ಲಿ ಬದಲಾವಣೆಯಾದಾಗ, ಮಾನವನ ದೇಹದ ಕ್ರಿಯೆಗಳ ಮೇಲೂ ಪ್ರಭಾವ ಬೀರುತ್ತದೆ. ಎರಡನೆಯದಾಗಿ, ಅನಾರೋಗ್ಯದ ಕಾರಣ ಗುರುತಿಸಿ ನಂತರ ಚಿಕಿತ್ಸೆಯನ್ನು ನೀಡುವುದು. ಮೂರನೆಯದಾಗಿ, ಅನಾರೋಗ್ಯಕ್ಕೆ ಒಳಪಟ್ಟವರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು. ನಾಲ್ಕನೆಯದಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಇರುವ ಮಾರ್ಗದರ್ಶನವನ್ನು ನೀಡುವುದು. ಐದನೆಯದಾಗಿ, ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆನುವಂಶಿಕ, ಪರಿಸರ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಪರಿಗಣಿಸಿ ಚಿಕಿತ್ಸೆ ನೀಡುವುದು. ಆರನೆಯದಾಗಿ, ಭವಿಷ್ಯದಲ್ಲಿ ರೋಗಗಳು ಬಾರದಂತೆ ಜೀವನಕ್ರಮವನ್ನು ಪಾಲಿಸುವುದು.

ಪ್ರಕೃತಿ ಚಿಕಿತ್ಸಾ ಪದ್ಧತಿಯ ತತ್ವಗಳು ಹೊಸದೇನಲ್ಲ. ಅದನ್ನು ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೊಕ್ರೇಟ್ಸ್ ಮೊದಲು ಗುರುತಿಸಿದ್ದ. ಈ ಪ್ರಕೃತಿ ಚಿಕಿತ್ಸೆ ಎಂಬ ಪದ ಪ್ರಯೋಗವನ್ನು 1895ರಲ್ಲಿ ಜರ್ಮನಿಯ ಡಾ.ಜಾನ್ಶೀಲ್ ಮಾಡಿದ್ದರು. ತದನಂತರ ಪ್ರಕೃತಿ ಚಿಕಿತ್ಸೆ ಪದವನ್ನು ಡಾ.ಬೆನೆಡಿಕ್ಟ್ ಲಸ್ಟ್ ಹೆಚ್ಚು ಬಳಕೆಗೆ ತರುವ ಮೂಲಕ ಅಮೆರಿಕದಲ್ಲಿ ವಿಸ್ತರಿಸಿದರು ಮತ್ತು 1902ರಲ್ಲಿ ಅಮೆರಿಕದಲ್ಲಿ ಸ್ಕೂಲ್ ಆಫ್ ನ್ಯಾಚುರೋಪಥಿಯನ್ನು ಸ್ಥಾಪಿಸಿದರು. ಭಾರತದಲ್ಲಿ ಪ್ರಕೃತಿ ಚಿಕಿತ್ಸೆಯ ಆಗಮನ ಮತ್ತು ಬೆಳವಣಿಗೆಯ ಮೇಲೆ ಮಹಾತ್ಮ ಗಾಂಧಿ ಅವರು ಗಮನಾರ್ಹವಾಗಿ ಪ್ರಭಾವ ಬೀರಿದರು. ಅಲ್ಲದೇ ಅವರು ಸ್ವತಃ ಪ್ರಕೃತಿ ಚಿಕಿತ್ಸೆಯ ಪ್ರಬಲ ಪ್ರತಿಪಾದಕರಾಗಿದ್ದರು.

ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೆ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಗೆ ಮರಳುತ್ತಿದ್ದಾರೆ. ಹೀಗಾಗಿಯೆ ದೇಶದೆಲ್ಲೆಡೆ ಪ್ರಕೃತಿ ಚಿಕಿತ್ಸಾ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಪಾರಂಪರಿಕ ಪದ್ಧತಿಯನ್ನು ಶಾಸ್ತ್ರೀಯವಾಗಿ ಕಲಿತು ಪ್ರಚುರಪಡಿಸುವ ಕಾರ್ಯ ಸ್ವಾಗತಾರ್ಹ. ಈ ನೆಲೆಗಟ್ಟಿನಲ್ಲಿ ಪ್ರತೀ ವರ್ಷ ನವೆಂಬರ್ 18ರಂದು 'ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ'ವನ್ನು ಆಚರಿಲಾಗುತ್ತದೆ. ಈ ದಿನ ಬರಿಯ ಆಚರಣೆಯಾಗದೆ, ಪ್ರಕೃತಿ ಚಿಕಿತ್ಸೆಯು ಉಳ್ಳವರ ಆಯ್ಕೆಯಾಗದೆ ಜನಸಾಮಾನ್ಯರ ದೈನಂದಿನ ಜೀವನಕ್ರಮವಾಗಬೇಕು.

ಪ್ರಸ್ತುತ ಗಂಭೀರ ಹಾಗೂ ತುರ್ತು ಚಿಕಿತ್ಸೆಗಾಗಿ ವೈದ್ಯರ ಮೊರೆಹೋಗುವ ಕಾಲ ಬದಲಾಗಿ ಜೀವನಶೈಲಿ ಸಂಬಂಧಿತ ಅನಾರೋಗ್ಯಗಳನ್ನು ಹೊತ್ತು ಆಸ್ಪತ್ರೆಗಳಲ್ಲಿ ಬೀಡುಬಿಡುವಂತಾಗಿದೆ. ಪ್ರತಿಯೊಬ್ಬರ ಶರೀರಕ್ಕೂ ಭಿನ್ನ ಅಗತ್ಯಗಳಿರುತ್ತವೆ. ಅದರಲ್ಲೂ ಪ್ರಕೃತಿಯಿಂದ ದೂರವಾಗಿ ಅನಾರೋಗ್ಯಕ್ಕೆ ಒಳಗಾದವರಲ್ಲಿ ಈ ಭಿನ್ನತೆಯನ್ನು ಹೆಚ್ಚಾಗಿ ಕಾಣಬಹುದು. ಈ ಸಮಸ್ಯೆಗಳಿಂದ ಜನರನ್ನು ಹೊರತಂದು ಅರಿವು ಮೂಡಿಸಲು ಸಾಂಸ್ಥಿಕ ಪ್ರಯತ್ನ ಅವಶ್ಯಕ. ವ್ಯಕ್ತಿಯು ತನ್ನ ಆರೋಗ್ಯ ಪರಿಸ್ಥಿತಿಗೆ ತಕ್ಕ ಹಾಗೆ ಆಹಾರ ಕ್ರಮಗಳನ್ನು ರೂಪಿಸಿಕೊಳ್ಳಬೇಕು. ಪ್ರಾಕೃತಿಕ ಆಹಾರದ ಸೇವನೆಯಿಂದಾಗಿ ಜಡತ್ವ ದೂರವಾಗಿ ಗ್ರಹಿಕೆ ಹೆಚ್ಚುತ್ತದೆ. ಉನ್ನತ ಸ್ಥಿತಿಯ ಗ್ರಹಿಕೆಯಿಂದ ಮನುಷ್ಯನಿಗೆ ತನ್ನ ಶರೀರದ ಅಗತ್ಯವೇನು ಎಂಬುದರ ಅರಿವು ಮೂಡುತ್ತಾ ಮುಂದೊಂದು ದಿನ ಇದೇ ಅರಿವು ಜೀವನಕ್ರಮವಾಗಿ ಬದಲಾಗುತ್ತದೆ.

ನೈಸರ್ಗಿಕ ತತ್ವಾಧಾರಿತ ಪದ್ಧತಿ

ಪ್ರಕೃತಿ ಚಿಕಿತ್ಸೆಯ ಸಿದ್ಧಾಂತಗಳ ಪ್ರಕಾರ ಕಾಯಿಲೆಗಳನ್ನು ಗುಣಮಾಡಿಕೊಳ್ಳುವ ಅದ್ಭುತವಾದ ಶಕ್ತಿ ದೇಹದಲ್ಲಿ ಅಡಗಿದೆ. ದೇಹಕ್ಕೆ ತನ್ನನ್ನು ತಾನು ಗುಣಮುಖವಾಗಿಸುವ ಚೈತನ್ಯವಿದೆ. ಪ್ರಕೃತಿಯ ಸಿದ್ಧಾಂತಗಳಿಗೆ ವಿರುದ್ಧವಾಗಿ ಜೀವನಶೈಲಿಯನ್ನು ನಡೆಸುವುದು ಎಲ್ಲಾ ಆರೋಗ್ಯ ಅಸಮತೋಲನಗಳಿಗೆ ಕಾರಣ. ಮಾನವನಿಗೆ ಬರುವ ಕಾಯಿಲೆಗಳಿಗೆ ದೇಹದಲ್ಲಿ ಕಲ್ಮಷಗಳು ಶೇಖರಣೆಗೊಳ್ಳುವುದೇ ಮುಖ್ಯ ಕಾರಣವಾಗಿದ್ದು ಇದರಿಂದ ದೇಹದಲ್ಲಿ ಕಾಯಿಲೆಗಳ ಸಮೂಹ ಉದ್ಭವವಾಗಿ ಪ್ರಕೃತಿ ಚಿಕಿತ್ಸೆಯ ಮೂಲಕ ಕಾಯಿಲೆಗಳಿಗೆ ಪ್ರಮುಖ ಅಂಶವಾದ ಕಲ್ಮಷಗಳ ವಿಸರ್ಜನೆ ಸಾಧ್ಯವಾದಾಗ ಈ ಎಲ್ಲಾ ಕಾಯಿಲೆಗಳಿಗೂ ಸಂಪೂರ್ಣ ಪರಿಹಾರ ಸಾಧ್ಯವಾಗುತ್ತದೆ. ಪ್ರಕೃತಿ ಚಿಕಿತ್ಸೆಯಲ್ಲಿ ನಾವು ಸೇವಿಸುವ ಆಹಾರವನ್ನೇ ಔಷಧಿಯೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಸಾಧಕರ ಪಾತ್ರ ಬಹು ಮುಖ್ಯವಾದದ್ದಾಗಿದ್ದು ಚಿಕಿತ್ಸಾ ಪದ್ಧತಿಯಲ್ಲಿ ಭರವಸೆ ಮೂಡಿಸಿಕೊಂಡು ತನ್ನನ್ನು ತಾನು ಅಳವಡಿಸಿಕೊಂಡಾಗ ಮಾತ್ರ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ದೇಹ ಮತ್ತು ಮನಸ್ಸಿನ ಪ್ರಫುಲ್ಲತೆಗೆ ಕಾರಣಗಿರುವ ಯೋಗ ಮತ್ತು ಧ್ಯಾನ ಭಾರತದಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ. ಹಿಂದೂ ತಾತ್ವಿಕ ಚಿಂತನೆ ಹಾಗೂ ಸಂಪ್ರದಾಯಗಳನ್ನು ಒಳಗೊಂಡ ಯೋಗವು ಮಾನಸಿಕ ದೈಹಿಕ ಮತ್ತು ಆಧ್ಯಾತ್ಮಿಕ ಕ್ಷೇಮದ ವಿಚಾರದಲ್ಲಿ ತನ್ನ ನಿಲುವನ್ನು ಕೇಂದ್ರಿಕರಿಸುತ್ತದೆ. ಹೀಗೆ ಪ್ರಕೃತಿ ಚಿಕಿತ್ಸೆಯು ನೈಸರ್ಗಿಕ ತತ್ವಗಳನ್ನು ಆಧರಿಸಿದ ಪದ್ಧತಿ.

ಪ್ರಕೃತಿಗೆ ಮರಳುವ ಈ ದಿಸೆಯಲ್ಲಿ ಆರೋಗ್ಯ ಸಮಸ್ಯೆಗಳಿಗೆ ಅನುಗುಣವಾಗಿ ಪ್ರಕೃತಿ ಚಿಕಿತ್ಸೆಯನ್ನು ಹಲವು ವಿಧಾನಗಳಲ್ಲಿ ನೀಡಲಾಗುತ್ತದೆ. ಮಣ್ಣಿನ ಚಿಕಿತ್ಸೆ ಜಲ ಚಿಕಿತ್ಸೆ ವಾಯು ಚಿಕಿತ್ಸೆ ವರ್ಣ ಚಿಕಿತ್ಸೆ ಮ್ಯಾಗ್ನೆಟ್ (ಅಯಸ್ಕಾಂತ) ಥೆರಪಿ ಆಕ್ಯುಪಂಕ್ಚರ್ ಆಕ್ಯುಪ್ರೆಶರ್ ಫಿಸಿಯೋಥೆರಪಿ ಎಲೆಕ್ಟ್ರೊ ಥೆರಪಿ ಸೇರಿ ಹಲವು ಚಿಕಿತ್ಸೆಗಳನ್ನು ಇದು ಒಳಗೊಂಡಿದೆ. ಇದು ರಕ್ತಪರಿಚಲನೆಯನ್ನು ಉತ್ತೇಜಿಸಲು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಜೀರ್ಣಕ್ರಿಯೆ ಸುಧಾರಿಸಲು ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ಚೈತನ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ

ಮನುಷ್ಯನ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವನ್ನು ಔಷಧಿ ರಹಿತವಾಗಿ ಸುಧಾರಿಸುವ ಸಾಮರ್ಥ್ಯವಿರುವ ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಆಯುಷ್ (ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ) ಸಚಿವಾಲಯವು ನವೆಂಬರ್ 18 ಅನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ ಎಂದು 2018ರಲ್ಲಿ ಘೋಷಿಸಿತ್ತು. ಈ ಬಾರಿಯದ್ದು ಎಂಟನೇ ವರ್ಷದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ.

ಭಾರತದಲ್ಲಿ ಪ್ರಕೃತಿ ಚಿಕಿತ್ಸೆಯ ಸಂಸ್ಥಾಪಕ ಎಂದು ಮಹಾತ್ಮ ಗಾಂಧಿ ಅವರನ್ನು ಗುರುತಿಸಲಾಗುತ್ತದೆ. ಯುರೋಪ್ ಮೂಲದ ಈ ಚಿಕಿತ್ಸಾ ಕ್ರಮವು ಭಾರತದಲ್ಲಿ ಹೆಚ್ಚು ಪ್ರಸಿದ್ಧಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಗಾಂಧೀಜಿಯವರು.

1945ರಲ್ಲಿ ಗಾಂಧೀಜಿ ಅವರು ಆಲ್ ಇಂಡಿಯಾ ನೇಚರ್ ಕ್ಯೂರ್ ಫೌಂಡೇಷನ್ ಟ್ರಸ್ಟ್ನ ಅಧ್ಯಕ್ಷರಾದರು. ಪ್ರಕೃತಿದತ್ತವಾದ ಈ ಚಿಕಿತ್ಸಾ ಕ್ರಮದ ಪ್ರಯೋಜನವು ಎಲ್ಲ ಜನರಿಗೆ ಲಭ್ಯವಾಗಬೇಕು ಎಂಬ ದಿಸೆಯಲ್ಲಿ ಅವರು ಒಪ್ಪಂದವೊಂದಕ್ಕೆ ಸಹಿಯನ್ನೂ ಹಾಕಿದರು.

ಪ್ರತಿ ವರ್ಷ ರಾಷ್ಟ್ರೀಯ ದಿನದಂದು ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ವಿಶೇಷಗಳು

ನ್ಯಾಚುರೋಪಥಿಯು, ಭಾರತದ ಸಾಂಪ್ರದಾಯಿಕ ವಿಧಾನಗಳು ಮತ್ತು ಯುರೋಪ್ನ ಚಿಕಿತ್ಸಾ ಪದ್ಧತಿಗಳ ಸಮ್ಮಿಲನ

ದೇಹದ ಆರೋಗ್ಯವನ್ನು ದೀರ್ಘಕಾಲ ಕಾಪಾಡಲು ಸಹಾಯ ಮಾಡುತ್ತದೆ

ಬಹುತೇಕ ಸಂದರ್ಭಗಳಲ್ಲಿ ಊಟದ ಮೂಲಕವೇ ಕಾಯಿಲೆಗಳನ್ನು ಗುಣಪಡಿಸಲಾಗುತ್ತದೆ

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ತಲೆನೋವು, ಅಲರ್ಜಿಗಳು, ಶೀತ ಮುಂತಾದ ಕಾಯಿಲೆಗಳನ್ನು ನ್ಯಾಚುರೋಪಥಿಯ ಮೂಲಕ ಗುಣಪಡಿಸಬಹುದು

ಇದು ಯಾವುದೇ ಅಡ್ಡಪರಿಣಾಮಗಳಿಲ್ಲದ, ಪರಿಣಾಮಕಾರಿ ಚಿಕಿತ್ಸಾ ಪದ್ಧತಿಯಾಗಿದೆ ಎಂಬುದು ತಜ್ಞರ ವಾದ

ಲೇಖಕ: ಧರ್ಮಸ್ಥಳದ ಧರ್ಮಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.