ಶನಿವಾರ, 25 ಅಕ್ಟೋಬರ್ 2025
×
ADVERTISEMENT
ಆಳ–ಅಗಲ: ಸುಧಾರಣೆಯ ಹಾದಿಯಲ್ಲಿ ಎನ್‌ಪಿಎಸ್‌
ಆಳ–ಅಗಲ: ಸುಧಾರಣೆಯ ಹಾದಿಯಲ್ಲಿ ಎನ್‌ಪಿಎಸ್‌
ಫಾಲೋ ಮಾಡಿ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
Comments
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಬದಲಾವಣೆಯ ಹಾದಿಯಲ್ಲಿದೆ. ಈ ವ್ಯವಸ್ಥೆಯಿಂದ ಹೊರಬರುವ ಮತ್ತು ಅದರಲ್ಲಿ ತೊಡಗಿಸಿರುವ ಹಣ ಹಿಂಪಡೆಯುವ ಸಂಬಂಧದ ನಿಯಮಗಳನ್ನು ಸರಳೀಕರಣಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕರಡು ಪ್ರಕಟಿಸಿದೆ. ಮುಖ್ಯವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರನ್ನು ಹೊರತುಪಡಿಸಿ ಉಳಿದೆಲ್ಲಾ ಟೈರ್‌–1 ಚಂದಾದಾರರಿಗೆ ಪಿಂಚಣಿ ಯೋಜನೆಯಿಂದ ಹೊರಬರಲು ಪ್ರಸ್ತುತ ಇರುವ 60 ವರ್ಷ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಪ್ರಸ್ತಾವಿಸಲಾಗಿದೆ. ಇದೇ ರೀತಿ, ಚಂದಾದಾರರ ಅಗತ್ಯಗಳಿಗೆ ತಕ್ಕಂತೆ ಹೆಚ್ಚು ಹಣ ಹಿಂಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವವನ್ನೂ ಕರಡು ಒಳಗೊಂಡಿದೆ
ನಿಯಮ ಇನ್ನಷ್ಟು ಸರಳ:
ಇದಕ್ಕಾಗಿಯೇ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಎನ್‌ಪಿಎಸ್‌ನಲ್ಲಿ ಹೂಡಿಕೆ, ಚಂದಾದಾರಿಕೆ ಅಂತ್ಯಗೊಳಿಸುವ ಮತ್ತು ಹಣ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಅಣಿಯಾಗಿದೆ. ಇದಕ್ಕಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ನಿರ್ಗಮನ ಮತ್ತು ಹಿಂಪಡೆಯುವಿಕೆ) ನಿಯಮಗಳು– 2015ರ ತಿದ್ದುಪಡಿ ಕರಡು ಪ್ರಕಟಿಸಿದೆ. ಉದ್ದೇಶಿತ ತಿದ್ದುಪಡಿ ನಿಯಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಉದ್ಯೋಗಿಗಳಿಗೂ ಅನ್ವಯಿಸುತ್ತವೆ. ಎನ್‌ಪಿಎಸ್‌ ಸ್ವಾವಲಂಬನೆ (ಅಸಂಘಟಿತ ವಲಯ), ಎನ್‌ಪಿಎಸ್ ವಾತ್ಸಲ್ಯ (ಮಕ್ಕಳ ಹೆಸರಿನಲ್ಲಿ ಚಂದಾದಾರಿಕೆ), ಎಲ್ಲ ನಾಗರಿಕರು, ಕಾರ್ಪೊರೇಟ್ ವಲಯಗಳ ಸಿಬ್ಬಂದಿಗೆ (ಎನ್‌ಪಿಎಸ್‌ನ ಟೈರ್‌–1 ಖಾತೆ) ಈ ನಿಯಮಗಳು ಅನ್ವಯಿಸುತ್ತವೆ.
ಪಿಂಚಣಿ ನಿಧಿ ಲಾಂಛನ

ಪಿಂಚಣಿ ನಿಧಿ ಲಾಂಛನ

15 ವರ್ಷಕ್ಕೆ ಹೊರಬರಲು ಅವಕಾಶ
ಪ್ರಸ್ತಾವಿತ ತಿದ್ದುಪಡಿ ನಿಯಮದಲ್ಲಿ 15 ವರ್ಷಗಳಿಗೆ ಎನ್‌ಪಿಎಸ್‌ನಿಂದ ಹೊರಬರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ (ಹಾಲಿ ನಿಯಮದಡಿ 60 ವರ್ಷ ಆಗಿರಬೇಕು). ಉದಾಹರಣೆಗೆ, ಒಬ್ಬ ಖಾಸಗಿ ವಲಯದ ಉದ್ಯೋಗಿಯು 30ನೇ ವಯಸ್ಸಿಗೆ ಎನ್‌ಪಿಎಸ್‌ ಖಾತೆ ತೆರೆದು 45ನೇ ವಯಸ್ಸಿಗೆ ತನ್ನ ಚಂದಾದಾರಿಕೆಯನ್ನು ಕೊನೆಗೊಳಿಸಬಹುದು. ಆ ಸಮಯದಲ್ಲಿ ಆ ಉದ್ಯೋಗಿಯ ಎನ್‌ಪಿಎಸ್‌ ಖಾತೆಯಲ್ಲಿ ‌₹50 ಲಕ್ಷ ಹೊಂದಿದ್ದರೆ, ಆ ಪೈಕಿ ಶೇ 60ರಷ್ಟು ಮೊತ್ತ (₹30 ಲಕ್ಷ) ಹಿಂಪಡೆಯಬಹುದು. ಉಳಿದ ಶೇ 40ರಷ್ಟು ಮೊತ್ತವನ್ನು (₹20 ಲಕ್ಷ) ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಲು ಮೀಸಲಿಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT