Cloud Seeding: ದೆಹಲಿಯಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಯ ಪ್ರಯೋಗ ನಡೆದಿದ್ದು, ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಸಿಲ್ವರ್ ಅಯೋಡೈಡ್ ರಾಸಾಯನಿಕದಿಂದ ಮೋಡಗಳಲ್ಲಿ ನೀರಿನ ಆವಿ ಘನೀಕರಿಸಿ ಮಳೆ ಸುರಿಸಲಾಗುತ್ತಿದೆ.

ನವದೆಹಲಿ: ವಾಯು ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೊದಲ ಮೋಡ ಬಿತ್ತನೆ ಪ್ರಯೋಗಕ್ಕೆ ದೆಹಲಿ ಮಂಗಳವಾರ ಸಾಕ್ಷಿಯಾಯಿತು.

ಮೋಡ ಬಿತ್ತನೆಯ ಪ್ರಯತ್ನ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಕೈಗೊಳ್ಳಲಾಗಿದೆ. ಪುಣೆಯಲ್ಲಿರುವ ಭಾರತೀಯ ಹವಾಮಾನ ಅಧ್ಯಯನ ಸಂಸ್ಥೆಯು (IITM) 2023ರಲ್ಲಿ ನೀಡಿದ ವರದಿಯನ್ನು ಆಧರಿಸಿ ಇದನ್ನು ನಡೆಸಲಾಗಿದೆ ಎಂದು ವರದಿಯಾಗಿದೆ.

ಮೋಡ ಬಿತ್ತನೆ ಹೇಗೆ ಮಾಡಲಾಗುತ್ತದೆ?

ವಿಮಾನವನ್ನು ಬಳಸಿ ಸಿಲ್ವರ್ ಅಯೋಡೈಡ್ ಅಥವಾ ಪೊಟ್ಯಾಷಿಯಂ ಕ್ಲೋರೈಡ್ ರಾಸಾಯನಿಕ ದ್ರಾವಣಗಳನ್ನು ಮೋಡಗಳಿಗೆ ಸೇರಿಸಲಾಗುತ್ತದೆ. ಇವು ಮೋಡಗಳ ಸುತ್ತಲೂ ನೀರಿನ ಆವಿ ಘನೀಕರಿಸಲು ನೆರವಾಗುತ್ತವೆ.

ಶೂನ್ಯ ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನವಿರುವ ತಂಪಾದ ಮೋಡಗಳಲ್ಲಿ ಸಿಲ್ವರ್ ಅಯೋಡೈಡ್ ಕಣಗಳನ್ನು ಸೇರಿಸಿದ ನಂತರ ಅವು ಮಂಜುಗಡ್ಡೆ ಹಾಗೂ ನೀರನ್ನು ಜತೆಗೂಡಿಸುತ್ತದೆ. ಇದು ಭಾರವಾಗುವುದರಿಂದ ಮಳೆ ಹನಿಗಳು ಉದುರುತ್ತವೆ. ಹೀಗಾಗಿ ಹೆಚ್ಚಿನ ತಾಪಮಾನದ ಭೂಮಿಗೆ ಅವು ಬೀಳುತ್ತವೆ.

ಸಾಮಾನ್ಯವಾಗಿ ನೀರು ಆವಿಯಾದ ನಂತರ ಅದು ಗಾಳಿಯಲ್ಲಿ ಸೇರುತ್ತದೆ. ಆವಿಯ ರೂಪದಲ್ಲಿರುವ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಅವುಗಳು ಒಂದೆಡೆ ಸೇರುತ್ತವೆ. ಅವುಗಳು ಒಗ್ಗೂಡಿದ ನಂತರ ಮೋಡವಾಗಿ, ನೀರಿನ ಹನಿ ಅಥವಾ ಆಲಿಕಲ್ಲು ರೂಪದಲ್ಲಿ ಧರೆಗೆ ಮರಳುತ್ತವೆ.

ಮೋಡ ಬಿತ್ತನೆಯ ಮೊದಲ ಪ್ರಯೋಗ ನಡೆದದ್ದು ಎಂದು?

ಕೃತಕ ಮಳೆ ಸುರಿಸುವ ಮೋಡ ಬಿತ್ತನೆಯ ಮೊದಲ ಪ್ರಯೋಗ ನಡೆದಿದ್ದು 1946ರಲ್ಲಿ. ಅಮೆರಿಕದ ರಸಾಯನ ವಿಜ್ಞಾನಿ ಹಾಗೂ ಹವಾಮಾನ ತಜ್ಞ ವಿನ್ಸೆಂಟ್ ಶಾಫರ್ ಅವರು ಮಳೆ ಹೇಗಾಗುತ್ತದೆ ಎಂಬುದನ್ನು ಅರಿತ ನಂತರ, ಕೃತಕವಾಗಿ ಮಳೆ ಸುರಿಸುವ ತಂತ್ರಜ್ಞಾನವನ್ನು ಕಂಡು ಹಿಡಿದರು.

ತಂಪಾದ ಕೋಣೆಗೆ ಒಣ ಮಂಜುಗಡ್ಡೆಯನ್ನು ಸೇರಿಸಿದಾಗ, ಮಂಜುಗಡ್ಡೆಯ ಕಣಗಳ ಸುತ್ತಲೂ ಮೋಡವು ತಕ್ಷಣವೇ ರೂಪುಗೊಳ್ಳುವುದನ್ನು ಕಂಡರು. ಪ್ರಯೋಗಾಲಯದಲ್ಲಿ ಕೃತಕವಾಗಿ ತಯಾರಿಸಿದ ಮೋಡಗಳ ಮೊದಲ ದಾಖಲಾತಿ ಇದು.

1947 ರಲ್ಲಿ ಹವಾಮಾನ ತಜ್ಞ ಬರ್ನಾರ್ಡ್ ವೊನೆಗಟ್ ಅವರು ಕೃತಕ ಮಳೆ ಸುರಿಸುವ ಪ್ರಯತ್ನಗಳನ್ನು ಇನ್ನಷ್ಟು ವಿಸ್ತರಿಸಿದರು. ಒಣ ಮಂಜುಗಡ್ಡೆಗೆ ಹೋಲಿಸಿದರೆ ಸಿಲ್ವರ್ ಅಯೋಡೈಡ್ ಹರಳುಗಳನ್ನು ಬಳಸುವುದರಿಂದ ಮೋಡ ಬಿತ್ತನೆಯಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ ಎಂಬುದನ್ನು ಕಂಡುಕೊಂಡರು.

ಪರ್ವತ ಪ್ರದೇಶಗಳಲ್ಲಿ ಗಾಳಿಯನ್ನು ನೈಸರ್ಗಿಕವಾಗಿ ಮೇಲಕ್ಕೆತ್ತುವ ಪ್ರಕ್ರಿಯೆಯಲ್ಲಿ ಮೋಡಗಳು ಸಹಜವಾಗಿ ರಚನೆಯಾಗುತ್ತವೆ. ಇಲ್ಲಿ ಶೀತ ಮೋಡ ಬಿತ್ತನೆಯು ಹಿಮಪಾತವನ್ನು ಹೆಚ್ಚಿಸುತ್ತದೆ ಎಂದು ಅಮೆರಿಕದ ಕೆಲ ಅಧ್ಯಯನಗಳು ತೋರಿಸಿವೆ ಎಂದು ಐಐಟಿಎಂ ತನ್ನ ವರದಿಯಲ್ಲಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿ ಮೋಡ ಬಿತ್ತನೆಯ ಉದಹಾರಣೆಗಳು ಕಡಿಮೆಯೇ ಎಂದು ಅಮೆರಿಕದ ಸರ್ಕಾರಿ ವರದಿಯೊಂದು 2024ರಲ್ಲಿ ಹೇಳಿದೆ.

ಮೋಡ ಬಿತ್ತನೆಗೆ ಪರಿಸರಕ್ಕೆ ಪೂರಕವೇ?

‘ಕೃತಕ ಮಳೆ ಸುರಿಸಲು ಬಳಸಲಾಗುವ ಸಿಲ್ವರ್ ಅಯೋಡೈಡ್ ರಾಸಾಯನಿಕವು ವಿಷಕಾರಿ. ಒಣ ಮಂಜುಗಡ್ಡೆ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಹಸಿರುಮನೆ ಅನಿಲದ ಮೂಲವೂ ಆಗಿರಬಹುದು, ಏಕೆಂದರೆ ಅದು ಮೂಲತಃ (ಘನ) ಇಂಗಾಲದ ಡೈಆಕ್ಸೈಡ್ ಆಗಿದೆ’ ಎಂದು 2025ರಲ್ಲಿ ಪ್ರಕಟಗೊಂಡ ‘ಅಡ್ವಾನ್ಸ್ ಇನ್ ಅಗ್ರಿಕಲ್ಚರಲ್ ಟೆಕ್ನಾಲಜಿ ಅಂಡ್ ಪ್ಲಾಂಟ್ ಸೈನ್ಸಸ್’ ಜರ್ನಲ್ನ ಲೇಖನ ಹೇಳಿದೆ.

1970ರ ದಶಕದಲ್ಲಿ ಐಐಟಿಎಂ ನಡೆಸಿದ ಮೋಡ ಬಿತ್ತನೆಯ ಪ್ರಯೋಗಗಳಲ್ಲಿ ಮಳೆಯ ಪ್ರಮಾಣ ಶೇ 17ರಷ್ಟು ಹೆಚ್ಚಳವಾಗಿದೆ. ಆದರೂ ಈ ತಂತ್ರ ಪರಿಣಾಮಕಾರಿ ಎಂಬುದಕ್ಕೆ ನಿರ್ದಿಷ್ಟ ಉದಾಹರಣೆಗಳಿಲ್ಲ.

ಇತ್ತೀಚಿನ ದಶಕಗಳಲ್ಲಿ, ಮೋಡ ಬಿತ್ತನೆ ನಡೆಸಲು ಸೂಕ್ತವಾದ ಸ್ಥಳವನ್ನು ಗುರುತಿಸಲು ಭಾರತದಾದ್ಯಂತ ಏರೋಸಾಲ್ ಮತ್ತು ಮೋಡದ ಹನಿ ಕಣಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಸಮೀಕ್ಷೆ ಮಾಡಲು ಪ್ರಯೋಗಗಳು ಮತ್ತು ಅವಲೋಕನಗಳನ್ನು ನಡೆಸಲಾಗಿದೆ.

ಮೋಡ ಬಿತ್ತನೆ ಪ್ರಯೋಗಗಳನ್ನು ಸರಿಯಾಗಿ ನಡೆಸಲು ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆಯೂ ಐಐಟಿಎಂ ಸಂಶೋಧಕರು ವಿವರಿಸಿದ್ದಾರೆ. ಬಿತ್ತನೆಗೆ ಮೊದಲು ಮೋಡಗಳ ಮಾಹಿತಿ, ಸಮಯ ಹಾಗೂ ನಂತರದ ಪರಿಣಾಮಗಳ ಅವಲೋಕನ ನಡೆಯಬೇಕು. ಮೋಡ ಬಿತ್ತನೆಗೆ ಯಾವ ಮೋಡ ಆಯ್ಕೆ ಮಾಡಬೇಕು ಎಂಬುದೂ ಬಹಳಾ ಮುಖ್ಯ ಎಂದು ಸಂಶೋಧಕರು ಹೇಳಿದ್ದಾರೆ.