Indian Nurse Execution: ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದವರಿಗೆ ಷರಿಯಾ ಕಾನೂನು ಹಲವು ಬಾರಿ ಬದಕು ನೀಡಿದ ಉದಾಹರಣೆಗಳಿಗೆ ಇದೆ. ಹೀಗೆ ‘ದಿಯಾ’ ಎಂಬ ಬ್ಲಡ್ಮನಿ ನೀಡಿ ಬದುಕಿ, ಮರಳಿದವರ ಕಥೆ ಇಲ್ಲಿದೆ

ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಪ್ರಕರಣ ದಿನದಿನಕ್ಕೂ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಮರಣದಂಡನೆ ವಿಧಿಸಿರುವ ನ್ಯಾಯಾಲಯವು ಸಂತ್ರಸ್ತ ಕುಟುಂಬ ಕ್ಷಮಿಸಿದರೆ ನಿಮಿಷ ಪಾರಾಗಬಹುದು ಎಂದಿದೆ. ಆದರೆ ಅದಕ್ಕೆ ಬೇಕಿರುವ ‘ಬ್ಲಡ್ ಮನಿ’ (ಸಾವಿಗೆ ಪರಿಹಾರವಾಗಿ ನೀಡುವ ಹಣ) ಈಗ ಬಹುಚರ್ಚಿತ ವಿಷಯವಾಗಿದೆ.

ನ್ಯಾಯಾಲಯದ ಆದೇಶದಂತೆಯೇ ಆಗಿದ್ದರೆ ಇಂದು (ಜುಲೈ 16) ನಿಮಿಷ ಪ್ರಿಯಾಗೆ ಮರಣದಂಡನೆ ಆಗಬೇಕಿತ್ತು. ಆದರೆ ಭಾರತದ ಕೆಲ ಮುಸ್ಲಿಂ ನಾಯಕರ ಪ್ರಯತ್ನ ನಡೆಸಿದ್ದರ ಫಲವಾಗಿ ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ 'ಬ್ಲಡ್ ಮನಿ’ ವಿಷಯ ಕುರಿತು ಮಧ್ಯಸ್ಥಿಕೆದಾರರು ಹಾಗೂ ಎರಡೂ ಕುಟುಂಬದವರ ನಡುವೆ ಮಾತುಕತೆಗಳು ನಡೆಯುತ್ತಿವೆ.
.Nimisha Priya: ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಮುಂದೂಡಿಕೆ.ಕ್ಷಮೆಯ ನಿರೀಕ್ಷೆಯಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕೇರಳ ನರ್ಸ್ ಕುಟುಂಬಸ್ಥರು.
ನಿಮಿಷ ಪ್ರಕರಣದ ಹಿನ್ನೆಲೆ...

ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷ ಅವರು ತನ್ನ ಕ್ಲಿನಿಕ್ ಪಾಲುದಾರನಾಗಿದ್ದ ಯೆಮೆನ್ ದೇಶದ ಪ್ರಜೆ ತಲಾಲ್ ಅಬ್ದು ಮಹ್ದಿ ಎಂಬವರ ವಶದಲ್ಲಿದ್ದ ತನ್ನ ಪಾಸ್ಪೋರ್ಟ್ ಮತ್ತಿತರ ದಾಖಲೆಗಳನ್ನು ಪಡೆಯುವ ಉದ್ದೇಶದಿಂದ ಪ್ರಜ್ಞೆ ತಪ್ಪಿಸಲು ‘ಕೆಟಮೈನ್’ ಎಂಬ ಚುಚ್ಚುಮದ್ದು ನೀಡಿದ್ದರು. ಆದರೆ ಇದರ ಪ್ರಮಾಣ ಹೆಚ್ಚಾಗಿದ್ದರಿಂದ ಮೆಹ್ದಿ ಮೃತಪಟ್ಟಿದ್ದರು. ಈ ಘಟನೆ 2017ರ ಜುಲೈ ನಡೆದಿತ್ತು.

ಘಟನೆಯಿಂದ ಗಾಭರಿಗೊಂಡ ನಿಮಿಷ, ಶುಶ್ರೂಷಕಿಯಾಗಿರುವ ತನ್ನ ಸ್ನೇಹಿತೆಗೆ ಈ ವಿಷಯ ತಿಳಿಸಿದ್ದರು. ಇಬ್ಬರೂ ಸೇರಿ ಪ್ರಕರಣ ಮುಚ್ಚಿಹಾಕಲು ಮೆಹ್ದಿ ದೇಹವನ್ನು ತುಂಡರಿಸಿ ನೀರಿನ ತೊಟ್ಟಿಗೆ ಹಾಕಿದ್ದರು. ನಂತರ ಭಾರತಕ್ಕೆ ಪರಾರಿಯಾಗಲು ಹೊರಟ ನಿಮಿಷಾರನ್ನು 2017ರ ಆಗಸ್ಟ್ನಲ್ಲಿ ಸೌದಿ ಅರೇಬಿಯಾ ಅಧಿಕಾರಿಗಳ ಸಹಕಾರದೊಂದಿಗೆ ಬಂಧಿಸಲಾಗಿತ್ತು.

ಯೆಮೆನ್ನ ವಿಚಾರಣಾ ನ್ಯಾಯಾಲಯ 2020ರಲ್ಲಿ ನಿಮಿಷ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಆಕೆಯ ಸ್ನೇಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಯೆಮೆನ್ನ ‘ಸುಪ್ರೀಂ ಜುಡಿಷಿಯಲ್ ಕೌನ್ಸಿಲ್’ 2023ರ ನವೆಂಬರ್ನಲ್ಲಿ ಈ ಶಿಕ್ಷೆ ಎತ್ತಿ ಹಿಡಿದಿತ್ತು. ಈ ನಡುವೆ ಪ್ರಿಯಾರನ್ನು ಉಳಿಸುವ ಸಲುವಾಗಿ ಭಾರತದ ಸುಪ್ರೀಂ ಕೋರ್ಟ್ ವಕೀಲ ಕೆ.ಆರ್. ಸುಭಾಷ್ ಚಂದ್ರನ್ ಅವರು ವಾದ ಮಂಡಿಸಿದ್ದರು. ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್’ ಎಂಬ ಸಂಘಟನೆಯನ್ನು ಹುಟ್ಟುಹಾಕಿದ ನಿಮಿಷಾ ಸಂಬಂಧಿಕರು ಹಾಗೂ ಬೆಂಬಲಿಗರು, ಸಂತ್ರಸ್ತ ಕುಟುಂಬಕ್ಕೆ ನೀಡಲು ಹಣ ಸಂಗ್ರಹಿಸುತ್ತಿದ್ದಾರೆ.

ಈ ನಡುವೆ ನಿಮಿಷರನ್ನು ಉಳಿಸಲು ವಿದೇಶಾಂಗ ವ್ಯವಹಾರಗಳ ಇಲಾಖೆ ಮೂಲಕ ಕೇಂದ್ರ ಸರ್ಕಾರ ಮಾತುಕತೆ ನಡೆಸಿತ್ತು. 2011ರಿಂದ ಆಂತರಿಕ ಸಂಘರ್ಷ ಎದುರಿಸುತ್ತಿರುವ ಯೆಮೆನ್ನೊಂದಿಗೆ ಗರಿಷ್ಠ ಪ್ರಯತ್ನ ನಡೆಸಲಾಗಿದೆ. ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ಎಂದ ಕೇಂದ್ರ ಸರ್ಕಾರ, ಈವರೆಗೂ ಗರಿಷ್ಠ ಪ್ರಯತ್ನ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಅಟಾರ್ನಿ ಜನರಲ್ ಹೇಳಿದ ನಂತರ ನಿಮಿಷಾ ಸಾವು ಖಚಿತ ಎಂದೇ ಹೇಳಲಾಗಿತ್ತು.

ಆದರೆ ಸುನ್ನಿ ಸಮುದಾಯದ ಪ್ರಭಾವಿ ಮುಖಂಡ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಯೆಮೆನ್ ಸರ್ಕಾರದೊಂದಿಗೆ ಮಂಗಳವಾರದಿಂದ ಮಾತುಕತೆ ಆರಂಭವಾಗಿದೆ. ಇದರ ಬೆನ್ನಲ್ಲೇ ನಿಮಿಷ ಮರಣದಂಡನೆಯನ್ನೂ ಅಲ್ಲಿನ ಸರ್ಕಾರಕ್ಕೆ ಮುಂದಕ್ಕೆ ಹಾಕಿದೆ.
.ಯೆಮೆನ್ನಲ್ಲಿ ಮರಣದಂಡನೆ: ನಿಮಿಷಾ ರಕ್ಷಣೆಗೆ ಮುಂದಾಗದ ಕೇಂದ್ರ; ವೇಣುಗೋಪಾಲ್.ನಿಮಿಷಾಗೆ ಗಲ್ಲು | ಇತರ ರಾಷ್ಟ್ರಗಳಂತೆ ಯೆಮೆನ್ ಅಲ್ಲ ಎಂದು ಕೈಚೆಲ್ಲಿದ ಕೇಂದ್ರ.
‘ಬ್ಲಡ್ ಮನಿ‘ ಎಂದರೇನು..?

ಕೊಲೆಗೀಡಾದ ವ್ಯಕ್ತಿಯ ಕುಟುಂಬವು ಹತ್ಯೆ ಮಾಡಿದ ವ್ಯಕ್ತಿಯನ್ನು ಕ್ಷಮಿಸಬೇಕೆಂದರೆ ‘ದಿಯಾ’ ಎಂಬ ಪರಿಹಾರ ಮೊತ್ತವನ್ನು ನೀಡಬೇಕು ಮತ್ತು ಅದು ನ್ಯಾಯಯುತವಾಗಿರಬೇಕು ಎಂದು ಇಸ್ಲಾಂನ ಷರಿಯಾ ಕಾನೂನಿನಲ್ಲಿ ಹೇಳಲಾಗಿದೆ.

ಈ ಕಾನೂನು ಯೆಮೆನ್, ಸೌದಿ ಅರೇಬಿಯಾ, ಇರಾನ್ ಮತ್ತು ಪಾಕಿಸ್ತಾನದಲ್ಲಿ ಜಾರಿಯಲ್ಲಿದೆ. ‘ದಿಯಾ’ ಎಂಬ ಪರಿಹಾರ ಹಣ ಪಡೆದು ಸಂತ್ರಸ್ತ ಕುಟುಂಬ ಅಪರಾಧಿಯನ್ನು ಕ್ಷಮಿಸಿದರೆ, ಸರ್ಕಾರ ಶಿಕ್ಷೆಯನ್ನು ರದ್ದುಗೊಳಿಸಲಿದೆ.
.ನಿಮಿಷಾಗೆ ಗಲ್ಲು | ಯೆಮೆನ್ ಜೊತೆ ಮುಸ್ಲಿಂ ನಾಯಕರ ಮಾತುಕತೆ; ಚಿಗುರಿದ ಭರವಸೆ.ನರ್ಸ್ ಮರಣದಂಡನೆ ಪ್ರಕರಣ: ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ.
‘ಬ್ಲಡ್ ಮನಿ’ ನೀಡಿ ಕ್ಷಮಾಪಣೆ ಪಡೆದ ಭಾರತೀಯರು

ಮುಸ್ಲಿಂ ರಾಷ್ಟ್ರದಲ್ಲಿರುವ ‘ದಿಯಾ’ ಪದ್ಧತಿಯಲ್ಲಿ ಪರಿಹಾರ ನೀಡಿ ಕೆಲ ಭಾರತೀಯರು ಮರಣದಂಡನೆ ಶಿಕ್ಷೆಯಿಂದ ಪಾರಾಗಿದ್ದಾರೆ.

ಅಬ್ದುಲ್ ರಹೀಂ: ಕೇರಳದ ಕೋಯಿಕ್ಕೋಡ್ನ ಆಟೊರಿಕ್ಷಾ ಚಾಲಕ ಅಬ್ದುಲ್ ರಹೀಂ ಸೌದಿ ಅರೇಬಿಯಾದಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದರು. ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಇವರು ಕ್ಷಮಾದಾನ ಪಡೆದು 20 ವರ್ಷಗಳ ಸೆರೆವಾಸ ಅನುಭವಿಸಿದರು. ಇವರಿಗಾಗಿ ನೀಡಿದ ‘ದಿಯಾ’ ಮೊತ್ತ ಬರೊಬ್ಬರಿ ₹34 ಕೋಟಿ.

2006ರಲ್ಲಿ ಸೌದಿ ಅರೇಬಿಯಾದಲ್ಲಿ ಕುಟುಂಬವೊಂದರ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಹೀಂ, ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಆ ಕುಟುಂಬದ ಬಾಲಕನೊಬ್ಬನನ್ನು ಶಾಂತಿಗೊಳಿಸುವ ಯತ್ನದಲ್ಲಿ ವೈದ್ಯಕೀಯ ಉಪಕರಣವನ್ನು ಕುತ್ತಿಗೆಗೆ ಚುಚ್ಚಿದ್ದರು. ಪಾರ್ಶ್ವವಾಯು ಪೀಡಿತನಾದ ಬಾಲಕ ನಂತರ ಮೃತಪಟ್ಟ. ಆ ಕುಟುಂಬಕ್ಕೆ ಪರಿಹಾರ ಮೊತ್ತ ನೀಡಿದ್ದರಿಂದ, ಕುಟುಂಬದ ಕ್ಷಮಾದಾನ ಅಬ್ದುಲ್ ರಹೀಂಗೆ ಸಿಕ್ಕಿತು. ಆದರೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದು 2026ರ ಡಿಸೆಂಬರ್ಗೆ ಅಂತ್ಯವಾಗಲಿದೆ.

ಎ.ಎಸ್. ಶಂಕರನಾರಾಯಣನ್: ತನ್ನ ಸಹೋದ್ಯೋಗಿಯಾಗಿದ್ದ ಬಾಂಗ್ಲಾದೇಶದ ವ್ಯಕ್ತಿಯನ್ನು 2009ರಲ್ಲಿ ಶೌಚಾಲಯದಲ್ಲಿ ವಿದ್ಯುತ್ ಆಘಾತ ನೀಡಿ ಸಾವಿಗೆ ಕಾರಣನಾದ ಪ್ರಕರಣದಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಕೇರಳಕ್ಕೆ ಮರಳಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ₹47 ಲಕ್ಷ ಪರಿಹಾರ ಮೊತ್ತ ನೀಡದರೆ ಮಾತ್ರ ಶಿಕ್ಷೆಗೆ ಗುರಿಯಾದ ಶಂಕರನಾರಾಯಣನ್ ಅವರಿಗೆ ಕ್ಷಮಾಪಣೆ ಸಿಗುತ್ತಿತ್ತು. ಆದರೆ ಅದನ್ನು ನೀಡಲು ಅವರ ಬಳಿ ಹಣವಿರಲಿಲ್ಲ. ಈ ಸುದ್ದಿ ಗಲ್ಫ್ ನ್ಯೂಸ್ನಲ್ಲಿ ಪ್ರಕಟಗೊಂಡಿತ್ತು. ಶಂಕರನಾರಾಯಣನ್ ನೆರವಿಗೆ ಹಲವರು ಬಂದರು. ಎಮಿರೇಟ್ಸ್ ಇಸ್ಲಾಮಿಕ್ ಬ್ಯಾಂಕ್ ಈ ಹಣವನ್ನು ನೀಡಿ ಶಂಕರನಾರಾಯಣನ್ ಬಿಡುಗಡೆಗೆ ನೆರವಾಯಿತು.

ಸಿ.ಎಚ್.ಲಿಂಬಾದ್ರಿ: ತೆಲಂಗಾಣದ ತೋಟದ ಕೆಲಸಗಾರ ಸಿ.ಎಚ್. ಲಿಂಬಾದ್ರಿ ಎಂಬುವವರು 82 ವರ್ಷದ ವ್ಯಕ್ತಿಯನ್ನು ತಳ್ಳಿ ಸಾಯಿಸಿದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದರು.

ಸೌದಿ ಅರೇಬಿಯಾದಲ್ಲಿ ಈ ಪ್ರಕರಣ ನಡೆದಿದ್ದು, 82 ವರ್ಷದ ವ್ಯಕ್ತಿ ಕದಿಯಲು ಬಂದ ಎಂದು ಲಿಂಬಾದ್ರಿ ಆ ವ್ಯಕ್ತಿಯನ್ನು ತಳ್ಳಿದ್ದರು. ಕೆಳಗೆ ಬಿದ್ದ ಅವರು ಗಾಯಗೊಂಡು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಲಿಂಬಾದ್ರಿಗೆ ಮರಣದಂಡನೆ ಶಿಕ್ಷೆ ಪ್ರಕಟಗೊಂಡಿತ್ತು. ಇವರನ್ನು ಕೆಲಸಕ್ಕೆ ನೇಮಿಸಿಕೊಂಡ ಸಂಸ್ಥೆಯು ಸಂತ್ರಸ್ತ ಕುಟುಂಬಕ್ಕೆ ₹1.80 ಲಕ್ಷ ಪರಿಹಾರ ಮೊತ್ತ ನೀಡಿತು. 2017ರ ಮಾರ್ಚ್ನಲ್ಲಿ ಲಿಂಬಾದ್ರಿ ಬಿಡುಗಡೆಗೊಂಡು ಮನೆಗೆ ಮರಳಿದರು.

ಮೂವರು ಭಾರತೀಯರ ಬಿಡುಗಡೆ: ಸೌದಿ ಅರೇಬಿಯಾದಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂವರನ್ನು ಭಾರತೀಯ ಮೂಲದ ಉದ್ಯಮಿ ₹1.12 ಕೋಟಿ ‘ಬ್ಲಡ್ ಮನಿ’ ನೀಡಿ ಮರಣದಂಡನೆಯಿಂದ ಪಾರು ಮಾಡಿದ್ದರು.

ಬೆಂಗಳೂರಿನ ಚಾಲಕನ ಉಳಿಸಿದ ಸೌದಿ ದೊರೆ: ಬೆಂಗಳೂರಿನ ಸಲೀಂ ಬಾಷಾ ಅವರು ಸೌದಿ ಅರೇಬಿಯಾದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 2006ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂಬತ್ತು ಜನರ ಸಾವಿಗೆ ಇವರು ಕಾರಣರಾಗಿದ್ದರು. 2013ರಲ್ಲಿ ಇವರಿಗೆ ಮರಣದಂಡನೆ ಶಿಕ್ಷೆ ಘೋಷಣೆಯಾಗಿತ್ತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸೌದಿ ಅರೇಬಿಯಾದ ಆಗಿನ ದೊರೆ ₹1.5 ಕೋಟಿ ‘ಪರಿಹಾರ ಮೊತ್ತ’ವನ್ನು ಸಂತ್ರಸ್ತ ಕುಟುಂಬಗಳಿಗೆ ನೀಡಿ ಇವರನ್ನು ಮರಣದಂಡನೆಯಿಂದ ಪಾರು ಮಾಡಿದ್ದರು.

ಇದೀಗ ನಿಮಿಷ ಪ್ರಿಯಾ ಪ್ರಕರಣದಲ್ಲೂ ‘ಬ್ಲಡ್ ಮನಿ’ ಕುರಿತಂತೆ ಮಾತುಕತೆ ನಡೆಯುತ್ತಿದೆ. ಮೆಹ್ದಿ ಕುಟುಂಬ ‘ದಿಯಾ’ ಪಡೆದು ಆಕೆಗೆ ಕ್ಷಮಾದಾನ ನೀಡಲಿದೆಯೇ ಎಂದು ಇಡೀ ಭಾರತವೇ ನಿರೀಕ್ಷೆಯ ನೋಟ ನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.