ಭಾರತದಲ್ಲಿ ಜನಿಸಿ, ಓದಿ, ಬೆಳೆದಿದ್ದರೂ ಕೋಟ್ಯಂತರ ಜನರು ಸಾಗರ ದಾಟಿ ವಿದೇಶಗಳಲ್ಲಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸಂಪಾದನೆಯ ಒಂದಷ್ಟು ಭಾಗವನ್ನು ತಾಯ್ನಾಡಿಗೂ ನೀಡುವುದನ್ನು, ದೇಶದ ಗೌರವವನ್ನು ಎತ್ತಿಹಿಡಿಯುವುದನ್ನು ಅನಿವಾಸಿಗಳು ಮರೆಯಲಾರರು.

ಹೊಟ್ಟೆಪಾಡಿಗಾಗಿ ಹುಟ್ಟೂರು, ಹೆತ್ತವರು, ಕುಟುಂಬದಿಂದ ದೂರವಾಗಿ ಬದುಕು ಕಟ್ಟಿಕೊಂಡವರಿಗಾಗಿ ಭಾರತ ಸರ್ಕಾರ ಪ್ರತಿ ವರ್ಷ ಜನವರಿ 9ರಂದು ಎನ್ಆರ್ಐ ದಿನ ಅಥವಾ ಪ್ರವಾಸಿ ಭಾರತೀಯ ದಿನ ಎಂದು ಮೀಸಲಿಟ್ಟದೆ.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ವಾಸವಾಗಿ ಭಾರತವನ್ನು ಪ್ರತಿನಿಧಿಸುತ್ತಿರುವ ಕೆಲವು ಎನ್ಆರ್ಐಗಳು ‘ಪ್ರಜಾವಾಣಿ ಡಿಜಿಟಲ್’ನೊಂದಿಗೆ ಮಾತುಕತೆ ನಡೆಸಿದ್ದು, ತಾವಿರುವ ದೇಶದಲ್ಲಿನ ಸೌಕರ್ಯ, ಶಿಕ್ಷಣ, ರಕ್ಷಣೆ, ಗೌರವ, ವೈದ್ಯಕೀಯ ಸುರಕ್ಷತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್ನಲ್ಲಿ ಐಟಿ ಉದ್ಯೋಗಿಯಾಗಿ 25 ವರ್ಷಗಳಿಂದ ನೆಲೆಸಿರುವ ಶ್ರೀವತ್ಸ ಜೋಶಿ ಅವರು, ಅಮೆರಿಕದಲ್ಲಿ ಭಾರತೀಯರು ಎಷ್ಟು ಸುರಕ್ಷಿತ, ಉದ್ಯೋಗ ಕ್ಷೇತ್ರದಲ್ಲಿ ಭಾರತೀಯರ ತೊಡಗಿಸಿಕೊಳ್ಳುವಿಕೆ ಬಗ್ಗೆ ವಿವರಿಸಿದ್ದು ಹೀಗೆ..

‘ವಿಶ್ವರಾಜಕೀಯ (ಜಿಯೋಪಾಲಿಟಿಕ್ಸ್) ವಿದ್ಯಮಾನಗಳಿಂದ ಇಲ್ಲಿನ ಅನಿವಾಸಿ ಭಾರತೀಯರ ದೈನಂದಿನ ಜೀವನದ ಮೇಲಾಗಲಿ, ಸುರಕ್ಷತೆಯ ಮೇಲಾಗಲಿ ಅಂಥದೇನೂ ನೇರ ಪರಿಣಾಮ ಉಂಟಾಗುವುದಿಲ್ಲ. ಮಾಧ್ಯಮಗಳಲ್ಲಿ ಬಿಂಬಿತವಾದಷ್ಟು ಕ್ಷೋಭೆ ಪ್ರಕ್ಷುಬ್ಧತೆಗಳೂ ಇಲ್ಲಿ ಇರುವುದಿಲ್ಲ. ವಲಸಿಗರದು ಅಂತಷ್ಟೇ ಅಲ್ಲ, ಇಲ್ಲಿನ ಜನಸಾಮಾನ್ಯರ ಜೀವನವೂ ಮಾಮೂಲಿನಂತೆ ನಡೆದಿರುತ್ತದೆ. ಇನ್ನು ಕೆಲವೊಮ್ಮೆ ‘ರೋಮ್ನಲ್ಲಿ ರೋಮನ್ನನಾಗಿರು’ ಎಂಬ ಸರಳ ತತ್ತ್ವವನ್ನು ಅನುಸರಿಸದೆ ಏನೇನೋ ಉಪದ್ವ್ಯಾಪಗಳನ್ನು ಮಾಡುವವರಿಂದಾಗಿ ಒಂದು ದೇಶದವರ ಬಗ್ಗೆಯೋ ಒಂದು ನಿರ್ದಿಷ್ಟ ಸಮುದಾಯದವರ ಬಗ್ಗೆಯೋ ಸ್ಥಳೀಯರಲ್ಲಿ ರೋಷ ಅಸಹಿಷ್ಣುತೆಯ ವಾತಾವರಣ (ಭಾವವಾಗಲಿ) ಉಂಟಾಗುವುದಿದೆ. ಅದೇನಿದ್ದರೂ ತಾತ್ಕಾಲಿಕ. ಇತ್ತೀಚಿನ ದಶಕಗಳಲ್ಲಿ ಅಮೆರಿಕದಲ್ಲಿ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ವಿವಿಧ ಕ್ಷೇತ್ರಗಳಲ್ಲಿ ಭಾರತೀಯರ ತೊಡಗಿಸಿಕೊಳ್ಳುವಿಕೆ ಮತ್ತು ಅದರಿಂದಾಗಿರುವ ಪ್ರಯೋಜನಗಳು ಇಲ್ಲಿನ ಜನಸಾಮಾನ್ಯರಿಗೂ ರಾಜಕಾರಣಿಗಳಿಗೂ ತಿಳಿದಿವೆ. ಮನುಷ್ಯಸಹಜ ಗುಣವಾದ ಮಾತ್ಸರ್ಯ ಇದ್ದಿರಬಹುದಾದರೂ ಅದು ವಿಕೋಪಕ್ಕೆ, ವಿನಾಶಕೃತ್ಯಗಳಿಗೆ ತಿರುಗುವಂಥದ್ದಲ್ಲ. ಪ್ರಸ್ತುತ ಭಾರತ ದೇಶದ ಆರ್ಥಿಕ ಪ್ರಗತಿ, ಜನಜೀವನ ಶೈಲಿ-ಸಾಮರ್ಥ್ಯಗಳಲ್ಲಿ ಗಣನೀಯ ಸುಧಾರಣೆ, ಕೇಂದ್ರದಲ್ಲಿ ದಕ್ಷ ಸಮರ್ಥ ನಾಯಕತ್ವ ಮುಂತಾದುವೆಲ್ಲವೂ ಇಲ್ಲಿ ನೆಲೆಸಿರುವ ಭಾರತೀಯರ ಆತ್ಮಗೌರವವನ್ನು ಹೆಚ್ಚಿಸಿವೆ. ಅದರಿಂದಾಗಿ ಸ್ಥಳೀಯರಿಗೆ ಭಾರತದ/ಭಾರತೀಯರ ಬಗ್ಗೆ ಗೌರವವೂ ಸಹಜವಾಗಿಯೇ ಹೆಚ್ಚಿದೆ’.

ಜರ್ಮನಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ, ಪ್ರಸ್ತುತ ಯುಕೆ (ಬ್ರಿಟನ್)ನಲ್ಲಿ ಐಟಿ ಉದ್ಯೋಗಿಯಾಗಿರುವ ಭಾರತೀಯ ಶ್ರೇಯಸ್ ಮಾತನಾಡಿ, ‘ಜರ್ಮನಿಯಲ್ಲಿನ ಶಿಕ್ಷಣ ಪದ್ಧತಿ, ಬ್ರಿಟನ್ನಲ್ಲಿ ವೈದ್ಯಕೀಯ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದು ಹೀಗೆ..

‘ಜರ್ಮನಿಯಲ್ಲಿ ಎರಡು ರೀತಿಯ ವಿಶ್ವವಿದ್ಯಾಲಯಗಳಿವೆ. ಟೆಕ್ನಿಕಲ್ ಮತ್ತು ಇಂಡಸ್ಟ್ರಿಯಲ್. ಮುಂದಿನ 20-30 ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಏನೆಲ್ಲಾ ಬೆಳವಣಿಗೆಯಾಗಲಿವೆ ಎನ್ನುವ ಬಗ್ಗೆ ಟೆಕ್ನಿಕಲ್ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಯಲಿದೆ. ಇಂಡಸ್ಟ್ರಿಯಲ್ ವಿಶ್ವವಿದ್ಯಾಲಯಗಳಲ್ಲಿ ಇಂಡಸ್ಟ್ರಿಯಲ್ಲಿ ಈಗ ಯಾವ ರೀತಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ ಮತ್ತು ಮಂದಿನ 2, 3 ವರ್ಷಗಳಲ್ಲಿ ಏನೆಲ್ಲಾ ಅಭಿವೃದ್ಧಿಯಾಗಲಿದೆ ಎನ್ನುವ ಬಗ್ಗೆ ಸಂಶೋಧಗಳು ನಡೆಯುತ್ತವೆ’.

‘ಇನ್ನೊಂದು ಪ್ರಮುಖ ವಿಚಾರ ಎಂದರೆ ಯಾವ ವಿಷಯವನ್ನು ಕಲಿಯುತ್ತಿರುತ್ತೇವೆಯೋ, ಅದೇ ವಿಷಯದಲ್ಲಿ ಕೆಲಸ ಮಾಡುವ ಅವಕಾಶ ಜರ್ಮನಿಯಲ್ಲಿ ಸಿಗುತ್ತದೆ. ಪ್ರೊಫೆಸರ್ಗಳು ಯಾವ ವಿಷಯಗಳಲ್ಲಿ ತಜ್ಞರಾಗಿರುತ್ತಾರೋ ಅವರಿರುವ ವಿಶ್ವವಿದ್ಯಾಲಯದಲ್ಲಿ ಪಠ್ಯವನ್ನು ಸಿದ್ಧಪಡಿಸುತ್ತಾರೆ. ಹೀಗಾಗಿ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಪಠ್ಯ ವಿಭಿನ್ನವಾಗಿರುತ್ತದೆ. ಪುಸ್ತಕದ ಓದು ಮತ್ತು ಪ್ರಸ್ತುತ ಸಂಶೋಧನೆ ಮತ್ತು ಉದ್ಯೋಗಕ್ಕೆ ಬೇಕಾಗಿರುವ ಕೌಶಲ್ಯಗಳ ನಡುವೆ ಅಂತರ ಕಡಿಮೆ. ಹೀಗಾಗಿ ಸುಲಭವಾಗಿ ಉದ್ಯೋಗವನ್ನು ಗಳಿಸಬಹುದು’ ಎನ್ನುತ್ತಾರೆ.

ಬ್ರಿಟನ್ನಲ್ಲಿ ವೈದ್ಯಕೀಯ ಸೌಲಭ್ಯ

‘ಭಾರತಕ್ಕೆ ಹೋಲಿಸಿದರೆ ಬ್ರಿಟನ್ನಲ್ಲಿ ವೈದ್ಯರನ್ನು ಭೇಟಿಯಾಗುವುದೇ ಕಷ್ಟದ ಕೆಲಸ. ಸಾಮಾನ್ಯ ಜ್ವರ, ನೆಗಡಿಗೆಲ್ಲ ವೈದ್ಯರನ್ನು ಸುಲಭವಾಗಿ ಭೇಟಿಯಾಗಲು ಸಾಧ್ಯವಿಲ್ಲ. ಮೊಬೈಲ್ ಅಪ್ಲಿಕೇಶನ್ ಮೂಲಕ ಮೊದಲೇ ನೋಂದಣಿ ಮಾಡಿರಬೇಕು. ಅದೂ ವಾರ, ಎರಡು ವಾರ ತಡವಾಗಿ ವೈದ್ಯರನ್ನು ಕಾಣಬೇಕಾಗುತ್ತದೆ. ರಾಷ್ಟ್ರೀಯ ವಿಮೆ ಇರುತ್ತದೆ. ಹೀಗಾಗಿ ಗಂಭೀರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಭರಿಸುತ್ತದೆ. ಆದರೆ ಸಮಸ್ಯೆಯೆಂದರೆ ವೈದ್ಯರ ಭೇಟಿ. ಸರಿಯಾದ ಔಷಧ ಚೀಟಿಯೂ ಸುಲಭಕ್ಕೆ ಸಿಗವುದಿಲ್ಲ. ತುರ್ತು ಅಗತ್ಯವಿದ್ದಾಗ ಚಿಕಿತ್ಸೆ ದೊರಕುತ್ತದೆ. ಭಾರತದಲ್ಲಿ ವೈದ್ಯಕೀಯ ಸೇವೆ ದಿನದ 24 ಗಂಟೆಯೂ ಸಿಗುತ್ತದೆ. ಆದರೆ ಅದು ಯುಕೆಯಲ್ಲಿ ಸಾಧ್ಯವಿಲ್ಲ’.

ಬೆಹರೇನ್ನಲ್ಲಿ ಸ್ವಂತ ಉದ್ಯೋಗ
ವಿದೇಶಗಳಲ್ಲಿ ಸ್ವಂತ ಉದ್ಯೋಗ ಆರಂಭಿಸುವುದು ಸುಲಭದ ಮಾತಲ್ಲ. ಆದರೆ ಅಲ್ಲಿಯ ವ್ಯವಸ್ಥೆ ಹೇಗಿದೆ, ಸರ್ಕಾರಿ ಹಂತದಲ್ಲಿ ಪ್ರಕ್ರಿಯೆ ಹೇಗಿರಲಿದೆ ಎನ್ನುವ ಬಗ್ಗೆ ತಿಳಿದಿರಬೇಕು. ಬೆಹರೇನ್ನಲ್ಲಿ ಕಳೆದ 18 ವರ್ಷಗಳಿಂದ ಸ್ವಂತ ಉದ್ಯೋಗ ನಡೆಸುತ್ತಿರುವ ಕಿರಣ್ ಉಪಾಧ್ಯಾಯ ಅವರು ಮಾತನಾಡಿ. ‘ಬೆಹರೇನ್ನಲ್ಲಿ ಉದ್ಯೋಗ ಆರಂಭಿಸುವುದು ಸುಲಭ. ಆರಂಭದಲ್ಲಿ ಪಾಸ್ಪೋರ್ಟ್ ಪ್ರತಿಯ ಮೂಲಕ ಪೊಲೀಸರಿಂದ ಪರಿಶೀಲನೆ ನಡೆಯುತ್ತದೆ. ಇದಕ್ಕೆ ಸುಮಾರು 15 ದಿನಗಳು ಬೇಕಾಗುತ್ತವೆ. ನಂತರ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಮೂಲಕ ಒಂದು ದಿನದಲ್ಲಿ ಸ್ವಂತ ಉದ್ಯೋಗದ ಕನಸನ್ನು ಆರಂಭಿಕ ಹಂತಕ್ಕೆ ಕೊಂಡೊಯ್ಯಬಹುದು. ಅದರ ನಂತರ ಬ್ಯಾಂಕ್ ಖಾತೆ ತೆರೆಯುವುದು, ನಿವಾಸಿಯಾಗಿ ಇರುವುದಕ್ಕೆ ಪರವಾನಗಿ ಸಿಗಲು ಒಂದು ವಾರಗಳಷ್ಟು ಸಮಯ ಹಿಡಿಯುತ್ತದೆ’.

‘ಬೆಹರೇನ್ನಲ್ಲಿ ತೆರಿಗೆ ಪದ್ಧತಿ ಇಲ್ಲ. ಹೀಗಾಗಿ ಆದಾಯ ತೆರಿಗೆ ಪದ್ಧತಿಯೂ ಇಲ್ಲ. ಆದರೆ ವ್ಯಾಟ್ ವ್ಯವಸ್ಥೆ ಇದೆ. ಸಾಮಗ್ರಿ ಮತ್ತು ಸೇವೆಗಳ ಮೇಲೆ ವ್ಯಾಟ್ ಅನ್ವಯವಾಗುತ್ತದೆ. ಪ್ರಸ್ತುತ ಶೇ 10ರಷ್ಟು ವ್ಯಾಟ್ ದರ ಇದೆ’ ಎಂದು ವಿವರಿಸಿದ್ದಾರೆ.
.ಪ್ರವಾಸಿ ಭಾರತೀಯ ದಿವಸದಲ್ಲಿ ಪಾಲ್ಗೊಂಡ NRIಗಳ ನೆಚ್ಚಿನ ತಾಣ ಪುರಿ ಜಗನ್ನಾಥ ಮಂದಿರ.Pravasi Bharatiya Divas: ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ 10 ದೇಶಗಳಿವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.