ಸೋಮವಾರ, ಜೂಲೈ 13, 2020
22 °C

ಮಿಡತೆ ದಾಳಿಯಿಂದ ಭಾರತ, ಚೀನಾ, ಇರಾನ್‌ನಲ್ಲಿ ಜನರು ಸಾಯುತ್ತಿದ್ದಾರಂತೆ ಹೌದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಿಡತೆ ದಾಳಿ ದೇಶದಲ್ಲಿ ಭಾರಿ ಸುದ್ದಿಯಲ್ಲಿದೆ. ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮೊದಲಾದೆಡೆ ಹೊಲಗಳಲ್ಲಿ ಬೆಳೆದ ಫಸಲಿಗೆ ಅವು ಲಗ್ಗೆಯಿಟ್ಟಿವೆ. ಹಾರುವ ಕೀಟಗಳು ಜನರ ಮೇಲೂ ದಾಳಿ ಮಾಡುತ್ತಿದ್ದು, ಭಾರತ, ಚೀನಾ, ಇರಾನ್‌ನಲ್ಲಿ ಜನರು ಸಾಯುತ್ತಿದ್ದಾರೆ. ಜನರು ಬೀದಿಯಲ್ಲಿ ಸತ್ತು ಬಿದ್ದಿರುವ ದೃಶ್ಯಗಳಿರುವ ವಿಡಿಯೊ ಹರಿದಾಡುತ್ತಿದೆ.  

ದೇಶದಲ್ಲಿ ಮಿಡತೆ ಹಾವಳಿ ನಿಜವಾದರೂ, ಅವುಗಳ ದಾಳಿಯಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿ. ಮಿಡತೆಗಳು ಬೆಳೆಯನ್ನು ಹಾಳು ಮಾಡುತ್ತವೆಯೇ ವಿನಾ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಈ ಸಂಬಂಧ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೊ ವಿಶಾಖಪಟ್ಟಣದ್ದು. ಇತ್ತೀಚೆಗೆ ಸಂಭವಿಸಿದ ಅನಿಲ ಸೋರಿಕೆ ವೇಳೆ ಜನರು ಅಸ್ವಸ್ಥರಾಗಿ ಬೀಳುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ಮಿಡತೆ ದಾಳಿಗೂ ಈ ವಿಡಿಯೋಗೂ ಸಂಬಂಧವಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು