ಬುಧವಾರ, ಸೆಪ್ಟೆಂಬರ್ 29, 2021
20 °C

‌ಫ್ಯಾಕ್ಟ್ ಚೆಕ್: ಇ–ಮೇಲ್ ಮೂಲಕ ರೋಗಿಯ ಮಾಹಿತಿ ಕಳುಹಿಸಿ 2ಡಿಜಿ ಔಷಧ ಪಡೆಯಬಹುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ. ರೆಡ್ಡೀಸ್‌ ಲ್ಯಾಬ್ ಸಹಯೋಗದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿಶ್ವಾಸ ಹುಟ್ಟುಹಾಕಿದೆ. ಔಷಧ ಎಲ್ಲಿ ಲಭ್ಯ, ಪಡೆಯುವುದು ಹೇಗೆ, ಬೆಲೆ ಎಷ್ಟು ಎಂಬೆಲ್ಲ ಪ್ರಶ್ನೆಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಸಂದೇಶದಲ್ಲಿ ಈ ಕುರಿತ ಮಾಹಿತಿ ಇದೆ. ಡಾ. ರೆಡ್ಡೀಸ್‌ ಲ್ಯಾಬ್‌ಗೆ ಸಂಬಂಧಿಸಿದವರು ಎನ್ನಲಾದ ಇಬ್ಬರ ಇ–ಮೇಲ್ ವಿಳಾಸವನ್ನು ನೀಡಲಾಗಿದ್ದು, ರೋಗಿಯ ಮಾಹಿತಿ, ಆಸ್ಪತ್ರೆಯ ಮಾಹಿತಿಯನ್ನು ಈ ವ್ಯಕ್ತಿಗಳಿಗೆ ಇ–ಮೇಲ್ ಮುಖಾಂತರ ಕಳುಹಿಸಿ 2ಡಿಜಿ ಔಷಧ ಪಡೆದುಕೊಳ್ಳಬಹುದು ಎಂದು ಈ ಸಂದೇಶ ತಿಳಿಸುತ್ತದೆ.

ಸಂದೇಶದಲ್ಲಿರುವ ಮಾಹಿತಿ ನಕಲಿ ಎಂದು ಲಾಜಿಕಲ್ ಇಂಡಿಯನ್‌ ವೆಬ್‌ಸೈಟ್ ತಿಳಿಸಿದೆ. ಡಿಆರ್‌ಡಿಒ ಅಥವಾ ರೆಡ್ಡೀಸ್‌ ಲ್ಯಾಬ್‌ ಔಷಧದ ಬೆಲೆ, ಲಭ್ಯತೆ, ಸಂಪರ್ಕಿಸುವ ವಿಧಾನದ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಜೂನ್ ಮಧ್ಯಭಾಗದ ಹೊತ್ತಿಗೆ ಔಷಧವು ಜನಬಳಕೆಗೆ ಲಭ್ಯವಾಗಲಿದೆ. ರೆಡ್ಡೀಸ್ ಲ್ಯಾಬ್ ಇದನ್ನು ದೃಢಪಡಿಸಿದೆ. 2ಡಿಜಿಗೆ ಸಂಬಂಧಿಸಿದ ಏನೇ ಮಾಹಿತಿಗೆ 2DG@drreddys.comಗೆ ಮೇಲ್ ಮಾಡುವಂತೆ ಸಲಹೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು