ಸಾವಿರಾರು ಮುಸ್ಲಿಮರು ರಸ್ತೆಯೊಂದರಲ್ಲಿ ನೆರೆದಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಇದು ಕೋಲ್ಕತ್ತದಲ್ಲಿ ತೆಗೆಯಲಾಗಿರುವ ಚಿತ್ರ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿರುವುದಕ್ಕೆ ಈ ಚಿತ್ರವೇ ಸಾಕ್ಷಿ. ಈ ಸಮುದಾಯದ ಜನಸಂಖ್ಯೆ ಏರಿಕೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಾರಣ. ಈ ದೇಶ ಒಂದು ದಿನ ಇಸ್ಲಾಮಿಕ್ ರಿಪಬ್ಲಿಕ್ ಆಗುತ್ತದೆ. ಅದನ್ನು ತಡೆಯಬೇಕೆಂದರೆ ಹಿಂದೂಗಳೆಲ್ಲರೂ ಬಿಜೆಪಿಗೆ ಮತ ನೀಡಬೇಕು’ ಎಂಬ ವಿವರಣೆಯನ್ನು ಈ ಚಿತ್ರದ ಜೊತೆ ನೀಡಲಾಗಿದೆ.

ಈ ಚಿತ್ರದ ಜೊತೆ ನೀಡಲಾಗಿರುವ ವಿವರಣೆ ಸುಳ್ಳು ಎಂದು ‘ದಿ ಲಾಜಿಕಲ್ ಇಂಡಿಯನ್’ ವೇದಿಕೆ ವರದಿ ಮಾಡಿದೆ. ‘ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ ಘಟನೆಗೆ ಸಂಬಂಧಿಸಿದ ವಿಡಿಯೊಗಳು ಯುಟ್ಯೂಬ್ನಲ್ಲಿ ಪತ್ತೆಯಾಗಿವೆ. ಈ ಚಿತ್ರವನ್ನು 2021ರ ಜನವರಿಯಲ್ಲಿಪಾಕಿಸ್ತಾನದ ಲಾಹೋರ್ನಲ್ಲಿ ಸೆರೆಹಿಡಿಯಲಾಗಿದೆ. ‘ತಹ್ರೀಕ್–ಲಬೈಯಕ್ ಪಾಕಿಸ್ತಾನ’ಪಕ್ಷದ ಸಂಸ್ಥಾಪಕ ಅಲ್ಲಮ್ ಖಾದಿಮ್ ಹುಸೇನ್ ರಿಜ್ವಿ ಅವರ ಚೆಹ್ಲಮ್ (ವ್ಯಕ್ತಿ ಮೃತಪಟ್ಟ 40ನೇ ದಿನ ಕೈಗೊಳ್ಳುವ ಧಾರ್ಮಿಕ ಆಚರಣೆ) ನಡೆದಿತ್ತು. ಅದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು’ ಎಂದು ದಿ ಲಾಜಿಕಲ್ ಇಂಡಿಯನ್ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.