ಶನಿವಾರ, ಮೇ 15, 2021
23 °C

ಫ್ಯಾಕ್ಟ್ ಚೆಕ್: ಕೋವಿಡ್ ನಿಭಾಯಿಸುವಲ್ಲಿ ಯೋಗಿ ಸರ್ಕಾರ ಮಾತ್ರ ಉತ್ತಮವಾಗಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದೆಲ್ಲೆಡೆ ಕೋವಿಡ್ ಭಾರಿ ಸ್ವರೂಪದಲ್ಲಿ ದಾಳಿ ಮಾಡುತ್ತಿದ್ದರೆ, ಉತ್ತರ ಪ್ರದೇಶ ಮಾತ್ರ ಈ ಕಠಿಣ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ಶ್ಲಾಘಿಸಿದೆ. ಕೆಲವು ಸುದ್ದಿಸಂಸ್ಥೆಗಳು, ವೆಬ್‌ಸೈಟ್‌ಗಳು ಸಹ ಯೋಗಿ ಆದಿತ್ಯನಾಥ ಸರ್ಕಾರವನ್ನು ಮೆಚ್ಚಿ ವರದಿ ಪ್ರಕಟಿಸಿವೆ. 

ಹಾಪ್ಕಿನ್ಸ್ ವಿಶ್ವವಿದ್ಯಾಲಯವು ನಡೆಸಿದ ಅಧ್ಯಯನವು ಇತರ ರಾಜ್ಯಗಳು ಹಾಗೂ ದೇಶಗಳ ಜತೆ ಉತ್ತರ ಪ್ರದೇಶವನ್ನು ಹೋಲಿಸಿ ಮಾಡಿದ ಅಧ್ಯಯನ ವರದಿ ಅಲ್ಲ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡೇವಿಡ್ ಪೀಟರ್ ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶವು ಕೋವಿಡ್‌ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದೆ ಎಂಬುದರ ಮೇಲಷ್ಟೇ ವರದಿ ಕೇಂದ್ರೀಕೃತವಾಗಿದೆ ಎಂದಿದ್ದಾರೆ. ಸರ್ಕಾರವನ್ನು ಶ್ಲಾಘಿಸಿದ ಭಾರತೀಯ ಮಾಧ್ಯಮಗಳ ವರದಿಗಳನ್ನು ಅವರು ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು