ಭಾನುವಾರ, ಸೆಪ್ಟೆಂಬರ್ 26, 2021
29 °C

ಕನ್ಹಯ್ಯಾ ರ‍್ಯಾಲಿಯಲ್ಲಿ ಅಫ್ಜಲ್ ಗುರು ಫೋಟೊ: ಸಾಮಾಜಿಕ ತಾಣದಲ್ಲಿ ಸುಳ್ಳುಸುದ್ದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ಹಯ್ಯಾ ಕುಮಾರ್ ಚುನಾವಣಾ ರ‍್ಯಾಲಿಯಲ್ಲಿ ಉಗ್ರ ಅಫ್ಜಲ್ ಗುರು ಚಿತ್ರ ಬಳಸಿದ್ದಾರೆ ಎಂಬ ಸುಳ್ಳುಸುದ್ದಿ  ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

 2011ರಲ್ಲಿ ಸಂಸತ್ ಮೇಲೆ ದಾಳಿ ಮಾಡಿದ ಪ್ರಕರಣದ ದೋಷಿ ಅಫ್ಜಲ್ ಗುರು ಚಿತ್ರವನ್ನು ಚುನಾವಣಾ ರ‍್ಯಾಲಿಯಲ್ಲಿ ಬಳಸಿದ್ದಕ್ಕಾಗಿ  ಕನ್ಹಯ್ಯಾ ಕುಮಾರ್‌ನ್ನು ಹಲವಾರು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಚುನಾವಣಾ ರ‍್ಯಾಲಿಯ ಫೋಟೊದಲ್ಲಿ ಅಫ್ಜಲ್ ಗುರು ಫೋಟೊವನ್ನು ಎಡಿಟ್ ಮಾಡಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ.

ಫ್ಯಾಕ್ಟ್‌ಚೆಕ್ 


ಕನ್ಹಯ್ಯಾ ಕುಮಾರ್ ಅವರ ಚುನಾವಣಾ ರ‍್ಯಾಲಿ ಫೋಟೊ ಇದು. ಬೇಗುಸರಾಯ್‌ಯಲ್ಲಿ ಈ ಚುನಾವಣಾ ರ‍್ಯಾಲಿ ನಡೆದಿತ್ತು. 

ರ‍್ಯಾಲಿಗೆ ಬಳಸಿರುವ ವಾಹನದಲ್ಲಿ ಅಫ್ಜಲ್ ಗುರು ಫೋಟೊ ಇದೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ ಇದು ಫೋಟೊಶಾಪ್ ಮಾಡಿದ ಚಿತ್ರವಾಗಿದೆ.


ಬೇಗುಸರಾಯ್ ರ‍್ಯಾಲಿಯ ನಿಜವಾದ ಚಿತ್ರ ನೋಡಿದರೆ ಸಿಪಿಐ ಪಕ್ಷದ ಚಿಹ್ನೆಯ ಹಿಂದೆ ಕನ್ಹಯ್ಯಾ ಕುಮಾರ್ ಇದ್ದಾರೆ. ಚುನಾವಣಾ ರ‍್ಯಾಲಿಯ ವಿಡಿಯೊವನ್ನು ಎಬಿಪಿ ನ್ಯೂಸ್ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ಇದರಲ್ಲಿ ಕನ್ಹಯ್ಯಾ ಕುಮಾರ್ ಸಿಪಿಐ ಪಕ್ಷದ ಚಿಹ್ನೆ ಇರುವ ವಾಹನದಲ್ಲಿ ಸಾಗುತ್ತಾ ಜನರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು.
 

ಇದನ್ನೂ ಓದಿಹನುಮಂತನ ಬಗ್ಗೆ ಕನ್ಹಯ್ಯಾ ಕುಮಾರ್ ಹಿಂದೂ ವಿರೋಧಿ ಹೇಳಿಕೆ: ಇದು ಸುಳ್ಳು ಸುದ್ದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು