ಬುಧವಾರ, ಜೂನ್ 3, 2020
27 °C

Fact Check| ಹೋಟೆಲ್‌, ರೆಸ್ಟೊರೆಂಟ್‌, ರೆಸಾರ್ಟ್‌ಗಳು ಅ.15ರವರೆಗೆ ಮುಚ್ಚಬೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ದೇಶದಾದ್ಯಂತ ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು, ರೆಸಾರ್ಟ್‌ಗಳನ್ನು ಅಕ್ಟೋಬರ್‌ 15ರ ವರೆಗೆ ಮುಚ್ಚಬೇಕು ಎಂದು ಆದೇಶಿಸಿದ ಪ್ರವಾಸೋದ್ಯಮ ಇಲಾಖೆಯ ಪತ್ರವೊಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 

ಏನಿದೆ ಆದೇಶ ಪತ್ರದಲ್ಲಿ? 

ಕೊರೊನಾ ವೈರಸ್‌ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ಹೋಟೆಲ್‌, ರೆಸ್ಟೊರೆಂಟ್‌ಗಳು, ರೆಸಾರ್ಟ್‌ಗಳನ್ನು 2020ರ ಅಕ್ಟೋಬರ್‌ 15ರ ವರೆಗೆ ಮುಚ್ಚಬೇಕು. ಈ ಆದೇಶವು ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ನೇರವಾಗಿ ಬಂದಿದೆ. ಮುಖ್ಯವಾಗಿ ಉತ್ತರ ಭಾರತ ಶೈಲಿಯ ಹೋಟೆಲ್‌, ರೆಸಾರ್ಟ್‌, ರೆಸ್ಟೊರೆಂಟ್‌ಗಳನ್ನು ಮುಚ್ಚಲೇ ಬೇಕು. ಇದನ್ನು ಪಾಲಿಸದೇ ಹೋದರೆ, ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗುವುದು. ಹೆಚ್ಚಿನ ಮಾಹಿತಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್‌ ಆಗಿ,’ ಎಂದು ಪತ್ರದಲ್ಲಿ ತಿಳಿಸಲಾಗಿದೆ. 

ಈ ಪತ್ರ ಅಸಲಿಯೇ? ಆದೇಶ ನಿಜವೇ? 

ಇಂಥ ಆದೇಶವೊಂದು ಕೇಂದ್ರ ಸರ್ಕಾರದಿಂದ ಹೊರಬಿದ್ದ ಬಗ್ಗೆ ಯಾವುದೇ ಸುದ್ದಿ ಈ ವರೆಗೆ ಪ್ರಕಟವಾಗಿಲ್ಲ. ಅದೂ ಅಲ್ಲದೇ, ಕೇಂದ್ರ ಸರ್ಕಾರ ಇಂಥದ್ದೊಂದು ಆದೇಶ ಮಾಡಿಲ್ಲ ಎಂದು ಸ್ವತಃ ಸರ್ಕಾರ ತಿಳಿಸಿದೆ. ‘ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋ’ ಈ ಕುರಿತು ಟ್ವೀಟ್‌ ಮಾಡಿದ್ದು, ಇಂಥ ಆದೇಶ ಕೇಂದ್ರ ಸರ್ಕಾರದಿಂದ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಅದರೊಂದಿಗೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆದೇಶ ಪತ್ರ ನಕಲಿ ಎಂಬುದು ಸಾಬೀತಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು