ಶನಿವಾರ, ಸೆಪ್ಟೆಂಬರ್ 18, 2021
22 °C

Fact Check | ಕಾಂಗ್ರೆಸ್‌ ಕಾಶ್ಮೀರ, ಮೋದಿ ಕಾಶ್ಮೀರ! ಫೋಟೊಗಳ ಅಸಲಿತನವೇನು?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕಾಶ್ಮೀರದ ಶಾಲಾ ಬಾಲಕಿಯರು ಇರುವ ಎರಡು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೊದಲನೆಯ ಚಿತ್ರದಲ್ಲಿ ಮಕ್ಕಳು ಕಲ್ಲು ತೂರಾಟ ನಡೆಸುತ್ತಿರುವ ಚಿತ್ರಣವಿದೆ. ಇದು ಕಾಂಗ್ರೆಸ್ ಅವಧಿಯಲ್ಲಿ ತೆಗೆದ ಚಿತ್ರ ಎಂದು ಬಿಂಬಿಸಲಾಗಿದೆ. ಎರಡನೆಯ ಚಿತ್ರದಲ್ಲಿ ಮಕ್ಕಳು ಕೈಯಲ್ಲಿ ರಾಷ್ಟ್ರದ್ವಜ ಹಿಡಿದಿರುವ ಚಿತ್ರಣವಿದೆ. ಇದು ಬಿಜೆಪಿ ಸರ್ಕಾರ ಬಂದ ಬಳಿಕ ಆಗಿರುವ ಬದಲಾವಣೆ ಎಂದು ಬಿಂಬಿಸಲಾಗಿದೆ.

ಈ ಚಿತ್ರಗಳ ಬಗ್ಗೆ ಆಲ್ಟ್ ನ್ಯೂಸ್ ಪರಿಶೀಲನೆ ನಡೆಸಿದ್ದು, ಎರಡೂ ಚಿತ್ರಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೆರೆಹಿಡಿದ ಚಿತ್ರಗಳು ಎಂದು ತಿಳಿಸಿದೆ. ಮೊದಲನೆಯ ಚಿತ್ರವನ್ನು 2017ರಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಪ್ರಕಟಿಸಿದೆ. ಎರಡನೆಯ ಚಿತ್ರವನ್ನು 2021ರ ಗಣರಾಜ್ಯೋತ್ಸವದ ದಿನ ಸೆರೆಹಿಡಿಯಲಾಗಿದೆ. ಈ ಚಿತ್ರದಲ್ಲಿ ಕೆಲವು ಬಾಲಕಿಯರು ಮಾಸ್ಕ್ ಧರಿಸಿರುವುದನ್ನು ಕಾಣಬಹುದು ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು