ಶುಕ್ರವಾರ, ಏಪ್ರಿಲ್ 23, 2021
27 °C

Fact Check: ಓಂಕಾರವನ್ನು ನಿಷೇಧಿಸಬೇಕೆಂದು ಕೇರಳ ಮುಸ್ಲಿಮರು ಆಗ್ರಹಿದ್ದರೇ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

‘ಕೇರಳದಲ್ಲಿ ಓಂಕಾರವನ್ನು ನಿಷೇಧಿಸಬೇಕು ಎಂದು ಕೇರಳ ಮುಸ್ಲಿಮರು ಆಗ್ರಹಿಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಮೇಲೆ ಓಂಕಾರವನ್ನು ಬರೆದಿದ್ದ ಇಬ್ಬರು ಶಿಕ್ಷಕರನ್ನು ರಜೆ ಮೇಲೆ ಕಳುಹಿಸಲಾಗಿದೆ’ ಎಂಬ ಬರಹ ಇರುವ ಸುದ್ದಿವಾಹಿನಿಗಳ ವರದಿಗಳ ಸ್ಕ್ರೀನ್‌ಶಾಟ್‌ಗಳನ್ನು ಆಧರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪೋಸ್ಟ್‌ಗಳನ್ನು ಮಾಡಿದ್ದಾರೆ. ‘ಕೇರಳದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ 40ರಷ್ಟನ್ನು ದಾಟಿದೆ. ಕೇರಳದಲ್ಲಿ ಈಗ ಹಿಂದೂ ಧರ್ಮ ಅಪಾಯದಲ್ಲಿದೆ. ಇಂತಹ ಸಂದರ್ಭದಲ್ಲೂ ಜಾತ್ಯತೀತ ನಿಲುವುಗಳನ್ನು ಪಾಲಿಸಬೇಕೆ? ನಮ್ಮ ಧರ್ಮವನ್ನು ನಾವು ರಕ್ಷಿಸಿಕೊಳ್ಳುವುದೆ, ಬೇಡವೇ’ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸುದ್ದಿ ವಾಹಿನಿಗಳ ವರದಿಗಳನ್ನು ತಿರುಚಲಾಗಿದೆ. ಫೆಬ್ರುವರಿ 27ರಂದು ಟೈಮ್ಸ್ ನೌ, ‘ಅಯಿಕ್ಕೋಡ್‌ನ ಸರ್ಕಾರಿ ಶಾಲೆಯ ಗಣಿತದ ಶಿಕ್ಷಕರು ಗಣಿತ ಪ್ರಾರ್ಥನೆಯನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಿದ್ದರು. ಆ ಪ್ರಾರ್ಥನೆಯನ್ನು ದಿನವೂ ಅಭ್ಯಾಸ ಮಾಡುವಂತೆ ಹೇಳಿದ್ದರು. ಇದಕ್ಕೆ ಕೆಲವು ವಿದ್ಯಾರ್ಥಿಗಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದು ರಾಜಕೀಯ ನಾಯಕರ ಟೀಕೆಗೂ ಕಾರಣವಾಗಿತ್ತು. ಹೀಗಾಗಿ ಇಬ್ಬರೂ ಶಿಕ್ಷಕರನ್ನು ರಜೆಯ ಮೇಲೆ ಕಳುಹಿಸಲಾಗಿದೆ’ ಎಂದು ವರದಿ ಮಾಡಿದೆ. ಈ ವರದಿಗಳನ್ನು ತಿರುಚಿ, ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು