Fact Check: ‘ಕೇಜ್ರಿವಾಲ್ ಅವರೇ ಮೊದಲು ಮಾಸ್ಕ್ ಧರಿಸಿ, ಆಮೇಲೆ ಬೋಧಿಸಿ’

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ವಿದ್ಯಾರ್ಥಿಯೊಬ್ಬನಿಗೆ ಮಾಸ್ಕ್ ವಿತರಿಸುತ್ತಿರವ ಚಿತ್ರ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ವಿಶೇಷವೆಂದರೆ, ಮಾಸ್ಕ್ ಧರಿಸುವ ವಿಧಾನ ಹೇಳಿಕೊಡುತ್ತಿರುವ ಇವರಾರೂ ಮಾಸ್ಕ್ ಧರಿಸಿಲ್ಲ ಎಂಬುದು ನೆಟ್ಟಿಗರ ಆರೋಪ. ಸ್ವತಃ ಮಾಸ್ಕ್ ಧರಿಸಿ, ಇನ್ನೊಬ್ಬರಿಗೆ ಪಾಠ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಯು ಚಿತ್ರದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ಈ ಚಿತ್ರವು 2019ರ ನವೆಂಬರ್ ಅವಧಿಯದ್ದು ಎಂಬುದು ಕಂಡುಬಂದಿದೆ. ಆಗ ಇನ್ನೂ ಕೊರೊನಾ ವೈರಸ್ ದೇಶಕ್ಕೆ ಕಾಲಿರಿಸಿರಲಿಲ್ಲ. ದೆಹಲಿಯಲ್ಲಿ ತೀವ್ರ ಮಟ್ಟದಲ್ಲಿ ಹೆಚ್ಚಾಗಿದ್ದ ವಾಯುಮಾಲಿನ್ಯದಿಂದ ಪಾರಾಗಲು ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸುವ ಕಾರ್ಯಕ್ರಮದಲ್ಲಿ ಈ ಚಿತ್ರ ತೆಗೆಯಲಾಗಿತ್ತು ಎಂದು ವೆಬ್‌ಸೈಟ್ ಮಾಹಿತಿ ನೀಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.