ಫ್ಯಾಕ್ಟ್ಚೆಕ್: ರೈತರು ಖಲಿಸ್ತಾನದ ಪರ ಘೋಷಣೆ ಕೂಗಿದ್ದು ನಿಜವೇ?
ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಪಾಕಿಸ್ತಾನ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂಬ ವಿಡಿಯೊ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ರೈತರ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರವಾಗಿ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ? ಇವರು ನಿಜವಾಗಿಯೂ ರೈತರೇ?' ಎಂದು ಪ್ರೀತಿ ಗಾಂಧಿ ಎಂಬುವವರು ಟ್ವೀಟ್ ಮಾಡಿದ್ದಾರೆ. ಕೆಲವರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿರುವ ವಿಡಿಯೊವನ್ನೂ ಅವರು ಟ್ವೀಟ್ನಲ್ಲಿ ಲಗತ್ತಿಸಿದ್ದಾರೆ. ದೆಹಲಿ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಪುನೀತ್ ಅಗರ್ವಾಲ್ ಸಹ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಸಹ ಪ್ರತಿಭಟನಾ ನಿರತ ರೈತರನ್ನು 'ಖಲಿಸ್ತಾನಿಗಳು ಮತ್ತು ನಕ್ಸಲರು' ಎಂದು ಕರೆದಿದ್ದಾರೆ. ಈ ವಿಡಿಯೊವನ್ನು 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ಟ್ವೀಟ್ನಲ್ಲಿ ಹಳೆಯ ವಿಡಿಯೊವನ್ನು ಲಗತ್ತಿಸಲಾಗಿದೆ. ರೈತರು ಪಾಕಿಸ್ತಾನ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಒಕ್ಕಣೆ ಬರೆಯಲಾಗಿದೆ. ಆದರೆ ಇದು 2019ರಲ್ಲಿ ಬ್ರಿಟನ್ನಲ್ಲಿ ಖಲಿಸ್ತಾನ ಪರ ಸಿಖ್ಖರು ನಡೆಸಿದ್ದ ವಿಡಿಯೊ. ಅದನ್ನು ತಪ್ಪಾಗಿ ಇಲ್ಲಿ ಬಳಸಲಾಗಿದೆ ಎಂದು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.