ಬುಧವಾರ, ಅಕ್ಟೋಬರ್ 5, 2022
27 °C

ಫ್ಯಾಕ್ಟ್‌ಚೆಕ್‌: ಉಗ್ರ ತಾರೀಕ್‌ ಜಮೀಲ್‌ ಜೊತೆ ಅಮೀರ್‌ ಖಾನ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಳಿ ದಿರಿಸು ಧರಿಸಿರುವ ಇಬ್ಬರ ಜೊತೆ ಬಾಲಿವುಡ್‌ ನಟ ಅಮೀರ್ ಖಾನ್‌ ಅವರು ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‘ಅಫ್ರಿದಿ ಮತ್ತು ಜಮಾತ್‌–ಎ–ಉಲ್‌ ಸಂಘಟನೆಯ ಉಗ್ರ ತಾರೀಕ್‌ ಜಮೀಲ್‌ ಅವರ ಜೊತೆ ಅಮೀರ್‌ ಖಾನ್‌ ಇದ್ದಾರೆ. ಈ ಚಿತ್ರವನ್ನು ಆದಷ್ಟು ಹೆಚ್ಚು ಹಂಚಿಕೊಳ್ಳಿ. ಅಮೀರ್‌ನ ನಿಜರೂಪ ಎಲ್ಲರಿಗೂ ತಿಳಿಯಲಿ’ ಎಂಬ ವಿವರಣೆಯನ್ನು ಚಿತ್ರದ ಜೊತೆ ನೀಡಲಾಗಿದೆ. ಅಮೀರ್‌ ಖಾನ್ ಅಭಿನಯದ ‘ಲಾಲ್‌ ಸಿಂಗ್‌ ಛಡ್ಡಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಬೆನ್ನಲ್ಲೇ ಈ ಚಿತ್ರ ವೈರಲ್‌ ಆಗಿದೆ.

ಈ ಚಿತ್ರದ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಈ ಚಿತ್ರವು 2012ರ ಹಜ್‌ ಯಾತ್ರೆಯ ವೇಳೆ ಸೌದಿ ಅರೇಬಿಯಾದ ಹೋಟೆಲ್‌ ಒಂದರಲ್ಲಿ ತೆಗೆದಿದ್ದು. ಅಮೀರ್‌ ಖಾನ್‌ ಜೊತೆ ಇರುವವರು ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಮತ್ತು ಪಾಕಿಸ್ತಾನದ ಧರ್ಮಗುರು ಮೌಲಾನಾ ತಾರೀಕ್‌ ಜಮೀಲ್‌. ಅಮೀರ್‌ ಇವರಿಬ್ಬರನ್ನು ಭೇಟಿ ಆದ ಕುರಿತು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆಯು 2012ರ ಡಿಸೆಂಬರ್‌ 23ರಂದು ಸುದ್ದಿ ಪ್ರಕಟಿಸಿತ್ತು. ಈ ಚಿತ್ರವು 2014ರಲ್ಲಿ ಕೂಡಾ ಇದೇ ರೀತಿಯ ವಿವರಣೆಯೊಂದಿಗೆ ವೈರಲ್‌ ಆಗಿತ್ತು ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು