ಸೋಮವಾರ, ಮೇ 23, 2022
20 °C

ಫ್ಯಾಕ್ಟ್‌ಚೆಕ್: ಪಾಕ್ ಪರ ಘೋಷಣೆ ಕೂಗಿದ್ದ ಯುವತಿ ರೈತರ ಪ್ರತಿಭಟನೆಯಲ್ಲೂ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಸಾದುದ್ದೀನ್ ಓವೈಸಿ ಜತೆ ವೇದಿಕೆಯಲ್ಲಿ ಇದ್ದಾಗ, 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದ ಅಮೂಲ್ಯ ಎಂಬ ದೇಶದ್ರೋಹಿ ಯುವತಿ ಈಗ ರೈತರ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದಾಳೆ. ಈ ದೇಶದ್ರೋಹಿ ಯುವತಿ ಮತ್ತು ಪ್ರತಿಭಟನೆನಿರತ ರೈತರ ನಡುವಣ ಸಂಬಂಧವೇನು? ಇವರೆಲ್ಲರ ಹಿಂದೆ ಇರುವವರು ಯಾರು? ಎಲ್ಲಾ ದೇಶವಿರೋಧಿ ಪ್ರತಿಭಟನೆಗಳಲ್ಲಿ ಈ ಮುಖಗಳೇ ಕಾಣಿಸಿಕೊಳ್ಳುತ್ತವೆ ಎಂಬ ಪೋಸ್ಟರ್ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

ಅಮೂಲ್ಯ ಅವರೇ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಚಿತ್ರವೂ ವೈರಲ್ ಆಗಿದೆ.

ಆದರೆ, ಈ ಎರಡೂ ಚಿತ್ರಗಳಲ್ಲಿ ಇರುವವರು ಬೇರೆ-ಬೇರೆ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ವೈರಲ್ ಆಗಿರುವ ಚಿತ್ರದಲ್ಲಿ ಇರುವ ಮತ್ತೊಬ್ಬ ಯುವತಿ ಅಮೂಲ್ಯ ಅಲ್ಲ. ಅವರು, ತಮಿಳುನಾಡಿನ ರೈತ ಹೋರಾಟಗಾರ್ತಿ ವಾಲಮತಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ವಾಲಮತಿ ಅವರು ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲೂ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು