ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ನೇತಾಜಿ ಚಿತ್ರ ಯಾವುದು?

Last Updated 26 ಜನವರಿ 2021, 19:30 IST
ಅಕ್ಷರ ಗಾತ್ರ

ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಅವರ ಭಾವಚಿತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇತ್ತೀಚೆಗೆ ಅನಾವರಣ ಮಾಡಿದ್ದರು. ನೇತಾಜಿ ಅವರ ನಿಜವಾದ ಚಿತ್ರ ಇದು ಅಲ್ಲ ಎಂಬುದಾಗಿ ಸಾಮಾಜಿಕ ತಾಣಗಳಲ್ಲಿ ಗುಲ್ಲೆದ್ದಿದೆ. ಬೋಸ್ ಜೀವನಾಧಾರಿತ ಗುಮ್ನಾನಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಪ್ರಸೇನ್‌ಜಿತ್ ಅವರ ಚಿತ್ರವನ್ನು ನೇತಾಜಿ ಅವರದ್ದು ಎಂದು ತಪ್ಪಾಗಿ ಭಾವಿಸಿ ಬಳಸಲಾಗಿದೆ ಎಂಬುದು ನೆಟ್ಟಿಗರ ವಾದ. ಹಲವರು ಈ ಚಿತ್ರವನ್ನು ರೀ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ಆಲ್ಟ್ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ವೆಬ್‌ಸೈಟ್‌ ಗಳು ಈ ಬಗ್ಗೆ ಪರಿಶೀಲನೆ ನಡೆಸಿದಾಗ, ರಾಷ್ಟ್ರಪತಿ ಭವನದಲ್ಲಿ ಅನಾವರಣ ಮಾಡಲಾದ ಚಿತ್ರ ನೇತಾಜಿ ಅವರದ್ದೇ ಎಂಬುದು ಖಚಿತಪಟ್ಟಿದೆ. ಕಲಾವಿದ ಪರೇಶ್ ಮೈತಿ ಎಂಬುವರು ನೇತಾಜಿ ಚಿತ್ರವನ್ನು ತಮ್ಮ ಕುಂಚದಲ್ಲಿ ಬಿಡಿಸಿ ದ್ದರು. ಚಿತ್ರದ ನಿರ್ದೇಶಕ ಶ್ರೀಜಿತ್ ಅವರು ಮೂಲ ಚಿತ್ರವನ್ನು ಟ್ವೀಟ್ ಮಾಡಿದ್ದು, ಸ್ಪಷ್ಟನೆ ನೀಡಿದ್ದಾರೆ. ಬೋಸ್ ಸಂಬಂಧಿ ಚಂದ್ರ ಕುಮಾರ್ ಬೋಸ್ ಅವರು ಟ್ವೀಟ್ ಮಾಡಿರುವ ಚಿತ್ರದ ಜೊತೆ ಹೋಲಿಸಿ ದಾಗಲೂ ಹೊಂದಾಣಿಕೆ ಕಂಡುಬಂದಿದೆ. ಟ್ವಿಟರಿಗರೇ ತಪ್ಪಾಗಿ ಭಾವಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಅನಾವರಣ ಮಾಡಿದ ಚಿತ್ರ ನೇತಾಜಿ ಅವರದ್ದು ಎಂಬುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT