ಕೊಕೇನ್ ಮಾದಕವಸ್ತು ಪ್ರಕರಣದಲ್ಲಿ ಜೈಲಿಗೆ ಹೋಗಿರುವ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷೆ ಪಮೇಲಾ ಗೋಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸೈಕಲ್ ಸವಾರಿ ನಡೆಸಿರುವ ಚಿತ್ರ ಇದೀಗ ಎಲ್ಲೆಡೆ ವೈರಲ್ ಆಗಿದೆ. ಫೇಸ್‌ಬುಕ್‌ನಲ್ಲಿ ಸಾವಿರಾರು ಜನರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಕೊಕೇನ್ ಪ್ರಿಯ ವ್ಯಕ್ತಿಯ ಜೊತೆ ಫೊಟೊ ಪ್ರಿಯ ವ್ಯಕ್ತಿ’ ಎಂಬ ಅರ್ಥದ ಕಮೆಂಟ್‌ಗಳು ಹರಿದಾಡುತ್ತಿವೆ.

ಲಾಜಿಕಲ್ ಇಂಡಿಯನ್ಸ್ ಫ್ಯಾಕ್ಟ್ ಚೆಕ್ ವಿಭಾಗ ಪರಿಶೀಲಿಸಿದಾಗ, ಇದೊಂದು ತಿರುಚಿದ ಚಿತ್ರ ಎಂಬುದು ಕಂಡುಬಂದಿದೆ. 2017ರ ಜೂನ್‌ನಲ್ಲಿ ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೈಕಲ್ ಉಡುಗೊರೆ ನೀಡಿದ್ದರು. ಸೈಕಲ್ ಮೇಲೆ ಪ್ರಧಾನಿ ಕುಳಿತಿರುವ ಚಿತ್ರ ಆಗ ಪ್ರಕಟವಾಗಿತ್ತು. ಇದರಲ್ಲಿ ಮೋದಿ ಸೈಕಲ್ ಏರಿರುವ ಭಾಗವನ್ನಷ್ಟೇ ಕಟ್ ಮಾಡಿಕೊಂಡು, ಪಮೇಲಾ ಅವರು ಸೈಕಲ್‌ನಲ್ಲಿ ಹೋಗುತ್ತಿರುವ ಚಿತ್ರದ ಜೊತೆ ಅಂಟಿಸಲಾಗಿದೆ. ಪಮೇಲಾ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಮೂಲ ಚಿತ್ರದಲ್ಲಿ ಪ್ರಧಾನಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.