ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಸಂಘರ್ಷಕ್ಕೂ ಜಪಾನ್‌ನ ಕ್ಷಿಪಣಿ ನಿಯೋಜನೆಗೂ ಯಾವುದೇ ನಂಟಿಲ್ಲ

Last Updated 1 ಜುಲೈ 2020, 21:09 IST
ಅಕ್ಷರ ಗಾತ್ರ

‘ಭಾರತದೊಂದಿಗೆ ಚೀನಾ ಸಂಘರ್ಷ ತಾರಕಕ್ಕೇರಿರುವ ಸಮಯದಲ್ಲಿ ಚೀನಾ ಗಡಿಯಲ್ಲಿ ಜಪಾನ್ ಖಂಡಾಂತರ ಕ್ಷಿಪಣಿಗಳನ್ನು ನಿಯೋಜಿಸಿದೆ’ ಎಂದು ಜೂನ್ 20ರಂದು ಥಾಯ್ಲೆಂಡ್ ಮೂಲದ ‘ಏಷ್ಯಾ ನ್ಯೂಸ್’ ಪ್ರಕಟಿಸಿತ್ತು.ಪೇಟ್ರಿಯಾಟ್ ಪ್ಯಾಕ್ -3 ಎಂಎಸ್ಇ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ತನ್ನ 4 ವಾಯುನೆಲೆಗಳಲ್ಲಿ ನಿಯೋಜನೆ ಮಾಡಲು ಜಪಾನ್ ನಿರ್ಧರಿಸಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಇದು ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಶೇರ್ ಆಗಿತ್ತು. ರಿಪಬ್ಲಿಕ್ ಟಿ.ವಿ ಕೂಡ ಟ್ವೀಟ್ ಮಾಡಿತ್ತು. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವಿಟರ್‌ನಲ್ಲಿ ಇದನ್ನು ಹಂಚಿಕೊಂಡಿದ್ದರು.

ಆದರೆ ಏಷ್ಯಾ ನ್ಯೂಸ್‌ ವರದಿ ದಾರಿ ತಪ್ಪಿಸುವಂತಹದ್ದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.ಪೇಟ್ರಿಯಾಟ್ ಪ್ಯಾಕ್ -3ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಜಪಾನ್ ಇತ್ತೀಚೆಗೆ ಇಚಿಗಯ ಸೇನಾ ನೆಲೆಯಲ್ಲಿ ನಿಯೋಜನೆ ಮಾಡಿದೆ. ಉತ್ತರ ಕೊರಿಯಾವು ಸೇನಾ ಜಮಾವಣೆ ಮಾಡುವುದಾಗಿ ಪ್ರಕಟಿಸಿದ್ದಕ್ಕೆ ಪ್ರತಿಯಾಗಿ ಜಪಾನ್ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿದೆ ಎಂದು ಸ್ಪಷ್ಟನೆ ನೀಡಿದೆ. ಭಾರತ–ಚೀನಾ ಸಂಘರ್ಷಕ್ಕೂ ಜಪಾನ್‌ನ ಕ್ಷಿಪಣಿ ನಿಯೋಜನೆಗೂ ಯಾವುದೇ ನಂಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT