ಶುಕ್ರವಾರ, ಜುಲೈ 30, 2021
28 °C

ಫ್ಯಾಕ್ಟ್‌ಚೆಕ್‌ | ಲಾಕ್‌ಡೌನ್ ಪರಿಹಾರ ನಿಧಿ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೊರೊನಾ ವೈರಸ್ ಪ್ರಸರಣ ತಡೆಗೆ ದೇಶದಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ ಎಷ್ಟೊ ಜನರ ಅನ್ನಕ್ಕೂ ತತ್ವಾರ ಉಂಟು ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೂ ತಲಾ ‘₹2000 ಲಾಕ್‌ಡೌನ್ ಪರಿಹಾರ ನಿಧಿ’ ನೀಡಲಿದೆ. ಇದನ್ನು ಒಬ್ಬರು ಒಮ್ಮೆ ಮಾತ್ರ ಪಡೆಯಲು ಅರ್ಹರು. ಕೆಳಗಿರುವ ಲಿಂಕ್ ಕ್ಲಿಕ್‌ ಮಾಡಿ, ಪರಿಹಾರ ಧನವನ್ನು ಈಗಲೇ ನಿಮ್ಮದಾಗಿಸಿಕೊಳ್ಳಿ’ ಎಂದು ಸೂಚಿಸುವ ವಾಟ್ಸ್‌ಆ್ಯಪ್‌ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಆಗುತ್ತಿದೆ.

ಇಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿಲ್ಲ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ವಿಭಾಗ ಸ್ಪಷ್ಟನೆ ನೀಡಿದೆ. ಜನರ ನಿರೀಕ್ಷೆಯನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಮೋಸದ ಜಾಲಕ್ಕೆ ಕೆಡವಲು ಈ ರೀತಿಯ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ತಕ್ಷಣವೇ ಹಣ ಪಡೆಯುವಂತೆ ಪ್ರೇರೇಪಿಸಲಾಗುತ್ತದೆ. ಈ ರೀತಿಯ ಆನ್‌ಲೈನ್ ವಂಚಕರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು