ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ರಿಷಿ ಕಪೂರ್‌ನ ಕೊನೆಯ ವಿಡಿಯೊ ಎಂದು ವೈರಲ್ ಆಗಿದ್ದು ಹಳೇ ವಿಡಿಯೊ 

Last Updated 30 ಏಪ್ರಿಲ್ 2020, 16:07 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ಬಾಲಿವುಡ್ ನಟ ರಿಷಿ ಕಪೂರ್ ಗುರುವಾರ ನಿಧನರಾಗಿದ್ದಾರೆ. ನಿಧನ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ರಿಷಿ ಕಪೂರ್ ಅವರ ಕೊನೆಯ ವಿಡಿಯೊ ಎಂಬ ಶೀರ್ಷಿಕೆಯಲ್ಲಿ ವಿಡಿಯೊವೊಂದು ವೈರಲ್ ಆಗಿದೆ.

ಆಸ್ಪತ್ರೆಯಹಾಸಿಗೆಯಲ್ಲಿ ಮಲಗಿರುವ ರಿಷಿ ಕಪೂರ್, ಅವರ ಪಕ್ಕದಲ್ಲಿ ನಿಂತು ಯುವಕನೊಬ್ಬ ಬಾಲಿವುಡ್ ಹಾಡು ಹಾಡಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಬುಧವಾರ ರಾತ್ರಿಅಂದರೆ 2020 ಏಪ್ರಿಲ್ 29ರದ್ದು ಎಂದು ಹೇಳಲಾಗಿದೆ. ಆದರೆ ಈ ವೈರಲ್ ವಿಡಿಯೊ 2020 ಫೆಬ್ರುವರಿ ತಿಂಗಳಿನದ್ದು, ಸೋಂಕು ತಗುಲಿ ರಿಷಿ ಕಪೂರ್ ಆಸ್ಪತ್ರೆಗೆ ದಾಖಲಾದಾಗ ತೆಗೆದ ವಿಡಿಯೊ ಇದಾಗಿದೆ.

ಇದು ನಿನ್ನೆ ರಾತ್ರಿಯ ವಿಡಿಯೊ, ಮುಂಬೈಯ ರಿಲಾಯನ್ಸ್ ಫೌಂಡೇಷನ್ ಹಾಸ್ಪಿಟಲ್‌ನಲ್ಲಿರುವುದು. ರಿಷಿಜೀ ನೀವು ಲೆಜೆಂಡ್ , ನೀವು ಸದಾ ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇರುತ್ತೀರಿ ಎಂದು ನಟಿ ನಗ್ಮಾ ಕೂಡಾ ಈ ವಿಡಿಯೊ ಟ್ವೀಟಿಸಿದ್ದರು. ಈಗ ಆ ಟ್ವೀಟ್ ಡಿಲೀಟ್ ಆಗಿದೆ.

ಫೇಸ್‌ಬುಕ್‌ನಲ್ಲಿಯೂ ಇದೇ ಶೀರ್ಷಿಕೆಯೊಂದಿಗೆ ಹಲವಾರು ಬಳಕೆದಾರರು ಈ ವಿಡಿಯೊ ಶೇರ್ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್
ಈ ಬಗ್ಗೆ ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ನಡೆಸಿದ್ದು ವೈರಲ್ ವಿಡಿಯೊ ನಿನ್ನೆ ರಾತ್ರಿಯದ್ದಲ್ಲ ಎಂದು ವರದಿ ಮಾಡಿದೆ. ಈ ವಿಡಿಯೊವನ್ನು ಧೀರಜ್ ಕುಮಾರ್ ಸಾನು ಎಂಬವರು 2020 ಫೆಬ್ರುವರಿ 3ರಂದು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಧೀರಜ್ ಕುಮಾರ್ ಅವರ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಫೆಬ್ರುವರಿ 6ರಂದು ರಿಷಿ ಕಪೂರ್ ಜತೆಗಿರುವ ಸೆಲ್ಫಿ ಅಪ್‍ಲೋಡ್ ಆಗಿದೆ.ಈ ಸೆಲ್ಫಿ ಅದೇಆಸ್ಪತ್ರೆಯಲ್ಲಿ ಕ್ಲಿಕ್ಕಿಸಿದ್ದಾಗಿದೆ.

Rushi kapoor with Dheeraj Kumar Sanu

A post shared by Dheeraj kumar sanu (@dheeraj_kumar_sanu) on

ಫೆಬ್ರುವರಿ ಮೊದಲ ವಾರದಲ್ಲಿ ಇನ್‌ಫೆಕ್ಷನ್‌ನಿಂದಾಗಿ ರಿಷಿ ಕಪೂರ್ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು.ಈ ಬಗ್ಗೆ ಫೆಬ್ರುವರಿ 4ರಂದು ಟ್ವೀಟ್ ಮಾಡಿದ್ದ ರಿಷಿ, ಮಾಲಿನ್ಯ ಮತ್ತು ನ್ಯೂಟ್ರೊಫಿಲ್ಸ್ ಪ್ರಮಾಣ ಕಡಿಮೆ ಆಗಿದ್ದ ಕಾರಣ ಇನ್‌ಫೆಕ್ಷನ್ ಆಗಿದೆ ಎಂದಿದ್ದರು.

ಆಗ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದ ಧೀರಜ್ ಕುಮಾರ್ ಸಾನು ಹಾಡೊಂದನ್ನು ಹಾಡಿ ಈ ವಿಡಿಯೊ ರೆಕಾರ್ಡ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT