ಶನಿವಾರ, ಸೆಪ್ಟೆಂಬರ್ 18, 2021
30 °C

Fact Check: ಒಲಿಂಪಿಕ್ಸ್‌ನಲ್ಲಿ ಪ್ರಧಾನಿ ಮೋದಿಗೆ ಪದಕ? ಏನಿದರ ಮರ್ಮ?

ಫ್ಯಾಕ್ಟ್ ಚೆಕ್‌ Updated:

ಅಕ್ಷರ ಗಾತ್ರ : | |

‘ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ’. ಈ ಮಾಹಿತಿ ಇರುವ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದಿ ಸುದ್ದಿವಾಹಿನಿ ಆಜ್‌ತಕ್‌ನ ಖಬರ್‌ದಾರ್ ಕಾರ್ಯಕ್ರಮ ನಡೆಸಿಕೊಡುವ ನಿರೂಪಕಿ ಶ್ವೇತಾ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇರುವ ಪೋಸ್ಟರ್‌ನಲ್ಲಿ ಮೋದಿ ಪದಕ ಗೆದ್ದಿರುವ ಉಲ್ಲೇಖವಿದೆ. ಮೊದಲ ಪದಕ ಗೆದ್ದ ಮೀರಾಬಾಯಿ ಚಾನು ಅವರ ಬದಲಾಗಿ ಮೋದಿ ಅವರಿಗೆ ಪದಕ ಬಂದಿದೆ ಎಂದು ಬಿತ್ತರಿಸಿರುವ ಚಾನೆಲ್‌ ವಿರುದ್ಧ ಸಾಮಾಜಿಕ ಜಾಲತಾಣ ಬಳಕೆದಾರರು ಕಿಡಿಕಾರಿದ್ದಾರೆ.

ಆಜ್‌ತಕ್‌ ವಾಹಿನಿಯದ್ದು ಎಂದು ಹೇಳಲಾದ ಪೋಸ್ಟರ್‌ಗಾಗಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ತಂಡವು ಹುಡುಕಾಡಿದಾಗ ಅಂತಹ ಯಾವುದೇ ಪೋಸ್ಟರ್ ಕಂಡುಬಂದಿಲ್ಲ. 2019ರಲ್ಲಿ ಶ್ವೇತಾ ಸಿಂಗ್ ಹಾಗೂ ಮೋದಿ ಅವರ ಚಿತ್ರ ಬಳಸಿ ಪ್ರಕಟಿಸಿದ್ದ ಪೋಸ್ಟರ್‌ ದೊರಕಿದ್ದು, ಅದರಲ್ಲಿ ಇರುವ ಮಾಹಿತಿಯನ್ನು ತಿರುಚಿ, ಪ್ರಧಾನಿ ಪದಕ ಗೆದ್ದಿದ್ದಾರೆ ಎಂಬರ್ಥ ನೀಡುವಂತೆ ಕಿಡಿಗೇಡಿಗಳು ಬದಲಿಸಿದ್ದಾರೆ. ‘ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೋದಿ ಗೆಲ್ಲುತ್ತಾರಾ?’ ಎಂಬುದಾಗಿ ಮೂಲ ಪೋಸ್ಟರ್‌ನಲ್ಲಿ ಉಲ್ಲೇಖವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು