ಗುರುವಾರ , ಜೂನ್ 4, 2020
27 °C

ಫ್ಯಾಕ್ಟ್‌ ಚೆಕ್‌ | ಇಶಾ ಫೌಂಡೇಶನ್‌ನಲ್ಲಿ ಒಂದು ಕೊರೊನಾ ಪ್ರಕರಣವೂ ಕಂಡುಬಂದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ ವತಿಯಿಂದ ಮಾರ್ಚ್‌ ತಿಂಗಳಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ 150ಕ್ಕೂ ಹೆಚ್ಚು ಮಂದಿ ವಿದೇಶಿಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವು ತಮಿಳುನಾಡಿನಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಲು ಕಾರಣವಾಗಿದೆ. ಈಗ ಅವರೆಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ದೆಹಲಿಯ ತಬ್ಲೀಗ್‌ ಜಮಾತ್‌ ಕಾರ್ಯಕ್ರಮದ ಬಗ್ಗೆ ಸುದ್ದಿ ಮಾಡಿದವರು ಈ ವಿಚಾರದಲ್ಲಿ ಸುಮ್ಮನಿದ್ದಾರೆ’ ಎಂಬ ಸುದ್ದಿಯೊಂದು ಫೇಸ್‌ಬುಕ್‌ನಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ.

ಫೆಬ್ರುವರಿ 21ರಂದು ಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಿದ್ದನ್ನು ಬಿಟ್ಟರೆ, ಈಶ ಫೌಂಡೇಶನ್‌ ವತಿಯಿಂದ ಇತ್ತೀಚೆಗೆ ಯಾವುದೇ ಕಾರ್ಯಕ್ರಮ ಆಯೋಜಿಸಲಾಗಿಲ್ಲ. ಸುದ್ದಿಯ ಜತೆಗೆ ಹರಿದಾಡುತ್ತಿರುವ ಚಿತ್ರ ಹಳೆಯ ಕಾರ್ಯಕ್ರಮದ್ದು. ಈಶ ಫೌಂಡೇಶನ್‌ನಲ್ಲಿ ಕೊರೊನಾ ಸೋಂಕಿನ ಒಂದು ಪ್ರಕರಣವೂ ಕಂಡುಬಂದಿಲ್ಲ. ಇದನ್ನು ಜಿಲ್ಲಾಧಿಕಾರಿಯೂ ದೃಢಪಡಿಸಿದ್ದಾರೆ ಎಂದು ಈಶ ಫೌಂಡೇಶನ್‌ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು