ಶನಿವಾರ, ಜುಲೈ 24, 2021
27 °C

ಎಲ್ಲ ಶಾಲೆಗಳು ಆ್ಯಪ್ ಖರೀದಿಸಿ, ಆನ್‌ಲೈನ್ ಪರೀಕ್ಷೆ ನಡೆಸಲಿವೆ!: ಎಂಬುದು ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಆನ್‌ಲೈನ್ ಪರೀಕ್ಷೆಯೊಂದೇ ಪರಿಹಾರ. ಈ ನಿಟ್ಟಿನಲ್ಲಿ ವಿಎಚ್ ಸಾಫ್ಟ್‌ವೇರ್ ಕಂಪನಿಯು ಅಭಿವೃದ್ಧಿಪಡಿಸಿರುವ ಆ್ಯಪ್ ಪರೀಕ್ಷೆಗೊಳಪಟ್ಟಿದೆ. ಈ ಆ್ಯಪ್ ಅನ್ನು ಎಲ್ಲ ಶಾಲೆಗಳು ಖರೀದಿಸಿ, ಮುಂಬರುವ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಬಹುದು ಎಂದು ಸಿಬಿಎಸ್‌ಇ ಸೂಚಿಸಿದೆ. ಈ ಯೋಜನೆಯ ಒಎಸ್‌ಡಿ ಆಗಿ ಡಾ. ಸಹೀಲ್ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ ಎಂಬ ಸಂದೇಶ ಚರ್ಚೆಯಾಗುತ್ತಿದೆ.

ಆನ್‌ಲೈನ್ ಪರೀಕ್ಷೆ ಹಾಗೂ ಆ್ಯಪ್ ಖರೀದಿ ಸಂದೇಶವು ದಾರಿ ತಪ್ಪಿಸುವಂತದ್ದು ಎಂದು ಸಿಬಿಎಸ್‌ಇ ಸ್ಪಷ್ಟನೆ ನೀಡಿದೆ. ಆ್ಯಪ್ ಖರೀದಿಸುವಂತೆ ಯಾವ ಕಂಪನಿಯನ್ನೂ ಸಿಬಿಎಸ್‌ಇ ಶಿಫಾರಸು ಮಾಡಿಲ್ಲ. ಈ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲ. ಸಂಯೋಜಕರಾಗಿ ಯಾವ ಅಧಿಕಾರಿಯನ್ನೂ ನೇಮಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು