ಶನಿವಾರ, ಜೂನ್ 25, 2022
24 °C

Fact Check: ಉಚಿತ ಕೋವಿಡ್ ಲಸಿಕೆ ಖಾಸಗಿ ಆಸ್ಪತ್ರೆಗಳಿಗೆ ಮಾರಿತೇ ಪಂಜಾಬ್ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಯಾಕ್ಟ್‌ಚೆಕ್‌

ಪಂಜಾಬ್‌ನ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರದಿಂದ ಉಚಿತವಾಗಿ ಪಡೆದ ಕೋವಿಡ್‌ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ, ಈಗ ಖಾಸಗಿ ಆಸ್ಪತ್ರೆಗಳಿಂದ ಕೋವಿಡ್‌ ಲಸಿಕೆಗಳನ್ನು ವಾಪಸ್ ಪಡೆದಿದೆ. ಅಲ್ಲದೆ, 18-44 ವರ್ಷದವರಿಗೆ ಕೋವಿಡ್‌ ಲಸಿಕೆ ಹಾಕುವುದಕ್ಕೆ ಖಾಸಗಿ ಆಸ್ಪತ್ರೆಗಳಿಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದೆ. ಕಾಂಗ್ರೆಸ್‌ ತನ್ನ ಮುಖ ಉಳಿಸಿಕೊಳ್ಳಲು ಇಷ್ಟೆಲ್ಲಾ ಕ್ರಮ ತೆಗೆದುಕೊಂಡಿದೆ‘ ಎಂದು ಪೋಸ್ಟ್‌ಕಾರ್ಡ್ ಕನ್ನಡ ತನ್ನ ಫೇಸ್‌ಬುಕ್‌ ಪುಟದಲ್ಲಿ ಪೋಸ್ಟರ್ ಪ್ರಕಟಿಸಿದೆ.

ಈ ಪೋಸ್ಟರ್‌ನಲ್ಲಿ ಇರುವ ಎಲ್ಲಾ ಮಾಹಿತಿಗಳೂ ಸತ್ಯವಲ್ಲ. ಪೋಸ್ಟ್‌ಕಾರ್ಡ್‌ನ ಪೋಸ್ಟರ್‌ನಲ್ಲಿ ಇರುವಂತೆ ಕೇಂದ್ರ ಸರ್ಕಾರವು ಉಚಿತವಾಗಿ ನೀಡಿದ ಲಸಿಕೆಯನ್ನು ಪಂಜಾಬ್ ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿಲ್ಲ. ಬದಲಿಗೆ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಿದ್ದ ಲಸಿಕೆಯ ಕೋಟಾದಡಿ, ಒಂದು ಡೋಸ್‌ಗೆ ₹ 412 ದರದಲ್ಲಿ ಖರೀದಿಸಿದ್ದ ಲಸಿಕೆಗಳನ್ನು ಪ್ರತಿ ಡೋಸ್‌ಗೆ
₹ 1,060ರಂತೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ, ಮಾರಾಟ ಮಾಡಿದ್ದ ಎಲ್ಲಾ ಡೋಸ್‌ಗಳನ್ನು ವಾಪಸ್ ಪಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು