ಸುಡುವ ಬಿಸಿಲಿಗೆ ದೇಹವನ್ನು ತಂಪಾಗಿಡುವ ಕೆಲವು ಆಹಾರಗಳ ರೆಸಿಪಿಗಳನ್ನು
ವೇದಾವತಿ ಎಚ್. ಎಸ್. ನೀಡಿದ್ದಾರೆ

ಕ್ಯಾಪ್ಸಿಕಂ ತಂಬುಳಿ

ಬೇಕಾಗುವ ಸಾಮಗ್ರಿಗಳು: ಕ್ಯಾಪ್ಸಿಕಂ 1, ಈರುಳ್ಳಿ 1, ಜೀರಿಗೆ 1 ಟೀ ಚಮಚ, ಕಾಳುಮೆಣಸು 10, ತೆಂಗಿನಕಾಯಿ ತುರಿ 1/2 ಕಪ್, ಎಣ್ಣೆ ಅಥವಾ ತುಪ್ಪ ಹುರಿಯಲು 1 ಟೀ ಚಮಚ,
ಮೊಸರು 1/2 ಲೀಟರ್, ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ: ತುಪ್ಪ 1 ಟೀ ಚಮಚ, ಸಾಸಿವೆ 1 ಟೀ ಚಮಚ, ಒಣಮೆಣಸಿನ ಕಾಯಿ 1.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಂದು ಟೀ ಚಮಚ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಅದರಲ್ಲಿ ಜೀರಿಗೆ ಮತ್ತು ಕಾಳು ಮೆಣಸು ಹಾಕಿ ಪರಿಮಳ ಬರುವರೆಗೆ ಹುರಿಯಿರಿ. ನಂತರ ಬೀಜ ತೆಗೆದ ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಹುರಿದ ಪದಾರ್ಥಗಳು, ತೆಂಗಿನಕಾಯಿ ತುರಿ, ಉಪ್ಪು ಮತ್ತು ಮೊಸರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿ ಕೊಂಡ ಪದಾರ್ಥಕ್ಕೆ ತುಪ್ಪವನ್ನು ಹಾಕಿ ಒಗ್ಗರಣೆ ಕೊಡಿ.

ರಾಗಿ ಪಾನಕ/ ರಾಗಿ ಹಾಲು

ಬೇಕಾಗುವ ಸಾಮಗ್ರಿಗಳು: 1/2 ಕಪ್ ರಾಗಿ, 8 ಬಾದಾಮಿ, 1/2 ಕಪ್ ತೆಂಗಿನ ತುರಿ, 1/2 ಕಪ್ ಬೆಲ್ಲ (ಸಿಹಿಗೆ ಅನುಗುಣವಾಗಿ ಹಾಕಿ), ಬೀಜ ತೆಗೆದ ಖರ್ಜೂರ 4, ಏಲಕ್ಕಿ 2, ನೀರು 2 ಕಪ್.

ತಯಾರಿಸುವ ವಿಧಾನ: ರಾಗಿಯನ್ನು ಚೆನ್ನಾಗಿ ತೊಳೆದು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಾದಾಮಿಯನ್ನು ಬಿಸಿ ನೀರಿನಲ್ಲಿ ಒಂದು ಗಂಟೆ ನೆನೆ ಹಾಕಿ. ರಾಗಿ ಮತ್ತು ಬಾದಾಮಿಯಲ್ಲಿರುವ ನೀರನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ತೆಂಗಿನ ತುರಿ, ಬೆಲ್ಲ, ಖರ್ಜೂರ, ಏಲಕ್ಕಿ ಮತ್ತು ಒಂದು ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಸೋಸಿಕೊಳ್ಳಿ. ಸೋಸಿದ ಬಳಿಕ ಪುನಃ ಮಿಕ್ಸಿ ಜಾರಿಗೆ ಚರಟನ್ನು ಹಾಕಿ ಜೊತೆಗೆ ಒಂದು ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಸೋಸಿಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಈ ಪಾನಕ ದೇಹಕ್ಕೆ ತಂಪು ಮತ್ತು ಆರೋಗ್ಯಕ್ಕೆ ಒಳ್ಳೆಯದು.

ಬಾರ್ಲಿ ಸೂಪ್

ಬೇಕಾಗುವ ಸಾಮಗ್ರಿಗಳು: ಒಂದಿಂಚು ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ, ಬೆಳ್ಳುಳ್ಳಿ 10 ಎಸಳುಗಳನ್ನು ಚಿಕ್ಕದಾಗಿ ಕತ್ತರಿಸಿ, ಈರುಳ್ಳಿ 1/2 ಚಿಕ್ಕದಾಗಿ ಕತ್ತರಿಸಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೋಸು ಎಲ್ಲಾ ಸೇರಿ ಒಂದು ಕಪ್ ಚಿಕ್ಕದಾಗಿ ಕತ್ತರಿಸಿಕೊಳ್ಳಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ / ಬೆಣ್ಣೆ ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಪಾವ್ ಬಾಜಿ ಮಸಾಲೆ ಒಂದು ಚಮಚ, ಕಾಳುಮೆಣಸಿನ ಪುಡಿ ಅರ್ಧ ಚಮಚ, ಬಾರ್ಲಿ ನೂರು ಗ್ರಾಂ, ನೀರು ಒಂದು ಲೀಟರ್.

ತಯಾರಿಸುವ ವಿಧಾನ: ಬಾರ್ಲಿಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಪಾತ್ರೆಯಲ್ಲಿ ಹಾಕಿ, ನೀರನ್ನು ಸೇರಿಸಿ 8-10 ವಿಷಲ್ ಕೂಗಿಸಿ ಒಲೆಯಿಂದ ಇಳಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿ ಹುರಿಯಿರಿ. ನಂತರ ಕತ್ತರಿಸಿಕೊಂಡ ತರಕಾರಿಗಳನ್ನು ಸೇರಿಸಿ ಮೃದುವಾಗುವರೆಗೆ ಹುರಿಯಿರಿ. ಬೇಯಿಸಿದ ಬಾರ್ಲಿ ಮತ್ತು ಅದರ ನೀರನ್ನು ಹಾಕಿ. ಉಪ್ಪು ಸೇರಿಸಿ ಕುದಿಸಿ. ಬಳಿಕ ಪಾವ್ ಬಾಜಿ ಮಸಾಲೆ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸರ್ವ್ ಮಾಡಿ.

ಸಾಬುದಾನಿ ಮ್ಯಾಂಗೋ ಫ್ರೂಟ್ಸ್ ಕಸ್ಟರ್ಡ್

ಬೇಕಾಗುವ ಸಾಮಗ್ರಿ: ಸಾಬುದಾನಿ 1 ಕಪ್, ನೀರು ಒಂದೂವರೆ ಕಪ್, ಹಾಲು 1/2 ಲೀಟರ್, ವೆನಿಲ್ಲಾ ಕಸ್ಟರ್ಡ್ ಪೌಡರ್ 2 ಟೇಬಲ್ ಚಮಚ, ಸಕ್ಕರೆ ಒಂದೂವರೆ ಕಪ್.
ಹಣ್ಣುಗಳು: ಸಿಹಿ ಮಾವಿನ ಹಣ್ಣು 1 ಕಪ್, ದ್ರಾಕ್ಷಿ 1/2 ಕಪ್, ಸೇಬು 1/2 ಕಪ್, ಸಪೋಟ 1/2 ಕಪ್, ದಾಳಿಂಬೆ 1/2 ಕಪ್, ಬಾಳೆಹಣ್ಣು 1/2 ಕಪ್ ಎಲ್ಲಾ ಹಣ್ಣುಗಳನ್ನು ಒಂದೇ ರೀತಿಯಲ್ಲಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇಲ್ಲಿ ನಿಮಗೆ ಇಷ್ಟವಾದ ಹಣ್ಣುಗಳನ್ನು ಹಾಕಬಹುದು.

ತಯಾರಿಸುವ ವಿಧಾನ: ಸಾಬುದಾನಿಯನ್ನು 3 ರಿಂದ4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬಾಣಲೆಯಲ್ಲಿ ನೀರನ್ನು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಕುದಿಸಿ. ವೆನಿಲ್ಲಾ ಕಸ್ಟರ್ಡ್ ಪೌಡರ್‌ಗೆ ಸ್ವಲ್ಪ ತಣ್ಣನೆಯ ಹಾಲನ್ನು ಹಾಕಿ ಮಿಶ್ರಣ ಮಾಡಿ. ಕುದಿಯುತ್ತಿರುವ ಮಿಶ್ರಣಕ್ಕೆ ಕರಗಿಸಿಕೊಂಡ ಕಸ್ಟರ್ಡ್ ಪೌಡರ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣವೂ ಗಟ್ಟಿಯಾಗುತ್ತಾ ಬಂದಾಗ ಒಲೆಯನ್ನು ಅರಿಸಿ. ಪೂರ್ತಿ ಆರಲು ಬಿಡಿ. ಆರಿದ ನಂತರ ತಳಿಸಿರುವ ಹಣ್ಣುಗಳನ್ನು ಹಾಕಿ ಮಿಶ್ರಣ ಮಾಡಿ. ಬಳಿಕ 1 ರಿಂದ 2 ಗಂಟೆಯ ಕಾಲ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಮಾಡಿ ಸವಿಯಲು ಕೊಡಿ. ರುಚಿಕರವಾದ ಮತ್ತು ಆರೋಗ್ಯಕರವಾದ ಸಾಬುದಾನಿ-ಮ್ಯಾಂಗೋ ಫ್ರೂಟ್ಸ್ ಕಸ್ಟರ್ಡ್ ತಯಾರಿಸಿ ಸವಿಯಿರಿ.

ಸೌತೆಕಾಯಿ ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು: ಹಸಿರು ಸೌತೆಕಾಯಿ (ಇಂಗ್ಲಿಷ್ ಸೌತೆಕಾಯಿ)-1, ಸಕ್ಕರೆ-2 ಟೇಬಲ್ ಚಮಚ, ಏಲಕ್ಕಿಪುಡಿ 1/4 ಟೀ ಚಮಚ, ತಣ್ಣಗಿನ ಹಾಲು 200 ಎಂ ಎಲ್, ಐಸ್ ಕ್ಯೂಬ್ ಸ್ವಲ್ಪ, ಅಲಂಕರಿಸಲು ಗೋಡಂಬಿ, ಪಿಸ್ತಾ ಚೂರುಗಳು ಸ್ವಲ್ಪ.
ತಯಾರಿಸುವ ವಿಧಾನ: ಸೌತೆಕಾಯಿ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಮಿಕ್ಸಿ ಜಾರಿಗೆ ಸೌತೆಕಾಯಿ, ಸಕ್ಕರೆ, ಏಲಕ್ಕಿಪುಡಿ, ಹಾಲು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸರ್ವಿಂಗ್ ಗ್ಲಾಸಿಗೆ ಐಸ್ ಕ್ಯೂಬ್ ಹಾಕಿ ತಯಾರಿಸಿಕೊಂಡ ಮಿಲ್ಕ್ ಶೇಕ್ ಸೇರಿಸಿ. ಬಳಿಕ ಗೋಡಂಬಿ ಮತ್ತು ಪಿಸ್ತಾ ಚೂರುಗಳಿಂದ ಅಲಂಕರಿಸಿ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.