ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿಗೆ ಬಿಸಿ ಬಿಸಿ ಚಿಕನ್ ಗಿಝರ್ಡ್ ಫ್ರೈ

Published 5 ಜನವರಿ 2024, 23:04 IST
Last Updated 5 ಜನವರಿ 2024, 23:04 IST
ಅಕ್ಷರ ಗಾತ್ರ

ಬೋಟಿ ಕೂರ್ಮ

ಬೇಕಾಗುವ ಸಾಮಗ್ರಿಗಳು: ಬೋಟಿ 1/2 ಕೆ.ಜಿ, ಹಸಿ ಅವರೇಕಾಳು 1 ಕಪ್, ಆಲೂಗಡ್ಡೆ 2, ಬಾಳೆಕಾಯಿ 1, ಶುಂಠಿ 2 ಇಂಚು ಉದ್ದದ್ದು, ಬೆಳ್ಳುಳ್ಳಿ 2 ಉಂಡೆ, ಕೊತ್ತಂಬರಿ ಸ್ವಲ್ಪ, ಪುದೀನ ಸ್ವಲ್ಪ, ಈರುಳ್ಳಿ 2, ಟೊಮೆಟೊ 2, ಪೆಪ್ಪರ್‌ಪುಡಿ (ಕಾಳುಮೆಣಸಿನ ಪುಡಿ) ಸ್ವಲ್ಪ, ಗರಂ ಮಸಾಲೆ 1 ಚಮಚ, ಧನಿಯಾ ಪುಡಿ 1 ಚಮಚ, ಖಾರದ ಪುಡಿ 1 ಚಮಚ, ಅರಿಶಿನ ಪುಡಿ ಸ್ವಲ್ಪ, ಕಾಯಿ 1/4 ಹೋಳು, ಎಣ್ಣೆ, ಸಾಸಿವೆ, ಉಪ್ಪು .

ತಯಾರಿಸುವ ವಿಧಾನ:

ಬೋಟಿ ಅಂದರೆ ಜಠರ, ದೊಡ್ಡ ಕರುಳು, ಸಣ್ಣ ಕರುಳುಗಳ ಒಳ ಭಾಗ ಹೊರಬರುವಂತೆ ಮಾಡಿ ಸುಣ್ಣ ಹಾಕಿ ಚೆನ್ನಾಗಿ ತೊಳೆದು ತೆರೆದ ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ, ನೊರೆಯ ರೀತಿ ತೇಲುವುದನ್ನು ಚೆಲ್ಲಿ ಮತ್ತೆ ಮತ್ತೆ ತೊಳೆದು, ಒಂದೆರೆಡು ಬಾರಿ ವಾಸನೆ ಹೋಗುವ ತನಕ ಕುದಿಸಿ ನೀರನ್ನು ಚೆಲ್ಲುತ್ತೀರಿ, ಚೆನ್ನಾಗಿ ತೊಳೆಯುವುದು ಮುಖ್ಯ ತೊಳೆಯದಿದ್ದರೆ ಗ್ರೇವಿ ತಯಾರಿಸಿದ ನಂತರ ಕೆಟ್ಟ ವಾಸನೆ ಬರುತ್ತದೆ.
ಈರುಳ್ಳಿ ಖಾರಕ್ಕೆ : ಈರುಳ್ಳಿ, ಕೊತ್ತಂಬರಿ, ಪುದೀನ, ಅರಿಶಿನ ಪುಡಿ, ಶುಂಠಿ, ಬೆಳ್ಳುಳ್ಳಿಗೆ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.
ಮಸಾಲೆಗೆ : ಟೊಮ್ಯಾಟೊ, ಧನಿಯಾಪುಡಿ, ಖಾರದಪುಡಿ, ಪೆಪ್ಪರ್ ಪುಡಿ, ಕಾಯಿ, ಗರಂಮಸಾಲೆಗೆ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಚೆನ್ನಾಗಿ ತೊಳೆದ ಬೋಟಿಯನ್ನು ಹಾಕಿ ಉಪ್ಪನ್ನು ಬೆರೆಸಿ ಸ್ವಲ್ಪ ಉಪ್ಪು ಹಿಡಿಯುವ ರೀತಿ ಫ್ರೈ ಮಾಡಿದ ಮೇಲೆ ಈರುಳ್ಳಿ ಖಾರ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 10 ವಿಷಲ್ ಹಾಕಿಸಿ ಆರಿದ ನಂತರ ಕುಕ್ಕರ್ ಮುಚ್ಚಳ ತೆಗೆದು ಹಸಿಅವರೇಕಾಳು, ಕತ್ತರಿಸಿದ ಆಲೂಗಡ್ಡೆ, ಬಾಳೆಕಾಯಿ ಮತ್ತು ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಸಾಲೆ ಬೋಟಿಗೆ ಹಿಡಿಯುವ ತನಕ ಚೆನ್ನಾಗಿ ಬೇಯಿಸಿ ಬೆಂದ ನಂತರ ಬೇಕೆಂದರೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

ಮೇಕೆ ಕೈಮಾ ಉಂಡೆ ತೊಗರಿಕಾಳು ಸಾರು

ಮೇಕೆ ಕೈಮಾ ಉಂಡೆ ತೊಗರಿಕಾಳು ಸಾರು

ಮೇಕೆ ಕೈಮಾ ಉಂಡೆ ತೊಗರಿಕಾಳು ಸಾರು

ಬೇಕಾಗುವ ಸಾಮಗ್ರಿಗಳು: ಮೇಕೆ ಕೈಮಾ ಮಾಂಸ 1/2 ಕೆ.ಜಿ ಹಸಿ ತೊಗರಿಕಾಳು 1 ಕಪ್ ಶುಂಠಿ 2 ಇಂಚು ಉದ್ದದ್ದು ಬೆಳ್ಳುಳ್ಳಿ 2 ಉಂಡೆ ಕೊತ್ತಂಬರಿ ಸೊಪ್ಪು ಸ್ವಲ್ಪ ಪುದೀನ ಸೊಪ್ಪು ಸ್ವಲ್ಪ ಹುರಿ ಕಡ್ಲೆ 4 ಚಮಚ ಧನಿಯಾ ಪುಡಿ 4 ಚಮಚ ಖಾರಪುಡಿ 3 ಚಮಚ ಅರಿಶಿನ ಪುಡಿ ಸ್ವಲ್ಪ ಗರಂ ಮಸಾಲೆ ಸ್ವಲ್ಪ ಚಕ್ಕೆ 2 ಇಂಚು ಲವಂಗ 8 ಮೆಣಸು 10 ಈರುಳ್ಳಿ 1 ಟೊಮ್ಯಾಟೊ 2 ಕಾಯಿ ಅರ್ಧ ಹೋಳು ಸಾಸಿವೆ ಎಣ್ಣೆ ತುಪ್ಪ ಉಪ್ಪು ರುಚಿಗೆ ತಕ್ಕಷ್ಟು. ‌

ತಯಾರಿಸುವ ವಿಧಾನ:

ಈರುಳ್ಳಿ 2 ಚಕ್ಕೆ ಲವಂಗ ಮೆಣಸು ಕೊತ್ತಂಬರಿ ಸೊಪ್ಪು ಕಾಯಿ ಪುದೀನ ಅರಿಶಿನ ಪುಡಿ ಹುರಿ ಕಡ್ಲೆ ಶುಂಠಿ ಬೆಳ್ಳುಳ್ಳಿ ಧನಿಯಾ ಪುಡಿ 2 ಚಮಚ ಖಾರದಪುಡಿ 2 ಚಮಚ ಅರಿಶಿನ ಪುಡಿ ಸ್ವಲ್ಪ ಹರಳುಪ್ಪು ಹಾಕಿ ನೀರು ಹಾಕದೆ ರುಬ್ಬಿಟ್ಟುಕೊಳ್ಳಿ.ರುಬ್ಬಿದ ಮಿಶ್ರಣದಲ್ಲಿ ಕಾಲು ಭಾಗವನ್ನು ತೆಗೆದುಕೊಂಡು ಅದಕ್ಕೆ ಮೇಕೆ ಕೈಮಾ ಮಾಂಸ ಹಾಕಿ ನೀರು ಬೆರಸದೆ ಮಾಂಸ ಮತ್ತು ಖಾರ ಬೆರೆಯುವಂತೆ ಮಿಕ್ಸಿಯಲ್ಲಿ ರುಬ್ಬಿಕೊಂಡು ನಂತರ ಸಣ್ಣ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ.ಉಳಿದ ಮುಕ್ಕಾಲು ಭಾಗ ರುಬ್ಬಿದ ಮಿಶ್ರಣಕ್ಕೆ ಗರಂ ಮಸಾಲೆ ಧನಿಯಾ ಪುಡಿ 2 ಚಮಚ ಖಾರದಪುಡಿ 1 ಚಮಚ ಈರುಳ್ಳಿ 1 ಟೊಮ್ಯಾಟೊ ಮತ್ತು ನೀರು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.ಫ್ರೈ ಪ್ಯಾನ್‌ಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿದ ಮೇಲೆ ರುಬ್ಬಿದ ಖಾರ ಮಿಶ್ರಣ ಹಸಿ ತೊಗರಿಕಾಳು ಮತ್ತು ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಖಾರ ಕುದಿಯಲು ಬಿಡಿ ನಂತರ ಉಂಡೆಗಳನ್ನು ಹಾಕಿದ ನಂತರ ಸ್ವಲ್ಪ ಸಮಯ ತಿರುಗಿಸದೆ ಮುಚ್ಚಳ ಮುಚ್ಚಿ ಬೇಯಿಸಿ ಆಮೇಲೆ ಸಾಂಬಾರು ತಿರುಗಿಸಿ ಚೆನ್ನಾಗಿ ಬೇಯಿಸಿ.

ಚಿಕನ್ ಗಿಝರ್ಡ್ ಫ್ರೈ

ಚಿಕನ್ ಗಿಝರ್ಡ್ ಫ್ರೈ

ಚಿಕನ್ ಗಿಝರ್ಡ್ ಫ್ರೈ

ಬೇಕಾಗುವ ಸಾಮಗ್ರಿಗಳು: ಚಿಕನ್ ಗಿಝರ್ಡ್ ಒಂದು ಕೆ.ಜಿ ಈರುಳ್ಳಿ 3 ಟೊಮ್ಯಾಟೊ 3 ಕೊತ್ತಂಬರಿ ಸೊಪ್ಪು ಸ್ವಲ್ಪ ಪುದೀನ ಸೊಪ್ಪು ಸ್ವಲ್ಪ ಹಸಿಮೆಣಸಿನ 2 ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ ಬೆಳ್ಳುಳ್ಳಿ 1 ಉಂಡೆ ಧನಿಯಾ ಪುಡಿ 2 ಚಮಚ ಖಾರದ ಪುಡಿ 2 ಚಮಚ ಗರಂ ಮಸಾಲೆ 1 ಚಮಚ ಜೀರಿಗೆ ಪುಡಿ ಸ್ವಲ್ಪ ಪೆಪ್ಪರ್ ಪುಡಿ ಸ್ವಲ್ಪ ಅರಿಶಿನ ಪುಡಿ ಸ್ವಲ್ಪ ಎಣ್ಣೆ ಸಾಸಿವೆ ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:

ಚಿಕನ್ ಗಿಝರ್ಡ್‌ ಅರಿಶಿನ ಪುಡಿಯಲ್ಲಿ ತೊಳೆದು ಸ್ವಲ್ಪ ಉಪ್ಪು ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಳ್ಳಿ.ಬಾಣಲಿಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿದ ಮೇಲೆ ಜಜ್ಜಿದ ಹಸಿಮೆಣಸಿನಕಾಯಿ ಬೆಳ್ಳುಳ್ಳಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ ಅರಿಶಿನ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿದ ಮೇಲೆ ಟೊಮ್ಯಾಟೊ ಬೇಯಿಸಿದ ಚಿಕನ್ ಗಿಝರ್ಡ್ ಕೊತ್ತಂಬರಿ ಪುದೀನಾ ಉಪ್ಪು ಹಾಕಿ ಸ್ವಲ್ಪ ಸಮಯ ಮುಚ್ಚಳ ಮುಚ್ಚಿ ಬೇಯಿಸಿ ನಂತರ ಧನಿಯಾಪುಡಿ ಖಾರದಪುಡಿ ಪೆಪ್ಪರ್‌ಪುಡಿ ಜೀರಿಗೆ ಪುಡಿ ಮತ್ತು ಗರಂಮಸಾಲೆ ಹಾಕಿ ಚೆನ್ನಾಗಿ ಕುದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT