ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒವನ್ ಇಲ್ಲದೆ ಕುಕೀಸ್ ತಯಾರಿಸಿ

Last Updated 26 ಜುಲೈ 2020, 19:30 IST
ಅಕ್ಷರ ಗಾತ್ರ

ಮಳೆಗಾಲದ ಸಂಜೆಯಲ್ಲಿ ಏನಾದರೂ ತಿನ್ನಲು ಇದ್ದರೆ ಎಷ್ಟು ಹಿತ ಅಲ್ಲವೇ? ಅದರಲ್ಲೂ ಈಗ ಕೊರೊನಾ ಕಾರಣದಿಂದ ಹೊರಗಡೆ ತಿನ್ನಲು ಭಯ. ಹಾಗಂತ ತಿನ್ನದೇ ಸುಮ್ಮನೆ ಕೂರಲೂ ಆಗದು. ಅದಕ್ಕಾಗಿ ಮನೆಯಲ್ಲೇ ತಿಂಡಿಗಳನ್ನು ತಯಾರಿಸಿದರೆ ಹೇಗೆ? ಅದರಲ್ಲೂ ಬೇಕರಿಯಲ್ಲಿ ಸಿಗುವ ಕುಕೀಸ್ ಎಂದರೆ ಬಹುತೇಕರಿಗೆ ಬಹಳ ಪ್ರೀತಿ. ಕುಕೀಸ್ ತಂದು ತಿನ್ನೋದು ಕಷ್ಟ, ಮನೆಲೇ ಮಾಡೋಣ ಅಂದ್ರೆ ಒವನ್ ಕೂಡ ಇಲ್ಲ ಎಂಬ ಚಿಂತೆ ಬೇಡ. ಒವೆನ್ ಇಲ್ಲದೇ ಕುಕೀಸ್ ತಯಾರಿಸೋ ರೆಸಿಪಿ ಇಲ್ಲಿದೆ. ಇದನ್ನು ತಯಾರಿಸುವ ವಿಧಾನವನ್ನು ಹಂಚಿಕೊಂಡಿದ್ದಾರೆ ಫುಡ್ ಬ್ಲಾಗರ್ ರೇಶು ಡ್ರೊಲಿಯ.

ಬೇಕಾಗುವ ಸಾಮಗ್ರಿಗಳು

ಉಗುರು ಬೆಚ್ಚಗಿನ ನೀರು – 2 ಟೇಬಲ್ ಚಮಚ
ಕಾಫಿಪುಡಿ – 1/2 ಟೀ ಚಮಚ
ಬೆಣ್ಣೆ– 50 ಗ್ರಾಂ
ಸಕ್ಕರೆಪುಡಿ – 50 ಗ್ರಾಂ
ಕಾರ್ನ್‌ಫ್ಲೋರ್‌ – 1 ಟೀ ಚಮಚ
ಮೈದಾಹಿಟ್ಟು – 1/2 ಕಪ್‌
ಅಡುಗೆಸೋಡಾ – ಚಿಟಿಕೆ
ಕೊಕೊವಾ ಪುಡಿ – 3 ಟೇಬಲ್ ಚಮಚ

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ಉಗುರು ಬೆಚ್ಚಗಿನ ನೀರು ಹಾಕಿ ಅದಕ್ಕೆ ಕಾಫಿಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಕಡೆ ಇಡಿ. ಮತ್ತೊಂದು ಬೌಲ್‌ನಲ್ಲಿ ಬೆಣ್ಣೆ ಹಾಕಿ ಅದಕ್ಕೆ ಸಕ್ಕರೆಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಕ್ರೀಮ್‌ ತಯಾರಿಸಿಕೊಳ್ಳಿ. ಅದಕ್ಕೆ ಕಾರ್ನ್‌ಫ್ಲೋರ್, ಮೈದಾಹಿಟ್ಟು, ಅಡುಗೆಸೋಡಾ ಹಾಗೂ ಕೊಕೊವಾ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ. ಮೊದಲೇ ತಯಾರಿಸಿಟ್ಟುಕೊಂಡ ಕಾಫಿಪುಡಿಯ ಮಿಶ್ರಣವನ್ನು ಅದಕ್ಕೆ ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ ಹಿಟ್ಟು ಸಿದ್ಧಪಡಿಸಿ.

ನಿಮಗೆ ಬೇಕಾದ ಆಕಾರದ ಕುಕೀಸ್‌ ತಯಾರಿಸಿಕೊಳ್ಳಿ. ನಂತರ ಸ್ಟೀಲ್ ತಟ್ಟೆಗೆ ಎಣ್ಣೆ ಹಚ್ಚಿ ಅದರ ಮೇಲೆಕುಕೀಸ್‌ ಅನ್ನು ಒಂದಕ್ಕೊಂದು ತಾಕದಂತೆ ಇಡಿ. ಈಗ ಪಾತ್ರೆಯೊಂದನ್ನು ತೆಗೆದುಕೊಂಡು ಉಪ್ಪು ಹಾಕಿ, ಅದರ ಮೇಲೆ ಸ್ಟ್ಯಾಂಡ್‌ ರೀತಿಯ ಪಾತ್ರೆಯನ್ನು ಇರಿಸಿ. ಪಾತ್ರೆಯ ಮುಚ್ಚಳ ಮುಚ್ಚಿ. ಕನಿಷ್ಠ 8 ರಿಂದ 10 ನಿಮಿಷ ಗ್ಯಾಸ್‌ ಮೇಲಿಡಿ. ನಂತರ ಆ ಸ್ಟ್ಯಾಂಡ್ ಮೇಲೆ ಕುಕ್ಕೀಸ್ ಇರಿಸಿದ ಪ್ಲೇಟ್‌ ಅನ್ನು ಇರಿಸಿ ಮುಚ್ಚಳ ಮುಚ್ಚಿ 20 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಈಗ ನಿಮ್ಮ ಮುಂದೆ ಒವೆನ್‌ ಇಲ್ಲದೇ ಬಿಸಿಬಿಸಿಯಾದ, ರುಚಿರುಚಿ ಕುಕೀಸ್‌ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT